ಡಂಬಳ: ಭೂ ಮಂಡಲದಲ್ಲಿ ಪರಿಸರವು ಶುದ್ಧ ಗಾಳಿ ನೀರು ಆಹಾರ ಹಾಗೂ ನೆರಳನ್ನು ಒದಗಿಸಿ ಇಡೀ ಜಗತ್ತನ್ನು ಜೀವಂತವಾಗಿರಿಸಿದೆ. ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ ತಿಳಿಸಿದರು.
ಡಂಬಳ ಹೋಬಳಿ ಬರದೂರ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಮಂಡಳ ವತಿಯಿಂದ ಎನ್.ಎನ್. ಗೊಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಪಕ್ಷ ಸುಸ್ಥಿರ ಅಭಿವೃದ್ಧಿ ಹವಾಮಾನ ಬದಲಾವಣೆ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಪ್ರಕೃತಿ ರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ತನ್ನ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾಗಿ ಅಳವಡಿಸಿಕೊಂಡಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡಗಳ ಬೆಳೆಸುವುದು ನೆಡುವುದು ಕೇವಲ ದಿನಾಚರಣೆಗೆ ಸೀಮಿತವಾಗದಿರಲಿ ಎಂದರು.
ಈ ಸಮಯದಲ್ಲಿ ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪೂರಮಠ, ಯುವ ಮುಖಂಡ ಪ್ರಭು ಕರಮುಡಿ, ಬಸವರಾಜ ಸಂಗನಾಳ, ಪ್ರಭು ಕೊರ್ಲಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ನಾಡಗೌಡ್ರ, ಮಹಾದೇವಪ್ಪ ತೋಟಪ್ಪನವರ, ಶರಣಪ್ಪ ಕಂಬಳಿ, ಮುತ್ತಪ್ಪ ಹಳ್ಳಿ, ತಿರುಪತೆಪ್ಪ ಬಂಡಿ, ಈರಣ್ಣ ಹಡಪದ, ಮಾರುತಿ ಮ್ಯಾಗೇರಿ, ಮೈಲೆಪ್ಪ ತಳಗೇರಿ, ಮಲ್ಲಪ್ಪ ಮ್ಯಾಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಸಿಬ್ಬಂದಿ ಇದ್ದರು.ಸಸ್ಯಕುಲದ ಸಂರಕ್ಷಣೆ ಎಲ್ಲರ ಹೊಣೆಲಕ್ಷ್ಮೇಶ್ವರ: ಸಮೀಪದ ಶಿಗ್ಲಿ- ಉಳ್ಳಟ್ಟಿ ಗ್ರಾಮದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.ಈ ವೇಳೆ ಸಿಆರ್‌ಪಿ ಶಿವಾನಂದ ಅಸುಂಡಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಪರಿಸರ ಉಳಿದರೆ ನಮ್ಮ ಉಳಿವು ಸಾಧ್ಯ. ಸಸ್ಯಕುಲದ ಸಂರಕ್ಷಣೆ, ಪರಿಸರದ ಸಮತೋಲನ ಹಾಗೂ ಹಸಿರು ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲವಾಗಿರಬೇಕು ಎಂದರು.ಸಂಸ್ಥೆಯ ನಿರ್ದೇಶಕ ರಾಜಶೇಖರ ಶಿರಹಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದರು.ಮುಖ್ಯೋಪಾಧ್ಯಾಯ ಎಸ್.ವಿ. ಹೊಸಳ್ಳಿಮಠ ಅವರು ಪರಿಸರ ದಿನದ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿ ನೆಟ್ಟು, ಅದರ ಪಾಲನೆ ಮಾಡುವ ಸಂಕಲ್ಪ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಗಿಡ ನೆಡುವ ಕಾರ್ಯಕ್ರಮ, ಪರಿಸರ ಪ್ರತಿಜ್ಞಾವಿಧಿ, ಜಾಗೃತಿ ಭಾಷಣ ಹಾಗೂ ವಿವಿಧ ಪರಿಸರ ಸಂಬಂಧಿತ ಚಟುವಟಿಕೆ ಆಯೋಜಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಈ ವೇಳೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.