ಸಾರಾಂಶ
ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಸಹಸ್ರಾರು ಕೋಟಿ ವಿನಿಯೋಗಿಸುತ್ತದೆ. ಆದರೆ ಅವು ಮಕ್ಕಳಿಗೆ ತಲುಪುವುದು ದುರ್ಲಬ. ಮಕ್ಕಳಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಮನೆಗೆ ತೆರಳುವ ತನಕವೂ ಹಕ್ಕುಗಳಿವೆ. ಆದರೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವಿಲ್ಲದ ಕಾರಣ ಆ ಎಲ್ಲಾ ಹಕ್ಕುಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ ಎಂದು ಸಿದ್ದಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪ್ರತಿಯೊಬ್ಬ ಮನುಷ್ಯನಿಗೆ ಹಕ್ಕುಗಳು ಇರುವಂತೆಯೇ ಪ್ರತಿಯೊಂದು ಮಗುವಿಗೂ ತನ್ನದೇ ಆದ ಹಕ್ಕುಗಳಿವೆ. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಹೇಳಿದರು.ತಾಲೂಕಿನ ಮಾವಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹುಟ್ಟಿದ ಮಗುವಿನಿಂದ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಯವರೆಗೂ ಹತ್ತಾರು ಹಕ್ಕುಗಳಿವೆ. ಸರ್ಕಾರವೇ ಹಕ್ಕಗಳನ್ನು ನೀಡಿದೆ. ಆದರೆ ಅವುಗಳ ಅನುಷ್ಠಾವಾಗದಿರುವುದು ದುರಂತವೇ ಸರಿ. ಎಲ್ಲ ಕಾನೂನುಗಳೂ ಸಹ ಕಾಗದದಲ್ಲಿವೆ. ಆದರೆ ಹಕ್ಕುಗಳ ಮಂಡನೆ ಮಾಡಿ ತಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ ಎಂಬುದು ವಿಷಾದನೀಯ ಸಂಗತಿ ಎಂದರು.ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಸಹಸ್ರಾರು ಕೋಟಿ ವಿನಿಯೋಗಿಸುತ್ತದೆ. ಆದರೆ ಅವು ಮಕ್ಕಳಿಗೆ ತಲುಪುವುದು ದುರ್ಲಬ. ಮಕ್ಕಳಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಮನೆಗೆ ತೆರಳುವ ತನಕವೂ ಹಕ್ಕುಗಳಿವೆ. ಆದರೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವಿಲ್ಲದ ಕಾರಣ ಆ ಎಲ್ಲಾ ಹಕ್ಕುಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ ಎಂದು ಸಿದ್ದಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾವಿನಕೆರೆ ಗ್ರಾಪಂ ಅಧ್ಯಕ್ಷ ಸತೀಶ್ ಕುಮಾರ್, ಗ್ರಾಪಂ ಸದಸ್ಯ ಮೋಹನ್ ಮಾತನಾಡಿದರು.ಪಂಚಾಯ್ತಿಯ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ಸದಸ್ಯರಾದ ಶಾರದಮ್ಮ, ರುಕ್ಮಿಣಮ್ಮ, ಮುಖ್ಯೋಪಧ್ಯಾಯಿನಿ ಸುಧಾ, ಸಿಆರ್‌ಪಿ ಫರ್ಜಾನಾ, ಪಿಡಿಒ ಉಮೇಶ್, ಕಾರ್ಯದರ್ಶಿ ಪುಷ್ಪಾ ಸೇರಿ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಲಕ್ಷ್ಮೀಕಾಂತಪ್ಪ ಸ್ವಾಗತಿಸಿದರು. ಟಿ.ಎನ್.ನಾಗರಾಜ್ ವಂದಿಸಿದರು.