ಎಲ್ಲರೂ ರಸ್ತೆ ನಿಯಮ ಪಾಲಿಸಿ: ಯದ್ದಲಗುಡ್ಡ

| Published : Apr 01 2024, 12:51 AM IST

ಸಾರಾಂಶ

ಕರ್ನಾಟಕ ವಿದ್ಯಾವರ್ಧಕ ಸಂಘದ ಯುವ ಜನ ಮಂಟಪ ಕಲಘಟಗಿಯ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಗುಡ್‌ನ್ಯೂಜ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಗಂಭ್ಯಾಪುರದಲ್ಲಿ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಕಾನೂನು ಅರಿವು’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ಯಮ ಪಾಲಿಸಿ ಎಂದು ಕಲಘಟಗಿ ತಾಲೂಕಿನ ಪಿಎಸ್ಐ ಬಸವರಾಜ ಯದ್ದಲಗುಡ್ಡ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಯುವ ಜನ ಮಂಟಪ ಕಲಘಟಗಿಯ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಗುಡ್‌ನ್ಯೂಜ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಗಂಭ್ಯಾಪುರದಲ್ಲಿ ಆಯೋಜಿಸಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಕಾನೂನು ಅರಿವು’ಕುರಿತು ಉಪನ್ಯಾಸ ನೀಡಿದರು.

ಯುವಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು, ಕಾರು ಚಲಾಯಿಸುವಾಗ ಸಿಟ್ ಬೆಲ್ಟ್‌ ಹಾಕಬೇಕು. ಕಾನೂನು ಇರುವುದು ಜನರ ಸುರಕ್ಷತೆಗಾಗಿ. ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಎಲ್ಲರೂ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದರು.

ಆನ್‌ಲೈನ್‌ ವಂಚನೆ ಬಗ್ಗೆ ವಿವರಿಸಿದ ಅವರು, ಅನಾವಶ್ಯಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೊತ್ತಿಲ್ಲದವರ ಜತೆಗೆ ವ್ಯವಹಾರ ಇಟ್ಟುಕೊಳ್ಳವುದು ವಂಚನೆಗೆ ದಾರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ, ಹಿಂದಿನ ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಸೇರಿದಂತೆ ಹಲವರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಶಾಂತಲಾ ಸಂಶಿಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನೀಲಮ್ಮ ಕಲಕೇರಿ ಕಾರ್ಯಕ್ರಮ ನಿರೂಪಿಸಿದರು.

ಎನ್.ಎಸ್.ಎಸ್‌. ಕಾರ್ಯಕ್ರಮಾಧಿಕಾರಿ ಮಹಾದೇವ ಉಳ್ಳಾಗಡ್ಡಿ, ಉಪನ್ಯಾಸಕರಾದ ಅಕ್ಷತಾ ಕುಬಿಹಾಳ, ಎನ್.ಎಂ. ನಿಂಬಣ್ಣವರ, ರೆಹಮಾನಸಾಬ ಗೋಳಲ್ಲಿ ಹಾಗೂ ಸ್ವಯಂ ಸೇವಕರು ಊರಿನ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.

ನಂತರ ಹರ್ಲಾಪುರದ ಶಂಭಯ್ಯ ಹಿರೇಮಠ, ಸಿ.ವೈ.ಸಿ.ಡಿ. ಕಲಾ ಸಂಘ, ಹರ್ಲಾಪೂರ ಹಾಗೂ ತಂಡದವರು ಜಾನಪದ ಸಂಭ್ರಮದಲ್ಲಿ ಅನೇಕ ಜಾಗೃತಿ ಗೀತೆ ಹಾಡಿದರು. ಬಳಿಕ ಹಾಸ್ಯ ಕಾರ್ಯಕ್ರಮ ನಡೆಯಿತು.