ಸಾರಾಂಶ
ಸಂವಿಧಾನ ಇರುವುದರಿಂದಲೇ ಪ್ರತಿಯೊಬ್ಬರ ಜೀವನ ಹಸನಾಗಿದೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಂವಿಧಾನ ಇರುವುದರಿಂದಲೇ ಪ್ರತಿಯೊಬ್ಬರ ಜೀವನ ಹಸನಾಗಿದೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆದರೆ ಮಾತ್ರ ಸಂವಿಧಾನದ ಆಶಯ ಈಡೇರಲಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಟಿ.ವೆಂಕಟರಾಮ್ ಮಾತನಾಡಿ, ಅಂಬೇಡ್ಕರ್ ವ್ಯಕ್ತಿಯಲ್ಲ, ಅವರೊಂದು ಜ್ಞಾನದ ಪರ್ವತ. ಸಾಮಾಜಿಕ ಚಿಂತಕ, ಆರ್ಥಿಕ, ಕಾನೂನು ತಜ್ಞರಾಗಿದ್ದ ಅವರು ಬಹುಮುಖ ಪ್ರತಿಭೆ ಎಂದು ಗುಣಗಾನ ಮಾಡಿದರು.ಈ ಸಂಧರ್ಭದಲ್ಲಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ತಾಪಂ ಇಒ ಶಿವರಾಜಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಲ್.ತ್ರಿವೇಣಿ, ಸಹಾಯಕ ಇಂಜಿನಿಯರ್ ನರಸಿಂಹಮೂರ್ತಿ, ಪಪಂ ಸದಸ್ಯ ಚಿದಾನಂದ್, ಮುಖಂಡರಾದ ದಂಡಿನಶಿವರ ಕುಮಾರ್, ಡಾ.ಚಂದ್ರಯ್ಯ, ಆದಿಜಾಂಬವ ಸಂಘದ ಅಧ್ಯಕ್ಷ ಮೂರ್ತಿ, ಬಡಾವಣೆ ಶಿವರಾಜ್, ಸೋಮೇನಹಳ್ಳಿ ಜಗದೀಶ್, ಬಾಣಸಂದ್ರ ಕೃಷ್ಣ ಮಾದಿಗ, ಬೀಚನಹಳ್ಳಿ ರಾಮಣ್ಣ, ಹುಳಿಸಂದ್ರ ಧನಂಜಯ, ಡೊಂಕಿಹಳ್ಳಿ ರಾಮಣ್ಣ, ಕುಣಿಕೇನಹಳ್ಳಿ ಜಗದೀಶ್, ಬೋರಪ್ಪ ಸೇರಿ ಇತರರಿದ್ದರು.