ಮಾಜಿ ಸಿಎಂ ಎಚ್ಡಿಕೆ ಗೆಲುವು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ

| Published : Apr 27 2024, 01:16 AM IST

ಮಾಜಿ ಸಿಎಂ ಎಚ್ಡಿಕೆ ಗೆಲುವು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ಜಿಲ್ಲೆಯಿಂದ 2 ಲಕ್ಷಕ್ಕೂ ಅಧಿಕ ಮತಗಳಿಂದ ಎಚ್ .ಡಿ.ಕುಮಾರಸ್ವಾಮಿ ಜಯಭೇರಿ ಬಾರಿಸಲ್ಲಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ಎದುರಾಳಿಗಿಂತ 50 ಸಾವಿರಕ್ಕೂ ಹೆಚ್ಚು ಮತಗಳು ಬರಲಿವೆ. ಹಣ ಬಲವೋ ಅಥವಾ ಜನಬಲವೋ ಎಂಬುವುದು ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ತಿಳಿಯಲಿದೆ. ಮತದಾರರೇ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ಮತಗಟ್ಟೆ ಸಂಖ್ಯೆ 164 ರಲ್ಲಿ ಮತಚಲಾಯಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರ ಜನ ಪರ ಕೆಲಸಗಳನ್ನು ನೋಡಿ ಜಿಲ್ಲೆಯ ಜನರು ಮತ ನೀಡಿದ್ದಾರೆ ಎಂದರು.

ಚುನಾವಣೆಯಲ್ಲಿ ಜಿಲ್ಲೆಯಿಂದ 2 ಲಕ್ಷಕ್ಕೂ ಅಧಿಕ ಮತಗಳಿಂದ ಎಚ್ .ಡಿ.ಕುಮಾರಸ್ವಾಮಿ ಜಯಭೇರಿ ಬಾರಿಸಲ್ಲಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ಎದುರಾಳಿಗಿಂತ 50 ಸಾವಿರಕ್ಕೂ ಹೆಚ್ಚು ಮತಗಳು ಬರಲಿವೆ. ಹಣ ಬಲವೋ ಅಥವಾ ಜನಬಲವೋ ಎಂಬುವುದು ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ತಿಳಿಯಲಿದೆ. ಮತದಾರರೇ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ ಎಂದರು.

ಇದೇ ವೇಳೆ ಪತ್ನಿ ಪ್ರಮೀಳಾ ತಮ್ಮಣ್ಣ, ಪುತ್ರ ಸಂತೋಷ್‌ ತಮ್ಮಣ್ಣ, ಸೊಸೆ ಕವಿತಾ ಸಂತೋಷ್ ಮತಚಲಾಯಿಸಿದರು.

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಮಾದನಾಯಕನಹಳ್ಳಿ ರಾಜಣ್ಣ, ಮಂಚೇಗೌಡ, ಪ್ರದೀಪ್, ಹೊನ್ನಪ್ಪ, ಸೇರಿದಂತೆ ಹಲವರಿದ್ದರು.ಶೇ.80ರಷ್ಟು ಜನರು ಕುಮಾರಣ್ಣನಿಗೆ ಬೆಂಬಲ; ಗೆಲುವು ಖಚಿತ: ಮಾಜಿ ಶಾಸಕ ಡಾ.ಕೆ.ಅನ್ನದಾನಿಕನ್ನಡಪ್ರಭ ವಾರ್ತೆ ಹಲಗೂರುಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.80ರಷ್ಟು ಜನರು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಗೆ ಮತ ಹಾಕಿದ್ದು, ಇದರಿಂದ ಕುಮಾರಣ್ಣರ ಗೆಲುವು ಖಚಿತ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಸ್ವ-ಗ್ರಾಮ ಹುಸ್ಕೂರಿನಲ್ಲಿ ತಮ್ಮ ಪುತ್ರನ ಜೊತೆ ಬಂದು ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ಹೋರಾಟಕ್ಕೆ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಇತ್ತು. ಅದಕ್ಕಾಗಿ ಕುಮಾರಣ್ಣನನ್ನು ಬೆಂಬಲಿಸಿ ಕ್ಷೇತ್ರದ ಜನ ಮತ ಚಲಾಯಿಸಿದ್ದಾರೆ ಎಂದರು.ಮಳವಳ್ಳಿ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದೇನೆ. ಕುಮಾರಣ್ಣ ಪರ ಹೆಚ್ಚು ಮತದಾನವಾಗಿರುವ ಅಭಿಪ್ರಾಯಗಳು ಬಂದಿವೆ. ನನಗೆ ರಾಜಕೀಯ ಬದುಕು ಕಟ್ಟಿ ಕೊಟ್ಟವರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಅವರಿಗೆ ಮತ ಹಾಕಿದ್ದೇನೆ ಎಂಬ ಸಂತೋಷವಿದೆ ಎಂದರು.

ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಮತದಾನ ನಡೆದಿದೆ. ಅದರಲ್ಲಿ ಎನ್‌ಡಿಎ ಮೈತ್ರಿ ಕೂಟ 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಮೈಸೂರು ಭಾಗದಲ್ಲಿ ಎಲ್ಲ ಕ್ಷೇತ್ರಗಳು ಬಿಜೆಪಿ- ಜೆಡಿಎಸ್ ಪಾಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜಕೀಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೊಸಬರು. ಹಣಬಲದಿಂದ ಗುರ್ತಿಸಿಕೊಂಡವರು ಸಮಾಜ ಸೇವೆ ಮಾಡದೇ ದುಡ್ಡಿನಿಂದ ಎಲ್ಲವನ್ನು ಪಡೆಯಬಹುದು ಎಂದು ಕೊಂಡಿದ್ದಾರೆ. ಈ ಕ್ಷೇತ್ರದ ಕಾಂಗ್ರೆಸ್ ಶಾಸಕರು ದುಡ್ಡಿನಿಂದಲೇ ಎಲ್ಲವನ್ನು ಮಾಡಬಹುದು ಎಂದು ತಿಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.