ಕೆ. ಅಯ್ಯನಹಳ್ಳಿಯ ವ್ಯವಸಾಯ ಸಹಕಾರ ಸಂಘಕ್ಕೆ ಮೂರು ಲಕ್ಷಗಳ ಪೀಠೋಪಕರಣ ನೀಡುವೆ ಎಂದು ಭರವಸೆ ನೀಡಿದ ಶಾಸಕ ಮತ್ತಷ್ಟು ಬಗೆಯ ಜನಸ್ನೇಹಿ ರೈತ ಸ್ನೇಹಿ ಕಾರ್ಯ ಎಸಗುತ್ತ ಉತ್ತಮ ಕಾರ್ಯ ಯೋಜನೆ ಮುಂದುವರೆಸಿ
ಕೊಟ್ಟೂರು: ಕೆ. ಅಯ್ಯನಹಳ್ಳಿಯಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ರೈತರಿಗೆ ಸುಲಭವಾಗಿ ದೊರಕುವ ರಸಗೊಬ್ಬರ ವಿತರಿಸುವ ಕ್ರಮ ಸೇರಿದಂತೆ ಸಂಘ ವ್ಯಾಪ್ತಿಯ ಪ್ರತಿ ವಹಿವಾಟುದಾರರಿಗೂ ಮತ್ತಿತರರಿಗೆ ಆರ್ಥಿಕ ಸದೃಢಗೊಳಿಸುವ ಕಾರ್ಯ ಚೆನ್ನಾಗಿ ಮಾಡುತ್ತಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ಗುರುವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಗೋದಾಮನ್ನು ಉದ್ಘಾಟಿಸಿ ಸಂಘದ ಪ್ರತಿಯೊಬ್ಬರನ್ನು ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸದಾ ಲಾಭದಲ್ಲಿ ಇರುವ ಮೂಲಕ ಸಕಾಲದಲ್ಲಿ ಕೈಗೆಟುಕುವ ರೀತಿಯಲ್ಲಿ ಸಾಲ ವಿತರಣೆ ಮತ್ತು ವಸೂಲಾತಿ ಸಮರ್ಪಕವಾಗಿ ಮಾಡುತ್ತ ಆರ್ಥಿಕ ಸ್ವಾವಲಂಬನೆ ರೂಢಿಸಿಕೊಂಡು ಇದೀಗ ಯಾವ ಅನುದಾನದ ಸಹಾಯವಿಲ್ಲದೇ ಸ್ವಂತವಾಗಿ ನೂತನ ಕಟ್ಟಡ ಮತ್ತು ಗೋದಾಮನ್ನು ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಕೆ. ಅಯ್ಯನಹಳ್ಳಿಯ ವ್ಯವಸಾಯ ಸಹಕಾರ ಸಂಘಕ್ಕೆ ಮೂರು ಲಕ್ಷಗಳ ಪೀಠೋಪಕರಣ ನೀಡುವೆ ಎಂದು ಭರವಸೆ ನೀಡಿದ ಶಾಸಕ ಮತ್ತಷ್ಟು ಬಗೆಯ ಜನಸ್ನೇಹಿ ರೈತ ಸ್ನೇಹಿ ಕಾರ್ಯ ಎಸಗುತ್ತ ಉತ್ತಮ ಕಾರ್ಯ ಯೋಜನೆ ಮುಂದುವರೆಸಿ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ಧಾರುಕೇಶ, ಮಲ್ಲಿನಾಥ, ಎಂ.ಎಂ.ಜೆ. ಶೋಭಿತ್, ಶ್ಯಾನುಬೋಗರ ಗುರುಮೂರ್ತಿ ಎಚ್.ಡಿ. ಬಸವನಗೌಡ, ಗೋನಾಳ್ ಬಸವರಾಜ, ಎಂ.ಓ.ಕೆ. ಕೊಟ್ರಯ್ಯ, ಸಂಕೋಳ್ ಪ್ರಕಾಶ ಎಂ.ಜಿ.ಕೊಟ್ರಯ್ಯ, ಪರಮೇಶ್ವರಯ್ಯ, ಬೂದಿ ಶಿವಕುಮಾರ, ಚಿರಿಬಿ ಕೊಟ್ರೇಶ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಕುಮಾರ ಎಂ, ಉಪಾಧ್ಯಕ್ಷೆ ಎ.ಎಂ.ಎಂ. ರೇವಮ್ಮ, ನಿರ್ದೇಶಕರುಗಳಾದ ಎ.ಎಂ.ಜಿ. ಮಲ್ಲಿಕಾರ್ಜುನ, ಜನಾರ್ಧನ, ಕೆ.ಪಿ. ಸಿದ್ದರಾಮನಗೌಡ, ಗಂದೂಡಿ ಮುಲಕಪ್ಪ, ಶಂಕ್ರಪ್ಪ, ಜೆ. ಹನುಮಂತಪ್ಪ, ಎ.ವಿ.ಕೆ. ವೀರಯ್ಯ, ಸಂಗಮ್ಮ ಕಾಳಮ್ಮ, ಅಂಬಳಿ ಕೊಟ್ರಪ್ಪ, ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಜಿ. ಕೊಟ್ರೇಶ, ಕ್ಷೇತ್ರಾಧಿಕಾರಿ ಅಂಬಳಿ ಕೊಟ್ರೇಶ, ಪ್ರವೀಣ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.