ದಾಬಸ್‍ಪೇಟೆ: ಭಗವಾನ್ ಶ್ರೀಕೃಷ್ಣರು ಸಮಾಜಕ್ಕೆ ಒಳಿತಾಗುವಂತಹ ಅನೇಕ ಮೌಲ್ಯಯುತ ಸಂದೇಶಗಳನ್ನು ನೀಡಿದ್ದಾರೆ. ಅವರ ಜೀವನ, ಚಿಂತನೆ ಹಾಗೂ ಭಗವದ್ಗೀತೆಯಲ್ಲಿನ ಬೋಧನೆಗಳು ಇಂದಿಗೂ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ವಿವೇಕಾನಂದ ವಿದ್ಯಾಮಂದಿರ ಶಾಲೆ ಸಂಸ್ಥಾಪಕ ಅಧ್ಯಕ್ಷ ವಿರುಪಾಕ್ಷಯ್ಯ ತಿಳಿಸಿದರು
ದಾಬಸ್‍ಪೇಟೆ: ಭಗವಾನ್ ಶ್ರೀಕೃಷ್ಣರು ಸಮಾಜಕ್ಕೆ ಒಳಿತಾಗುವಂತಹ ಅನೇಕ ಮೌಲ್ಯಯುತ ಸಂದೇಶಗಳನ್ನು ನೀಡಿದ್ದಾರೆ. ಅವರ ಜೀವನ, ಚಿಂತನೆ ಹಾಗೂ ಭಗವದ್ಗೀತೆಯಲ್ಲಿನ ಬೋಧನೆಗಳು ಇಂದಿಗೂ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ವಿವೇಕಾನಂದ ವಿದ್ಯಾಮಂದಿರ ಶಾಲೆ ಸಂಸ್ಥಾಪಕ ಅಧ್ಯಕ್ಷ ವಿರುಪಾಕ್ಷಯ್ಯ ತಿಳಿಸಿದರು. ಪಟ್ಟಣದ ವಿವೇಕಾನಂದ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಕೃಷ್ಣರು ನೀಡಿರುವ ಆದರ್ಶ ಚಿಂತನೆಗಳು ಹಾಗೂ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಮಹಾಭಾರತದ ಮೂಲಕ ಸಮಾಜದಲ್ಲಿ ಅನ್ಯಾಯ, ಅಧರ್ಮ ಹಾಗೂ ಅಸತ್ಯಕ್ಕೆ ಎಂದಿಗೂ ಮಣಿಯಬಾರದು ಎಂಬ ಮಹತ್ವದ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸತ್ಯ, ಧರ್ಮ ಮತ್ತು ನ್ಯಾಯದ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದರು. ಆಡಳಿತಾಧಿಕಾರಿ ಕಿರಣ್ ಮಾತನಾಡಿ, ಇಂದಿನ ಯುವಜನತೆ ಶ್ರೀಕೃಷ್ಣನ ಸಂದೇಶಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ, ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಭಗವದ್ಗೀತೆಯನ್ನು ಕೇವಲ ಓದುವುದಷ್ಟೇ ಅಲ್ಲದೆ, ಅದರ ಸಾರವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.ಪೋಟೋ 3 :
ದಾಬಸ್‍ಪೇಟೆಯ ವಿವೇಕಾನಂದ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕೃಷ್ಣನ ವೇಷಭೂಷಣ ಧರಿಸಿರುವುದು.