ಸಾರಾಂಶ
ಸಂಜೆ ೬.೩೦ರಿಂದ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ಕರಿಂಗುಟ್ಟಿ ಚಾತನ್ ದೇವರ ವೆಳ್ಳಾಟಂ, ರಾತ್ರಿ ೭.೩೦ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ, ಭಗವತಿ ದೇವಿಯ ವೆಳ್ಳಾಟಂ, ರಕ್ತಚಾಮುಂಡಿ ದೇವಿ, ಪೊಟ್ಟನ್ ದೇವರ ವೆಳ್ಳಾಟಂ ಜರುಗಿತು. ನಂತರ ದೇವರ ಕಳಿಕ್ಕಾಪಾಟ್ ನೆರವೇರಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು. ನಂತರ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ನಿರ್ಮಿಸಲು ಉದ್ದೇಶಿಸಿರುವ ರಾಜಗೋಪುರ ಕಾಮಗಾರಿ ಕುರಿತು ದೇವಾಲಯ ಸಮಿತಿಯಿಂದ ಮಾಹಿತಿ ಪಡೆದರು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಮುತ್ತಪ್ಪನ್ ದೇವಾಲಯದ ಮಡಯನ್ ಸುಧೀಶ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ಮತ್ತು ಪದಾಧಿಕಾರಿಗಳು ಇದ್ದರು.ಮಧ್ಯಾಹ್ನ ೩.೩೦ಕ್ಕೆ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ ಆರಂಭವಾಯಿತು. ನಂತರ ಸಂಜೆ ೪.೩೦ಕ್ಕೆ ಕೇರಳದ ಸಿಂಗಾರಿ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳಸದ ಮೆರವಣಿಗೆ ಜರುಗಿತು. ಸಂಜೆ ೬.೩೦ರಿಂದ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ಕರಿಂಗುಟ್ಟಿ ಚಾತನ್ ದೇವರ ವೆಳ್ಳಾಟಂ, ರಾತ್ರಿ ೭.೩೦ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ, ಭಗವತಿ ದೇವಿಯ ವೆಳ್ಳಾಟಂ, ರಕ್ತಚಾಮುಂಡಿ ದೇವಿ, ಪೊಟ್ಟನ್ ದೇವರ ವೆಳ್ಳಾಟಂ ಜರುಗಿತು. ನಂತರ ದೇವರ ಕಳಿಕ್ಕಾಪಾಟ್ ನೆರವೇರಿತು.