ಭಯಮುಕ್ತರಾಗಿ ಪರೀಕ್ಷೆ ಎದುರಿಸಿ, ಶಾಲೆಗೆ ಕೀರ್ತಿ ತನ್ನಿ: ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು

| Published : Mar 19 2024, 12:46 AM IST

ಭಯಮುಕ್ತರಾಗಿ ಪರೀಕ್ಷೆ ಎದುರಿಸಿ, ಶಾಲೆಗೆ ಕೀರ್ತಿ ತನ್ನಿ: ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆ, ಸಮಾಜ ಏನು ಕೊಟ್ಟಿದೆ ಎನ್ನದೇ ನಾವು ಬದುಕುತ್ತಿರುವ ಸಮಾಜಕ್ಕೆ ತಮ್ಮಿಂದಾಗುವ ಅಳಿಲು ಸೇವೆ ಮಾಡಬೇಕು. ವಿದ್ಯಾರ್ಥಿಗಳು ಅಂಕಗಳ ಜೊತೆ ಜೊತೆಗೆ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕು. ಕಲಿತ ವಿದ್ಯೆ ನಿಮ್ಮ ಸ್ವಾವಲಂಭಿ ಬದುಕಿಗೆ ನೆರವಾಗುತ್ತದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಈಗ ಎಸ್.ಎಸ್.ಎಲ್.ಸಿ ಪರೀಕ್ಷಾ ಸಮಯ. ಇದು ಪ್ರತಿಯೊಬ್ಬ ವಿದ್ಯಾರ್ಥಿತೈ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಶಾಲೆಯಲ್ಲಿ ಮಾಡಿರುವ ಪಾಠ ಪ್ರವಚನಗಳನ್ನು ಅರ್ಥೈಸಿಕೊಂಡು ಓದಿ. ಪರೀಕ್ಷಾ ಭಯವನ್ನು ತೊರೆದು ಮುಕ್ತ ಮತ್ತು ಶಾಂತಚಿತ್ತದಿಂದ ಪರೀಕ್ಷೆ ಬರೆಯಬೇಕೆಂದು ದೊಂಬರಹಳ್ಳಿ ಸೋಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ, ಶಾಲಾ ವಾರ್ಷಿಕೋತ್ಸವ ಮತ್ತು ಪರೀಕ್ಷಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲೆ, ಸಮಾಜ ಏನು ಕೊಟ್ಟಿದೆ ಎನ್ನದೇ ನಾವು ಬದುಕುತ್ತಿರುವ ಸಮಾಜಕ್ಕೆ ತಮ್ಮಿಂದಾಗುವ ಅಳಿಲು ಸೇವೆ ಮಾಡಬೇಕು. ವಿದ್ಯಾರ್ಥಿಗಳು ಅಂಕಗಳ ಜೊತೆ ಜೊತೆಗೆ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕು. ಕಲಿತ ವಿದ್ಯೆ ನಿಮ್ಮ ಸ್ವಾವಲಂಭಿ ಬದುಕಿಗೆ ನೆರವಾಗುತ್ತದೆ. ಸಮಾಜದಲ್ಲಿ ನೊಂದವರ, ಅಸಹಾಯಕರ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನಸ್ಸನ್ನು ಬೆಳೆಸಿಕೊಂಡರೆ ಮಾತ್ರ ಕಲಿತ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಧನಂಜಯ ಮಾತನಾಡಿ, ಈ ಶಾಲೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಗಳಿಸಿಕೊಂಡಿದ್ದಾರೆ. ಶಾಲೆ ಇದ್ದ ಗ್ರಾಮ ಜ್ಞಾನದ ಬಂಡಾರವಿದ್ದಂತೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಶಾಲೆ ಉಳಿಸಲು ಕಂಕಣ ಬದ್ಧರಾಗಬೇಕು. ಚನ್ನಾಗಿ ಓದಿ ಈ ಶಾಲೆಗೆ ಗೌರವ ತನ್ನಿ ಎಂದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ಮಕ್ಕಳು ಮತ್ತು ಬಡ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಗೌತಮ್, ಡಿ.ಎಸ್.ರಂಗಸ್ವಾಮಿ, ದರ್ಶನ್, ಶಿಕ್ಷಕರಾದ ವೈ.ಜಿ.ಕೃಷ್ಣ, ದೊಡ್ಡಮನೆ ಕೀರ್ತಿ, ಡಾ.ಪಾಂಡುರಂಗಯ್ಯ, ನಾಗೇಶ್, ಅನಿಲ್ ಸಿಬ್ಬಂದಿ ತಿಲೋತ್ತಮ್ ನಾಯಕ್, ರಮೇಶ್ ಇದ್ದರು.