ಸಾರಾಂಶ
ಕಾವೇರಿ ನದಿ ತೀರದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ ನದಿಗಾಗಿ ಶುದ್ಧ ಮನಸ್ಸಿನಿಂದ ಎಲ್ಲರೂ ಸ್ವಚ್ಛತಾ ಬಗ್ಗೆ ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಕುಶಾಲನಗರ ಚಂದ್ರಮೋಹನ್ ಮನವಿ ಮಾಡಿದರು. ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ವಹ್ನಿಪುಕ್ಷರಣೆಯಲ್ಲಿ 132ನೇಯ ತಿಂಗಳ ಹುಣ್ಣಿಮೆಯ ಕಾವೇರಿ ಮಹಾ ಆರತಿಯನ್ನು ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಮತ್ತು ತಮಿಳುನಾಡು ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.
ರಾಮನಾಥಪುರ: ಕಾವೇರಿ ನದಿ ತೀರದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ ನದಿಗಾಗಿ ಶುದ್ಧ ಮನಸ್ಸಿನಿಂದ ಎಲ್ಲರೂ ಸ್ವಚ್ಛತಾ ಬಗ್ಗೆ ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಕುಶಾಲನಗರ ಚಂದ್ರಮೋಹನ್ ಮನವಿ ಮಾಡಿದರು.
ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ವಹ್ನಿಪುಕ್ಷರಣೆಯಲ್ಲಿ 132ನೇಯ ತಿಂಗಳ ಹುಣ್ಣಿಮೆಯ ಕಾವೇರಿ ಮಹಾ ಆರತಿಯನ್ನು ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಮತ್ತು ತಮಿಳುನಾಡು ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು. ಅಖಿಲ ಭಾರತ ಸನ್ಯಾಸಿ ಸಂಘ ಪ್ರಮುಖರಾದ ವೇದಾಂತನಂದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಯಾತ್ರೆಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ, ಹಾಸನ ಜಿಲ್ಲಾ ಕಾವೇರಿ ನದಿ ಸಮಿತಿ ಖಜಾಂಚಿ ರಘು, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಮುಂತಾದವರು ಭಾಗವಹಿಸಿದ್ದರು.