ಶ್ರೀ ಶಂಕರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಶ್ರೀ ವಿಧುಶೇಖರ ಭಾರತೀ ತೀರ್ಥರು.

| Published : Jan 12 2025, 01:17 AM IST

ಶ್ರೀ ಶಂಕರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಶ್ರೀ ವಿಧುಶೇಖರ ಭಾರತೀ ತೀರ್ಥರು.
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಸನಾತನ ಧರ್ಮದ ರಕ್ಷಣೆ, ಏಳಿಗೆಗಾಗಿ 32ನೇ ವಯಸ್ಸಿನಲ್ಲಿಯೇ ದೇಶದ್ದುದಗಲಕ್ಕೂ ಸಂಚರಿಸಿ ಧರ್ಮ ಪ್ರಚಾರ ಮಾಡಿದ ಶ್ರೀ ಶಂಕರರ ತತ್ವಾದರ್ಶ, ಉಪದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಪ್ರತಿಪಾದಿಸಿದರು.

ಶ್ರೀ ಮಠದ ನರಸಿಂಹವನದಲ್ಲಿ ಜಗದ್ಗುರು ಶ್ರೀ ಭಾರತಿ ತೀರ್ಥರ ಸನ್ಯಾಸ ಸ್ವೀಕಾರ 50 ನೇ ವರ್ಷದ ಸುವರ್ಣ ಮಹೋತ್ಸವ । ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸನಾತನ ಧರ್ಮದ ರಕ್ಷಣೆ, ಏಳಿಗೆಗಾಗಿ 32ನೇ ವಯಸ್ಸಿನಲ್ಲಿಯೇ ದೇಶದ್ದುದಗಲಕ್ಕೂ ಸಂಚರಿಸಿ ಧರ್ಮ ಪ್ರಚಾರ ಮಾಡಿದ ಶ್ರೀ ಶಂಕರರ ತತ್ವಾದರ್ಶ, ಉಪದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಪ್ರತಿಪಾದಿಸಿದರು.

ಶ್ರೀ ಮಠದ ನರಸಿಂಹವನದಲ್ಲಿ ಶ್ರೀ ಶಾರದಾ ಪೀಠದ ಹಿರಿಯ ಜಗದ್ಗುರು ಶ್ರೀ ಭಾರತಿ ತೀರ್ಥರು ಸನ್ಯಾಸ ಸ್ವೀಕಾರದ 50 ನೇ ವರ್ಷದ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಹಾಗೂ ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶ್ರೀ ಶಂಕರರು ಧರ್ಮಸ್ಥಾಪನೆ ಮಾಡಿದ ಕಾರಣ ಸನಾತನ ಧರ್ಮ 1200 ವರ್ಷಗಳ ಕಾಲ ದೃಢ ವಾಗಿ ನಿಲ್ಲಲು ಕಾರಣವಾಯಿತು. ಅನ್ಯ ಧರ್ಮಗಳು ದಾಳಿ ನಡೆಸಿದರು ಸನಾತನ ಧರ್ಮ ಬಲವಾಗಿ ನಿಂತಿದೆ. ಶ್ರೀ ಶಂಕರರ ಏಕಮಾತ್ರ ಮಾರ್ಗದಿಂದ ಐಕ್ಯಮತ ಸಾಧಿಸಲು ಸಾಧ್ಯ. ಶ್ರೀ ಶಂಕರರ ಸ್ಮರಣೆ ಮಾಡಿ, ಅವರ ಜಯಂತಿಯನ್ನು ಮನೆ ಮನೆಗಳಲ್ಲಿ ಆಚರಿಸಬೇಕು. ಶಂಕರರ ಮಾರ್ಗ ಅನುಸರಿಸಿ ಸ್ತೋತ್ರ, ಗ್ರಂಥಗಳ ಪಠಣ ಮಾಡಬೇಕು. ದೇವಸ್ಥಾನಗಳಲ್ಲಿ ಶಂಕರರಿಗೆ ಸ್ಥಾನ ಕಲ್ಪಿಸಿಕೊಡಬೇಕು ಎಂದರು.

ಭಗವಂತನನ್ನು ಆಶ್ರಯಿಸಿದರೆ ಎಲ್ಲರನ್ನು ಅನುಗ್ರಹಿಸುತ್ತಾನೆ. ಭಗವಂತನ ಒಬ್ಬನೇ, ಅವರವರ ಅಭಿರುಚಿಗಳಿಗೆ ತಕ್ಕಂತೆ ಬೇರೆ ಬೇರೆ ರೂಪದಲ್ಲಿ ಕಾಣುತ್ತಾನೆ. ಭಗವಂತನಲ್ಲಿ ಯಾವುದೇ ತಾರತಮ್ಯವಿಲ್ಲ. ಭಗವಂತನನ್ನು ತಾರತಮ್ಯದಿಂದ ಕಾಣುವುದು ದೊಡ್ಡ ಅಪರಾಧ. ಭಗವದ್ಗೀತೆ ಎಲ್ಲಾ ಉಪನಿಷತ್ತುಗಳ ಸಾರಾಂಶ. ಧರ್ಮದ ಐಕ್ಯತೆ. ಧರ್ಮದ ಜಯ ಗೀತೆಯಲ್ಲಿದೆ ಎಂದು ಹೇಳಿದರು.

