ಸಂಪ್ರದಾಯ ನೆಪದಲ್ಲಿ ಜಲಮೂಲಗಳ ಮಲಿನ ಸಲ್ಲದು: ಶ್ರೀಧರ್‌

| Published : Mar 19 2024, 12:46 AM IST

ಸಾರಾಂಶ

ಶ್ರೀ ಕ್ಷೇತ್ರ ಕೂಡ್ಲಿ ಗ್ರಾಮವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿದೆ. ಭಕ್ತರು ಹಾಗೂ ಪ್ರವಾಸಿಗರು ಸಂಗಮ ಸ್ಥಳದಲ್ಲಿ ಬಟ್ಟೆ, ಅಸ್ಥಿ ವಿಸರ್ಜನೆ ನಂತರದ ತ್ಯಾಜ್ಯ ವಸ್ತುಗಳನ್ನು ನದಿ ಬಿಟ್ಟು, ಪಾವಿತ್ರ್ಯತೆ ಹಾಳು ಮಾಡಬಾರದು. ಪರಿಸರಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಪರೋಪಕಾರಂ ಕುಟುಂಬ ಸಂಸ್ಥೆ ಮುಖ್ಯಸ್ಥ ಎನ್.ಎಂ.ಶ್ರೀಧರ್ ಕೂಡ್ಲಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಶ್ರೀ ಕ್ಷೇತ್ರ ಕೂಡ್ಲಿ ಗ್ರಾಮವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿದೆ. ಭಕ್ತರು ಹಾಗೂ ಪ್ರವಾಸಿಗರು ಸಂಗಮ ಸ್ಥಳದಲ್ಲಿ ಬಟ್ಟೆ, ಅಸ್ಥಿ ವಿಸರ್ಜನೆ ನಂತರದ ತ್ಯಾಜ್ಯ ವಸ್ತುಗಳನ್ನು ನದಿ ಬಿಟ್ಟು, ಪಾವಿತ್ರ್ಯತೆ ಹಾಳು ಮಾಡಬಾರದು. ಪರಿಸರಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಪರೋಪಕಾರಂ ಕುಟುಂಬ ಸಂಸ್ಥೆ ಮುಖ್ಯಸ್ಥ ಎನ್.ಎಂ.ಶ್ರೀಧರ್ ಹೇಳಿದರು.

ಪಟ್ಟಣ ಸಮೀಪದ ಕೂಡ್ಲಿ ಗ್ರಾಮದ ತುಂಗಭದ್ರಾ ನದಿ ಸಂಗಮ ಸ್ಥಳದದಲ್ಲಿ ಶಿವಮೊಗ್ಗದ ಪರೋಪಕಾರಂ ಕುಟುಂಬ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಶ್ರಮದಾನ ಬಳಿಕ ಅವರು ಮಾತನಾಡಿದರು.

ಸಂಗಮ ಸ್ಥಳದಲ್ಲಿ ಪ್ರತಿ ವರ್ಷ ಟನ್‍ಗಟ್ಟಲೆ ನದಿಯಲ್ಲಿ ತ್ಯಾಜ್ಯ ಸೇರಿ, ನೀರು ಮಲೀನ ಆಗುತ್ತಿದೆ. ಇದನ್ನು ತಡೆಗಟ್ಟಲು ಜನಜಾಗೃತಿ ಅಗತ್ಯ. ನಾವು ಪಾಲಿಸುವ ಸಂಪ್ರದಾಯಗಳು ಪರಿಸರಕ್ಕೆ ಮಾರಕ ಆಗಬಾರದು ಎಂದು ತಿಳಿಸಿದರು.

ಲೆಕ್ಕಪರಿಶೋಧಕ ಕೃಷ್ಣಮೂರ್ತಿ ಮಾತನಾಡಿ, ಬೇಸಿಗೆ ಸಮಯದಲ್ಲಿ ನದಿ ಸ್ವಚ್ಛತೆ ಮಾಡುವ ಜೊತೆಗೆ ನದಿಯ ಪಾವಿತ್ರ್ಯತೆ ಬಗ್ಗೆ ಜನ ಜಾಗೃತಿ ಮೂಡಿಸಲು ಪರೋಪಕಾರಂ ಕುಟುಂಬ ನಿರಂತರವಾಗಿ ಪ್ರಯತ್ನಿಸುತ್ತಿದೆ. ನದಿ ಸ್ವಚ್ಛತೆಯಿಂದ ಪುಣ್ಯ ಹಾಗೂ ಉಲ್ಲಾಸ ಪ್ರಾಪ್ತಿ ಆಗುತ್ತದೆ ಎಂದರು.

ನವ್ಯಶ್ರೀ ನಾಗೇಶ್, ಎನ್.ಎಂ. ಲೀಲಾಬಾಯಿ, ನರಪತ್ ಪಟೇಲ್, ಜಿ.ವಿ. ಪಾಂಡುರಂಗಪ್ಪ, ದುಮ್ಮಳ್ಳಿ ರಾಜಣ್ಣ, ಆರ್.ಕುಮಾರಣ್ಣ ಗಾಡಿಕೊಪ್ಪ, ದೀಪಾ ಶ್ರೀಧರ್, ಶೈಲ ರಾಘವೇಂದ್ರ, ವಾಯುಸುತ, ದಿನೇಶ್‍ ದಾಸ್ ವೈಷ್ಣವ್, ಕೃಷ್ಣಮೂರ್ತಿ, ಸಾರಥಿ ಶಿವಾನಂದ್, ಗೀತಾ ಶಿವಾನಂದ್, ಶ್ರೀಕಾಂತ್‍ ಹೊಳ್ಳ, ಶೈಲಜಾ ಹೊಳ್ಳ, ಮಾನ್ಯ, ವಂದನಾ, ಎಂ.ಕೆ. ಬಾಲಚಂದ್ರ, ಈಶ್ವರಿ, ವಿಜಯ್ ಕಾರ್ತಿಕ್, ವೈಷ್ಣವಿ, ವೈಶಾಖ, ಚರಿತಾ, ಕೂಡ್ಲಿ ಪ್ರವೀಣ್, ವಿನೋದ ಸಾಗರ, ವೇದವ್ಯಾಸ ಭಾಗವಹಿಸಿದ್ದರು.

- - - -18ಎಚ್‍ಎಚ್‍ಆರ್2:

ಹೊಳೆಹೊನ್ನೂರು ಸಮೀಪದ ಶ್ರೀ ಕ್ಷೇತ್ರ ಕೂಡ್ಲಿ ಗ್ರಾಮದ ತುಂಗಭದ್ರಾ ಸಂಗಮ ಸ್ಥಳದಲ್ಲಿ ಪರೋಪಕಾರಂ ಕುಟುಂಬ ಸಂಸ್ಥೆಯಿಂದ ನದಿಯಲಿದ್ದ ತ್ಯಾಜ್ಯವನ್ನು ಸ್ವಚ್ಚಗೊಳಿಸಿದರು.