ಪೋಕ್ಸೋ ಕಾನೂನು ಪ್ರತಿಯೊಬ್ಬರು ಅರಿತುಕೊಳ್ಳಿ

| Published : Nov 17 2025, 01:30 AM IST

ಸಾರಾಂಶ

012 ರ ಪೋಕ್ಸೋ ಕಾನೂನನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು

ಕೊಪ್ಪಳ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳಿಂದ ತಾಲೂಕಿನ ಮಂಗಳೂರು ಗ್ರಾಮದ ಶಾಲೆಯಲ್ಲಿ ಉಚಿತವಾಗಿ ಕಾನೂನು ಸಲಹೆ ಕಾರ್ಯಗಾರ ನಡೆಸಲಾಯಿತು.

ಕಾನೂನೂ ವಿದ್ಯಾರ್ಥಿ ಸಂಕಲ್ಪ ಮಾತನಾಡಿ, 2012 ರ ಪೋಕ್ಸೋ ಕಾನೂನನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು, ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಈ ಒಂದು ಕಾಯ್ದೆ ಜಾರಿಗೆಗೊಳಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಂದ ನಡೆದುಕೊಂಡರೆ ಅವರಿಗೆ ಕಾನೂನುಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದರು.

ಬಾಲ್ಯ ವಿವಾಹ ನಿಷೇಧ ಕುರಿತು ರವಿ ಆಗೋಲಿ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಲ್ಲಿ ಜಾರಿಗೆ ತರಲಾಯಿತು. 18 ವರ್ಷದೊಳಗಿನ ಹೆಣ್ಣು ಮಗುವಿಗೆ 21 ವರ್ಷದೊಳಗಿನ ಗಂಡು ಮಗುವಿಗೆ ಮದುವೆ ಮಾಡುವುದು ಕಾನೂನು ಬಾಹಿರವಾಗಿದೆ. ಅಪರಾಧಕ್ಕೆ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ ಸಹ ವಿಧಿಸಲಾಗುವುದು, ಬಾಲ್ಯ ವಿವಾಹ ಮಾಡುವುದರಿಂದ ಮಾನಸಿಕ, ದೈಹಿಕ, ಶಾರೀರಿಕವಾಗಿ ಎಲ್ಲ ರೀತಿಯ ಸಮಸ್ಯೆ ಅನುಭವಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಕೂಡ ಬಾಲ್ಯ ವಿವಾಹದ ಬಗ್ಗೆ ಜಾಗೃತರಾಗಬೇಕು, ಸದೃಢವಾದ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ತಯಾರಿರಬೇಕು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಮಾಹಿತಿ ತಿಳಿದುಕೊಂಡು ಮುನ್ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಡಳಿತ ಮಂಡಳಿ, ಗ್ರಾಮದ ಗುರು ಹಿರಿಯರು ಪಾಲಕರು ಉಪಸ್ಥಿತರಿದ್ದರು.