ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಿ: ಅಣ್ಣಾಸಾಹೇಬ ಜೊಲ್ಲೆ

| Published : Aug 17 2024, 12:49 AM IST

ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಿ: ಅಣ್ಣಾಸಾಹೇಬ ಜೊಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿಕೊಂಡು ದೇಶ ಸೇವೆಯೇ ದೇವರ ಸೇವೆ ಎಂದು ತಿಳಿದು ಕೆಲಸ ಮಾಡಬೇಕು ಎಂದು ಮಾಜಿ ಸಂಸದ ಹಾಗೂ ಜೊಲ್ಲೆ ಗ್ರುಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿಕೊಂಡು ದೇಶ ಸೇವೆಯೇ ದೇವರ ಸೇವೆ ಎಂದು ತಿಳಿದು ಕೆಲಸ ಮಾಡಬೇಕು. ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಿಕೊಂಡು ಒಳ್ಳೆಯ ಪ್ರಜೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ಮಾಜಿ ಸಂಸದ ಹಾಗೂ ಜೊಲ್ಲೆ ಗ್ರುಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಯಕ್ಸಂಬಾ ಜೊಲ್ಲೆ ಶಿಕ್ಷಣ ಸಂಸ್ಥೆಯ ಶಿವಶಂಕರ ಜೊಲ್ಲೆ ಶಾಲೆ ಆವರಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ ಮಾತನಾಡಿ, ನಾವಿಂದು ಧರ್ಮಮಾರ್ಗದಲ್ಲಿ ನಡೆದು ಭವಿಷತ್ತಿನ ಆದರ್ಶ ಪ್ರಜೆಗಳಾಗಿ ಎಲ್ಲ ವಿದ್ಯಾರ್ಥಿಗಳು ಬೆಳೆದು ವಿಶ್ವದಲ್ಲಿ ಭಾರತವನ್ನು ಮಾದರಿ ರಾಷ್ಟ್ರವನ್ನಾಗಿ ನಿರ್ಮಿಸಲು ತಯಾರು ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಶಾಲೆಯ ಸಹಶಿಕ್ಷಕ ಎಲ್.ಎಸ್‌. ಖೋತ ಮಾತನಾಡಿ, ಗಾಂಧೀಜಿಯವರು ಸತ್ಯ, ಅಹಿಂಸಾತ್ಮಕ ಹೋರಾಟ ಹಾಗೂ ಅನೇಕ ಚಳವಳಿಗಳ ಮೂಲಕ ಸ್ವಾತಂತ್ರ್ಯ ತಂದು ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಶಾಲೆಯ ಮುಖ್ಯಶಿಕ್ಷಕ ವಿ.ಆರ್. ಭಿವಸೆ ಮಾತನಾಡಿ, ಭಾರತ ಅನೇಕ ಸ್ವಾತ್ಯಂತ್ರ ಹೋರಾಟಗಾರರ ನಿರಂತರ ಪರಿಶ್ರಮದ ಫಲವಾಗಿ ನಾವಿಂದು ಸ್ವಾತಂತ್ರ್ಯ ದಿನವನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಮಡಿದ ವೀರರನ್ನು ಸ್ಮರಿಸಿ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಗೆ ನಾವೆಲ್ಲರೂ ಬದ್ಧರಾಗಬೇಕೆಂದರು.

ವಿದ್ಯಾರ್ಥಿಗಳಿಂದ ಆಕಷರ್ಕ ಪಥಸಂಚಲನ, ಭಾಷಣ, ದೇಶಭಕ್ತಿಗೀತೆಗಳು ಗಮನ ಸೆಳೆದವು. ಜೊಲ್ಲೆ ಗ್ರೂಪ್ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರಾದ ಜಯಾನಂದ ಜಾಧವ, ಲಕ್ಷ್ಮಣ ಕಬಾಡೆ, ಬಾಬುರಾವ ಮಾಳಿ, ಅಪ್ಪಾಸಾಬ ಜೊಲ್ಲೆ, ಮಂಗಲ ಜೊಲ್ಲೆ, ಫೈಮೀದಾ ದಾಡಿವಾಲೆ, ಲತಾ ವಾಳಕೆ, ಜೊಲ್ಲೆ ಗ್ರೂಪ್‌ನ ಮುಖ್ಯ ಶಿಕ್ಷಣ ಆಡಳಿತಾಧಿಕಾರಿ ಡಾ.ಶಿರಿಷ ಕೇರೂರ, ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸಾಯಿಟಿಯ ಸಿ.ಇ.ಒಗಳಾದ ಆರ್.ಸಿ. ಚೌಗಲಾ, ಪ್ರಧಾನ ವ್ಯವಸ್ಥಾಪಕ ಬಿ.ಎ. ಗುರವ, ವಿಜಯ ಖಡಕಬಾವಿ ಉಪಸ್ಥಿತರಿದ್ದರು.

ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ ಯಕ್ಸಂಬಾ (ಮಲ್ಟಿಸ್ಟೇಟ್) ಹಾಗೂ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಸದಸ್ಯರು, ಉಪಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ಶಿಕ್ಷಕರು ಉಪಸ್ಥಿತರಿದ್ದರು. ಪೂರ್ವಾ, ಅನನ್ಯಾ, ಚೌಗಲೆ ಸ್ವಾಗತಿಸಿದಳು. ವಾಲಿಕರ ನಿರೂಪಿಸಿದರು. ನೇತ್ರಾ ಗಜಬರ ವಂದಿಸಿದರು.