ಯಲಬುರ್ಗಾ: ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಿ ಎಂದು ಪಟ್ಟಣದ ಸಂಸ್ಥಾನ ಹಿರೇಮಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಶ್ರೀಶರಣಬಸವೇಶ್ವರರ ಜಾತ್ರಾಮಹೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ. ಇದರಿಂದ ಆರ್ಥಿಕ ಹೊರೆ ತಗ್ಗಿಸಲು ಅನುಕೂಲವಾಗಲಿದೆ. ಹಲವು ಗ್ರಾಮಗಳಲ್ಲಿ ನಡೆಯುವ ಶರಣಬಸವೇಶ್ವರರ ಜಾತ್ರೆಗಳಿಂದ ಜನರಲ್ಲಿ ಸಾಮಾಜಿಕ ಸಾಮರಸ್ಯ ಹೊಂದಲು ಸಹಕಾರಿಯಾಗಿದೆ. ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ದಾನ ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೆ ವೇಳೆ ಐದು ಜೋಡಿ ಸಾಮೂಹಿಕ ವಿವಾಹ ನಡೆದವು. ಸಾರ್ವಜನಿಕರಿಗೆ ಭರ್ಜರಿ ಭೋಜನ ಏರ್ಪಡಿಸಲಾಗಿತ್ತು.ಮಂಗಳೂರು ಅರಳೆಲೆ ಹಿರೇಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ನೀಲಕಂಠಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯರಾದ ಮಹೇಶ ಹಳ್ಳಿ, ಅರವಿಂದಗೌಡ ಪಾಟೀಲ್, ಬಸನಗೌಡ ಮಾಲಿಪಾಟೀಲ್, ಶಿವಕುಮಾರ ಹಿರೇಮಠ, ಶಂಕ್ರಗೌಡ ಮಾಲಿಪಾಟೀಲ್, ಬಸವರಾಜ ಪೊಲೀಸ್ ಪಾಟೀಲ್, ಶರಣಪ್ಪ ಬೇವೂರು, ಖಾಜಾಸಾಬ್, ಹುಸೇನಸಾಬ್, ದುರಗಪ್ಪ ಜೀರಾಳ, ಮೌನೇಶ ಚಿತ್ರನಾಳ, ಶರಣಪ್ಪ ಸಿದ್ದರ, ದುರಗಪ್ಪ, ರಾಮಲಿಂಗಪ್ಪ ಕೋರಿ ಸೇರಿದಂತೆ ಮತ್ತಿತರರು ಇದ್ದರು.