ನೆಲಮಂಗಲ: ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಪರಸ್ಪರ ಸಹಕಾರ ಅಗತ್ಯ. ಒಗ್ಗಟ್ಟಿನಿಂದಲೇ ಸಂಘ ಪ್ರಸ್ತುತ ಆರ್ಥಿಕ ವರ್ಷದಲ್ಲಿ 2 ಕೋಟಿ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಶ್ರೀ ರುದ್ರೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ನಟರಾಜು ಹೇಳಿದರು
ನೆಲಮಂಗಲ: ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಪರಸ್ಪರ ಸಹಕಾರ ಅಗತ್ಯ. ಒಗ್ಗಟ್ಟಿನಿಂದಲೇ ಸಂಘ ಪ್ರಸ್ತುತ ಆರ್ಥಿಕ ವರ್ಷದಲ್ಲಿ 2 ಕೋಟಿ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಶ್ರೀ ರುದ್ರೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ನಟರಾಜು ಹೇಳಿದರು.
ನಗರದ ಕವಾಡಿ ಮಠದಲ್ಲಿ ಶ್ರೀರುದ್ರೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 24ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘವನ್ನು ಪ್ರಾರಂಭಿಸುವ ವೇಳೆ ಷೇರುಬಂಡಾವಾಳಕ್ಕಾಗಿ ಸಾಕಷ್ಟು ಸದಸ್ಯರ ಮನವೊಲಿಸಿ ಕಷ್ಟಪಟ್ಟು ಸಂಘವನ್ನು ಕಟ್ಟಿದ್ದರಿಂದ ಸಂಘ ಇಂದು ಈ ಮಟ್ಟಕ್ಕೆ ಬೆಳೆದಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಯ ಕಾರ್ಯವೈಖರಿ ಶ್ಲಾಘನೀಯ. ಪ್ರತಿಯೊಬ್ಬ ಸದಸ್ಯರೂ ಸಂಘದ ಆಗುಹೋಗುಗಳಿಗೆ ಜವಾಬ್ದಾರರು ಎಂದು ತಿಳಿಸಿದರು.ಶ್ರೀರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್.ಬಿ.ದಯಾಶಂಕರ್ ಮಾತನಾಡಿ, 2003ರಲ್ಲಿ ಪ್ರಾರಂಭವಾದ ಸಂಘದಲ್ಲಿ ಮೊದಲಲ್ಲಿ ಸದಸ್ಯರಿಗೆ ಸಾಲ ನೀಡಲು ಕಷ್ಟಪಡಬೇಕಿತ್ತು. ಆದರೆ ಸಂಘದ ಪ್ರಸ್ತುತ ಆರ್ಥಿಕ ಸ್ಥಿತಿಗತಿ ಸದೃಢವಾಗಿದೆ. ಸಂಘದ ಆಡಳಿತ ಮಂಡಳಿತ ಮೇಲೆ ವಿಶ್ವಾಸವಿಟ್ಟು ಸದಸ್ಯರು ತಮ್ಮ ದುಡಿಮೆಯನ್ನು ಠೇವಣಿಯಾಗಿಟ್ಟಿದ್ದಾರೆ. ಸಾಲ ಕೊಡುವುದಷ್ಟೇ ಅಲ್ಲಾ ವಸೂಲಾತಿಯನ್ನು ಸಹ ಕಠಿಣವಾಗಿಯೇ ಮಾಡಲಾಗುತ್ತಿದೆ. ಮುಂದಿನ ವರ್ಷ ಸಂಘಕ್ಕೆ ನೂತನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಸದಸ್ಯರು ಸಹಕರಿಸಬೇಕು. ಸಂಘಕ್ಕೆ ಪ್ರಸ್ತುತ ವರ್ಷ ಶೇ.25ರಷ್ಟು ಲಾಭ ಬಂದಿದ್ದು, ಸಮರ್ಪಕವಾಗಿ ವಿಲೇವಾರಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್.ದಾಕ್ಷಾಯಣಿ, ನಿರ್ದೇಶಕರಾದ ಕೆ.ಸಿ.ಅಣ್ಣಪ್ಪ, ಎನ್.ವಿ.ಮಂಜುನಾಥ್, ಡಾ.ರಾಜೇಂದ್ರಪ್ರಸಾದ್, ವಿ.ರಂಗಯ್ಯ, ಎನ್.ಗಂಗರಾಜು, ಎಸ್.ರಾಮಯ್ಯ, ಬಿ.ಎನ್.ರಾಮಯ್ಯ, ಬಿ.ಎನ್.ರವಿಕುಮಾರ್, ಎನ್.ಎಸ್.ನಿರ್ಮಲ, ಜಯಶ್ರೀವಿಜಯ್, ಟೌನ್‌ಸೊಸೈಟಿ ಮಾಜಿ ಅಧ್ಯಕ್ಷ ಜಯದೇವಯ್ಯ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ಗುತ್ತಿಗೆದಾರ ಬಸವರಾಜು ಮತ್ತಿತರರು ಉಪಸ್ಥಿತಿರಿದ್ದರು.ಪೊಟೊ-20ಕೆಎನ್‌ಎಲ್‌ಎಮ್4-
ನೆಲಮಂಗಲದಲ್ಲಿ ಶ್ರೀ ರುದ್ರೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 24ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ನಟರಾಜು, ಅಧ್ಯಕ್ಷ ಎನ್.ಬಿ.ದಯಾಶಂಕರ್ ಮಾತನಾಡಿದರು.