ಶ್ರೀರಾಮನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿಯಬೇಕು: ಎಂ.ಮಾಯಪ್ಪ ಕರೆ

| Published : Apr 18 2024, 02:23 AM IST

ಶ್ರೀರಾಮನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿಯಬೇಕು: ಎಂ.ಮಾಯಪ್ಪ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ಆದರ್ಶ ಪುರುಷ, ಶಾಂತಿಧೂತ. ತನ್ನ ತಂದೆ ಮಾತನ್ನು ನಡೆಸಿಕೊಟ್ಟ ಮಹಾನ್ ವ್ಯಕ್ತಿ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ನೇರ ವ್ಯಕ್ತಿತ್ವವುಳ್ಳ ದೇವರು. ಹಾಗೇ, ಇತ್ತೀಚಿನ ತಲೆಮಾರಿನ ಜನರುಗಳಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ. ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಬೇಸರ ಸಂಗತಿ.

ಕನ್ನಡಪ್ರಭ ವಾರ್ತೆ ಭಾರತೀನಗರ

ಶ್ರೀರಾಮನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿಯುವ ಜೊತೆಗೆ ಆರಾಧಿಸಬೇಕು ಎಂದು ಭಾರತ್ ವಿಕಾಶ್ ಪರಿಷತ್‌ನ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ತಿಳಿಸಿದರು.

ಭಾರತ್ ವಿಕಾಸ್ ಪರಿಷತ್ ವತಿಯಿಂದ ಶ್ರೀರಾಮನವಮಿ ಆಚರಣೆಯಲ್ಲಿ ಮಾತನಾಡಿ, ಶ್ರೀರಾಮ ಆದರ್ಶ ಪುರುಷ. ಶಾಂತಿಧೂತ. ತನ್ನ ತಂದೆ ಮಾತನ್ನು ನಡೆಸಿಕೊಟ್ಟ ಮಹಾನ್ ವ್ಯಕ್ತಿ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ನೇರ ವ್ಯಕ್ತಿತ್ವವುಳ್ಳ ದೇವರು ಎಂದು ಬಣ್ಣಿಸಿದರು.

ಇತ್ತೀಚಿನ ತಲೆಮಾರಿನ ಜನರುಗಳಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ. ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಪಾನಕ, ಮಜ್ಜಿಗೆಯನ್ನು ಬೇಸಿಗೆಯ ಬೇಗೆಯಲ್ಲಿ ಸಂಚರಿಸಿದಂತ ಜನರಿಗೆ, ವಿದ್ಯಾರ್ಥಿಗಳಿಗೆ ವಿತರಿಸಿದರು.

ಶಾಮಿಯಾನ ಹಾಕಿಸಿ ರಾಮ ದೇವರ ಕುಟುಂಬ ಪರಿವಾರಸಮೇತದ ಭಾವಚಿತ್ರವಿರಿಸಿ ಬೆಳಗ್ಗಿನಿಂದಲೇ ಹೂವು, ಹಣ್ಣುಗಳಿಂದ ಅಲಂಕರಿಸಿ ಪೂಜೆ ಮಾಡಿ ದೇವರ ಆಶೀರ್ವಾದ ಪಡೆದರು. ಭಾ.ವಿ.ಪ ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿ ಕೆ.ಎಸ್.ಶಿವರಾಮು, ಖಜಾಂಚಿ ಗಾಯಿತ್ರಿ, ಸುಶೀಲಮ್ಮ, ದಾಸೇಗೌಡ, ಎಲ್‌ಐಸಿ ಬೋರಯ್ಯ, ನಂಜುಂಜೇಗೌಡ, ಗುಡಿಗೆರೆ ವೆಂಕಟೇಶ್, ಶೆಟ್ಟಹಳ್ಳಿ ಮಂಚೇಗೌಡ, ಎಂ.ಜೆ.ರಾಮಯ್ಯ, ಎಲ್‌ಐಸಿ ಬಸವರಾಜು, ಎ.ಎಲ್.ರಮೇಶ್, ಚನ್ನಪ್ಪ ಸೇರಿದಂತೆ ಹಲವರಿದ್ದರು.ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆಭಾರತೀನಗರ:ಶ್ರೀರಾಮನವಮಿ ಪ್ರಯುಕ್ತ ಕೆ.ಎಂ.ದೊಡ್ಡಿ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ದೇಗುಲದ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಹೂವಿನ ಅಲಂಕಾರ ನೂರಾರು ಭಕ್ತರೊಂದಿಗೆ ಪೂಜಾ ಕೈಂಕರ್ಯಗಳು ಅರ್ಚಕ ಗೋಪಾಲಕೃಷ್ಣ ಭಟ್ಟರ್ ಹಾಗೂ ಅನಂತಕೃಷ್ಣ ಭಟ್ಟರ್ ನೇತೃತ್ವದಲ್ಲಿ ಜರುಗಿತು.ಈ ವೇಳೆ ಭಕ್ತರು ರಾಮನ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸಿದರು. ನಂತರ ಶ್ರೀವೆಂಕಟೇಶ್ವರ ಸೇವಾಟ್ರಸ್ಟ್ ವತಿಯಿಂದ ಕರ್ಭೂಜ, ಬೇಲದ ಹಣ್ಣಿನ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಣೆ ಮಾಡಲಾಯಿತು.

ಶಾಸಕ ಕೆ.ಎಂ.ಉದಯ್ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಟ್ರಸ್ಟ್‌ನ ಕಾರ್ಯಾಧ್ಯಕ್ಷ ವೆಂಕಟೇಶ್, ಪದಾಧಿಕಾರಿಗಳಾದ ಕೆಂಚೇಗೌಡರ ಶ್ರೀನಿವಾಸ್, ಚಿಕ್ಕಹೈದೇಗೌಡ, ರವಿ, ವಿಶ್ವ, ಅಣ್ಣೂರು ಸತೀಶ್, ಬೋರೇಗೌಡ, ಶುಂಠಿವೆಂಕಟೇಗೌಡ, ಪುಟ್ಟಣ್ಣ ಸೇರಿದಂತೆ ಹಲವರಿದ್ದರು.