ಜೀತ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ

| Published : Feb 10 2024, 01:50 AM IST

ಸಾರಾಂಶ

೧೯೭೬ರಲ್ಲಿ ಜೀತ ನಿರ್ಮೂಲನಾ ಕಾಯ್ದೆಗಳನ್ನು ಜಾರಿಗೆ ಬಂದಿದ್ದರೂ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದೆ ಇನ್ನು ಜೀವಂತವಾಗಿರುವ ಪ್ರಕಣಗಳು ಕಂಡು ಬರುತ್ತಿರುವುದು ದುರಂತದ ಸಂಗತಿಯಾಗಿದೆ. ಜೀತಕ್ಕೆ ಇಟ್ಟುಕೊಂಡ ಮಾಲೀಕರಿಗೆ 10 ವರ್ಷ ಜೈಲು ಶಿಕ್ಷೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯನ್ನು ಜೀತಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್. ಹೊಸಮನಿ ಮನವಿ ಮಾಡಿದರು.

ನಗರದ ಜಿಲ್ಲಾ ಆಡಳಿತ ಕಚೇರಿಯ ಆಡಿಟೋರಿಯಂನಲ್ಲಿ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಜೀತ ಪದ್ಧತಿಯೂ ಇನ್ನೂ ಜೀವಂತ ಇರುವುದು ಕಳವಳಕಾರಿಯಾಗಿದೆ ಎಂದರು.

ಮಾಲೀಕರಿಗೆ 10 ಪರ್ಷ ಜೈಲು

ಕಳೆದ ೧೯೭೬ರಲ್ಲಿ ಜೀತ ನಿರ್ಮೂಲನಾ ಕಾಯ್ದೆಗಳನ್ನು ಜಾರಿಗೆ ಬಂದಿದ್ದರೂ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದೆ ಇನ್ನು ಜೀವಂತವಾಗಿರುವ ಪ್ರಕಣಗಳು ಕಂಡು ಬರುತ್ತಿರುವುದು ದುರಂತದ ಸಂಗತಿಯಾಗಿದೆ. ಜೀತಕ್ಕೆ ಇಟ್ಟುಕೊಂಡ ಮಾಲೀಕರಿಗೆ ಕಾನೂನಿನ ಪ್ರಕಾರ ೩ ವರ್ಷ ಜೈಲು ಮತ್ತು ದಂಡ ವಿಧಿಸಬಹುದಾಗಿತ್ತು. ಈಗ ೧೦ ವರ್ಷ ಜೈಲುವಾಸ ವಿಧಿಸಬಹುದಾಗಿದೆ ಎಂದು ಹೇಳಿದರು.

ಜೀತ ಪದ್ಧತಿಯು ಕೇವಲ ಬಾಲಕಾರ್ಮಿಕ ಕಾಯ್ದೆ, ಪೊಲೀಸ್ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ಮಾತ್ರ ಒಳಪಡದೆ ಹಲವು ಇಲಾಖೆಗಳ ವ್ಯಾಪ್ತಿಗೆ ಸೇರಿದೆ, ಇದಕ್ಕೆ ಸೂಕ್ತವಾದ ಕ್ರಮ ಹಾಗೂ ಪರಿಹಾರ ನೀಡಲಾಗುವುದು, ಜೀತ ಪದ್ಧತಿಗೆ ಒಳಪಟ್ಟವರ ಮಾಹಿತಿ ತಿಳಿದ ಕೂಡಲೇ ಪ್ರಕರಣ ದಾಖಲಿಸಿಕೊಂಡು ಪುನರ್ ವಸತಿ ಕಲ್ಪಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನತೆಯಿಂದ ಮುಕ್ತವಾಗಿ ಜೀವಿಸುವಂತ ಅವಕಾಶವಿದೆ ಎಂದರು.

ಹೊರ ರಾಜ್ಯದವರೇ ಹೆಚ್ಚು

ರಾಜ್ಯದಲ್ಲಿ ಬಹುತೇಕ ಹೊರರಾಜ್ಯದ ಅನಕ್ಷಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜೀತಕ್ಕೆ ಒಳಪಡುವುದು ಕಂಡು ಬರುತ್ತದೆ, ಸಾಮಾನ್ಯವಾಗಿ ಇಟ್ಟಿಗೆ ಕಾರ್ಖಾನೆಗಳಲ್ಲಿ, ಕಲ್ಲು ಗಣಿಗಾರಿಕೆ, ಕೃಷಿ, ತೋಟಗಾರಿಕೆಗಳು ಸೇರಿದಂತೆ ಮುಂತಾದ ಶ್ರಮದ ಕೆಲಸಗಳಲ್ಲಿ ಜೀತ ಪದ್ದತಿಗಳು ಕಾಣುವಂತೆ ಇತ್ತು, ಇತ್ತೀಚೆಗೆ ಕಡಿಮೆಯಾಗಿದ್ದರೂ ಜೀತದಿಂದ ಮುಕ್ತವಾಗಿಲ್ಲ, ಜೀತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕಾರ ನೀಡುವ ಮೂಲಕ ಕೈಜೋಡಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೀತ ನಿರ್ಮೂಲನೆಯ ಪ್ರಮಾಣ ವಚನ ಜಿಲ್ಲಾಧಿಕಾರಿ ಅಕ್ರಂಪಾಷ ಬೋಧಿಸಿದರು. ಎಡಿಸಿ ಶಂಕರ್ ವಾಣಿಕ್ಯಳ್, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಚುನಾವಣಾ ಮಾಹಿತಿಯ ಸಂಪನ್ಮೂಲ ವ್ಯಕ್ತಿ ಅಮೀರ್ ಪಾಷ, ಇದ್ದರು.