ಆಧ್ಯಾತ್ಮಿಕತೆಗೆ ವಯಸ್ಸಿನ ಅಂತರವಿಲ್ಲ. ಚಿಕ್ಕವಯಸ್ಸಿನಿಂದಲೇ ಆಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು. ವಯಸ್ಸಾದ ಮೇಲೆ ಆಧ್ಯಾತ್ಮದತ್ತ ವಾಲಬೇಕು ಎಂಬುದು ಭ್ರಮೆ. ಚಿಕ್ಕವಯಸ್ಸಿನಿಂದಲೇ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಲೌಕಿಕ ಪ್ರಪಂಚ ದಲ್ಲಿ ಉತ್ತಮ ಸ್ಥಿತಿ ತಲುಪಬಹುದು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಮರ್ಥವಾಗಿ ಎದುರಿಸುವ ಧೈರ್ಯ ನೀಡುತ್ತದೆ ಎಂದು ತಿಳಿಸಿದರು.

ದೇಶದ ಅಖಂಡ ಸಂಪತ್ತಾದ ಮಕ್ಕಳಲ್ಲಿ ಎಳೆಯ ವಯಸ್ಸಿನಿಂದಲೇ ಆಧ್ಯಾತ್ಮಿಕತೆ ಬೆಳೆಸಬೇಕು. ಅವರಿಗೆ ಉತ್ತಮ ಶಿಕ್ಷಣ, ಉತ್ತಮ ಸಂಸ್ಕಾರ ನೀಡಬೇಕು. ಆಗ ದೇಶ ಅಭಿವೃದ್ಧಿ ಕಡೆ ಸಾಗುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಪಾಲಕರ ಮೇಲೆ ಇದೆ. ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಿ ಇನ್ನೊಬ್ಬರಿಗೆ ಒಳ್ಳೆಯದು ಮಾಡುವುದು, ಕಷ್ಟದಲ್ಲಿರುವವರಿಗೆ ಸಹಾಯಮಾಡುವುದೇ ಧರ್ಮ ಎಂದು ಅಭಿಪ್ರಾಯಪಟ್ಟರು.

ಶ್ರೀ ಶಂಕರರು ರಚಿಸಿದ ಪ್ರತಿಯೊಂದು ಸ್ತೋತ್ರವೂ ಅದ್ಭುತ. ಶ್ರೀ ಶಂಕರರು ಧರ್ಮಪ್ರಚಾರಕ್ಕಾಗಿ ಸ್ಥಾಪಿಸಿದ ನಾಲ್ಕು ಪೀಠ ಗಳಲ್ಲಿ ಶೃಂಗೇರಿ ಪೀಠವೂ ಒಂದು. ಇಲ್ಲಿ ಅವಿಚ್ಛಿನ ಗುರುಪರಂಪರೆ ಇಂದಿಗೂ ಮುಂದುವರಿಯುತ್ತಿದೆ ಎಂದರು.

ಬೆಳಿಗ್ಗೆ ಹಿರಿಯ ಜಗದ್ಗುರು ಶ್ರೀ ಭಾರತೀ ತೀರ್ಥರ ಸಮ್ಮುಖದಲ್ಲಿ ಸ್ತೋತ್ರ ತ್ರಿವೇಣಿ ಮಹಾ ಸಮರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ಶೃಂಗೇರಿ ಶಿವಗಂಗ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ, ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಶ್ರೀ ಮನ್ನಲೆ ಮಾವು ಮಠದ ಶ್ರೀ ಮಾದವನಂದ ಭಾರತೀ ಸ್ವಾಮಿ,ತುಮಕೂರು ರಾಮಕೃಷ್ಣ ವಿವೇಕನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಹಳದಿಪುರ ಮಠದ ವಾಮನಾಶ್ರಮ ಸ್ವಾಮೀಜಿ, ಆನೆಗುಂದಿ ಸರಸ್ವತಿ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಕರ್ಕಿಯ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ, ತುಮಕೂರಿನ ಶ್ರೀ ಪರಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಬೆಳಿಗ್ಗೆಯಿಂದಲೇ ಶೃಂಗೇರಿ ಪಟ್ಟಣದತ್ತ ಜನಸಾಗರವೇ ಹರಿದು ಬಂದಿತು. ಶೃಂಗೇರಿ ಪಟ್ಟಣ, ಶ್ರೀಮಠದ ಆವರಣ, ನರಸಿಂಹವನ ಎಲ್ಲೆಲ್ಲೂ ಜನಜಂಗುಳಿಯೇ ಕಂಡುಬಂದಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನಸಾಗರ ನೆರೆದಿತ್ತು.

11 ಶ್ರೀ ಚಿತ್ರ 1-

ಶೃಂಗೇರಿ ಶ್ರೀ ಮಠದ ನರಸಿಂಹವನದಲ್ಲಿ ನಡೆದ ಸನ್ಯಾಸ ಸುವರ್ಣ ಮಹೋತ್ಸವ ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ವಿಧುಶೇಖರ ಭಾರತೀ ತೀರ್ಥರು ಆಶೀರ್ವಚನ ನೀಡಿದರು.