ಎಲ್ಲರೂ ಅಂಬೇಡ್ಕರ್‌ ಆದರ್ಶ ಅಳವಡಿಸಿಕೊಳ್ಳಬೇಕು: ಬಿಜೆಪಿ ಮಂಡಲದ ಎಚ್.ಸಿ.ಮಹೇಶ್

| Published : Apr 28 2025, 12:49 AM IST

ಎಲ್ಲರೂ ಅಂಬೇಡ್ಕರ್‌ ಆದರ್ಶ ಅಳವಡಿಸಿಕೊಳ್ಳಬೇಕು: ಬಿಜೆಪಿ ಮಂಡಲದ ಎಚ್.ಸಿ.ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ನಾಗರಿಕರು ಗೌರವದಿಂದ, ಸ್ವಾತಂತ್ರ್ಯ, ಸಮನತೆಯಿಂದ ಬದುಕುವಂತೆ ಆವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಿಜೆಪಿ ಮಂಡಲ್ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಹೇಳಿದರು.

ಡಾ.ಅಂಬೇಡ್ಕರ್‌ ಜಯಂತಿ । ಅಂಬೇಡ್ಕರ್‌ ಯುವಕರ ಬಳಗ ಆಯೋಜನೆ

ಕನ್ನಡಪ್ರಭ ವಾರ್ತೆ ಜಗಳೂರು

ಪ್ರತಿಯೊಬ್ಬ ನಾಗರಿಕರು ಗೌರವದಿಂದ, ಸ್ವಾತಂತ್ರ್ಯ, ಸಮನತೆಯಿಂದ ಬದುಕುವಂತೆ ಆವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಿಜೆಪಿ ಮಂಡಲ್ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಹೇಳಿದರು.

ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಯುವಕರ ಬಳಗದಿಂದ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು

ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ ಮಾತನಾಡಿ, ಅಂಬೇಡ್ಕರ್ ಯುವ ಸೇನಾನಿಗಳು ಅವರ ತತ್ವದರ್ಶಗಳನ್ನ ಪಾಲಿಸುವಂತಾಗಬೇಕು. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಾರಾಟವಾಗಬಾರದು. ಕೇವಲ ಚುನಾವಣೆಗಳಲ್ಲಿ ತಮ್ಮ ಗ್ರಾಮಗಳಿಗೆ ಬರುವ ರಾಜಕಾರಣಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ. ಮಹಿಳೆಯರು ಅಂಬೇಡ್ಕರ್ ವಿಚಾರಗಳ ಬಗ್ಗೆ ತಿಳಿದರೆ ತಮ್ಮ ಮಕ್ಕಳಿಗೆ ತಿಳಿಸುವರು. ಗ್ರಾಮದ ಮಹಿಳಾ ಸಂಘದ ಪಾದಾಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ತಪ್ಪದೇ ಬಾಗವಹಿಸುವಂತೆ ಕರೆ ನೀಡಿದರು.

ಅಂಬೇಡ್ಕರ್ ಪುತ್ಥಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಈ ದೇಶದ ಮಹಾನ್ ಮಾನವತಾವಾದಿ ಜಯಂತಿಯನ್ನು ವಿಶ್ವದಾದ್ಯಂತ ಅಚರಣೆ ಮಾಡುವ ಮೂಲಕ ಆ ಮಹಾನ್ ನಾಯಕನ ಜಯಂತಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಇತ್ತಿಚೀನ ದಿನಗಳಲ್ಲಿ ಅವರು ಕೊಟ್ಟಂತಹ ಮೀಸಲಾತಿಯಡಿ ಗೆದ್ದ ನಮ್ಮ ಕ್ಷೇತ್ರದ ಶಾಸಕರು, ವಿವಿಧ ಜನಪ್ರತಿನಿಧಿಗಳು ಅಂಬೇಡ್ಕರ್ ಜಯಂತಿಗೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಜಯಂತಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೂ ನಮ್ಮ ಬಗ್ಗೆ ಅಸಡ್ಡೆ ಭಾವನೆ ತೊರೆಯಬೇಕು ಎಂದು ಸಲಹೆ ನೀಡಿದರು.

ಆಲೂರು ಬಸವರಾಜಪ್ಪ ಉಪಾನ್ಯಾಸ ಮಂಡಿಸಿ ಮಾತನಾಡಿ, ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದೆ. ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅಂಬೇಡ್ಕರ್ ರವರನ್ನ ಕಾಣುವಂತಾಗಬೇಕಾಗಿದೆ ಎಂದರು.

ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜಣ್ಣ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯಾವುದೇ ಜಾತಿ, ಮತ, ಪಂಥ ಮತ್ತು ಧರ್ಮ ಎನ್ನದೇ ನಾವೆಲ್ಲರೂ ಒಂದಾಗಿ ಬಾಳಬೇಕಿದೆ ಎಂದರು.

ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಗ್ರಾಪಂ ಸದಸ್ಯಬಿ.ವಿ.ವಿರೇಶ್, ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ, ಗ್ರಾಪಂ ಕಾರ್ಯಧರ್ಶಿ ಡಿ.ದುರುಗಪ್ಪ, ಮುಚ್ಚುನೂರು ಪರಶುರಾಮ, ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಮುಖಂಡ ಸೂರಗೊಂಡನಹಳ್ಳಿ ನಾಗರಾಜ್, ಮಾಜಿ ಗ್ರಾಪಂ ಸದಸ್ಯ ಕೆ.ವಿ.ಬಸವರಾಜ್, ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಯ್ಯ, ಅಂಬೇಡ್ಕರ್ ಯುವಕರ ಬಳಗದ ಪದಾಧಿಕಾರಿಗಳಾದ ಗಣೇಶ, ಡಿ.ವಿ.ಪ್ರಸನ್ನ, ರವಿಚಂದ್ರ, ಬೀಮಪ್ಪ, ಮಹಿಳಾ ಸಂಘದ ಸದಸ್ಯರಾದ ಚಂದ್ರಕಲಾ, ರೇಣುಕಮ್ಮ, ದುರುಗಮ್ ಸೇರಿ ಇತರರು ಇದ್ದರು.