ಶೃಂಗೇರಿ, ನಮ್ಮ ಮನೆ, ಸುತ್ತಮುತ್ತಲ ವಾತಾವರಣ ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಸುತ್ತಮುತ್ತಲ ಪ್ರದೇಶದ ಪರಿಸರ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ಲಾಸ್ಟಿಕ್, ತ್ಯಾಜ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಿ.ಮಂಜುನಾಥ್ ಹೇಳಿದರು.
ಸ್ವಚ್ಚತಾ ಅಭಿಯಾನ್ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಶೃಂಗೇರಿನಮ್ಮ ಮನೆ, ಸುತ್ತಮುತ್ತಲ ವಾತಾವರಣ ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಸುತ್ತಮುತ್ತಲ ಪ್ರದೇಶದ ಪರಿಸರ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ಲಾಸ್ಟಿಕ್, ತ್ಯಾಜ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಿ.ಮಂಜುನಾಥ್ ಹೇಳಿದರು.
ಪಟ್ಟಣದ ಗಾಂಧಿ ಮೈದಾನದಲ್ಲಿ ರೋಟ್ರಾಕ್ಟ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಚತಾ ಅಭಿಯಾನ್ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನದಿ,ಕೆರೆ,ನೀರಿನ ತಾಣಗಳಿಗೆ ಕಸ, ತ್ಯಾಜ್ಯಗಳನ್ನು ಎಸೆಯಯಬಾರದು. ನದಿ ದಡಗಳಲ್ಲಿ ಕಸ ,ತ್ಯಾಜ್ಯಗಳನ್ನು ಸಂಗ್ರಹಿಸಿ ರಾಶಿ ಹಾಕಬಾರದು.ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ.ಇತ್ತಿಚೆನ ದಿನಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯಲಾಗುತ್ತದೆ. ತ್ಯಾಜ್ಯ ಹಾಕುವ ತೊಟ್ಟಿಗಳಿದ್ದರೂ, ನಾಮ ಫಲಕಗಳನ್ನು ಅಳವಡಿಸಿದ್ದರೂ ಲೆಕ್ಕೆಸದೇ ತ್ಯಾಜ್ಯ ರಾಶಿ ಹಾಕುತ್ತಾರೆ. ಇದರಿಂದ ಪರಿಸರ ಹಾಳಾಗುವ ಜೊತೆ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಲವು ರೋಗ ರುಜಿನಿಗಳಿಗೆ ಕಾರಣವಾಗುತ್ತದೆ. ಕಸ, ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲ ನದಿಗೆ ಸೇರುವುದರಿಂದ ನದಿಯಲ್ಲಿನ ನೀರು ಮಲೀನಗೊಳ್ಳುತ್ತದೆ. ಎಲ್ಲೆಂದರಲ್ಲಿ ಕಸ, ತ್ಯಾಜ್ಯ ರಾಶಿ ಗುಡ್ಡೆಹಾಕುವುದರಿಂದ ನೈರ್ಮಲ್ಯ ಕದಡುತ್ತದೆ. ಗ್ರಾಮ, ಪಟ್ಟಣದ ಬೀದಿಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯಗಳು ಎಲ್ಲೆಂದರಲ್ಲಿ ಎಸೆಯದಂತೆ ಜನಜಾಗೃತಿ ಮೂಡಿಸಬೇಕಿದೆ ಎಂದರು.
ನಮಗೆ ಉಸಿರಾಡಲು ಬೇಕಾದ ಗಾಳಿ, ಕುಡಿಯಲು ನೀರು, ಬದುಕಲು ಆಶ್ರಯ ನೀಡುವುದು ಪ್ರಕೃತಿ. ಪ್ರಕೃತಿ ಮುನಿದರೆ ಮನುಕುಲದ ವಿನಾಶ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಉಂಟಾಗುತ್ತಿರುವ ಪ್ರೃಕೃತಿ ವಿಕೋಪಗಳು, ನೆರೆ, ಪ್ರವಾಹ ಭೂಕುಸಿತ, ಗುಡ್ಡ ಕುಸಿತಗಳಿಗೆ ಪರಿಸರ ನಾಶ, ಮಾಲಿನ್ಯವೇ ಮುಖ್ಯ ಕಾರಣ. ನಾವು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.ರಾಷ್ಟ್ರೀಯ ಸೇವಾ ಯೋಜನೆ ಘಟಕ 2 ರ ಯೋಜನಾಧಿಕಾರಿ ರಾಘವೇಂದ್ರ ರೆಡ್ಡಿ, ಇತಿಹಾಸ ಉಪನ್ಯಾಸಕ ಎನ್.ಯು. ಅಬೂಬಕರ್, ರೋಟ್ರಾಕ್ಟ್ ಕ್ಲಬ್ ನ ಅಧ್ಯಕ್ಷೆ ಐಶ್ವರ್ಯ ಟಿ.ಯು,ಕಾರ್ಯದರ್ಶಿ ವಿಕಾಸ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
17 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್,ರೋಟ್ರಾಕ್ಟ್ ಕ್ಲಬ್ ಸಹಯೋಗದಲ್ಲಿ ಸ್ವಚ್ಚತಾ ಅಭಿಯಾನ ,ಶ್ರಮದಾನ ಕಾರ್ಯಕ್ರಮ ನಡೆಯಿತು.