ಸಾರಾಂಶ
ಜನರ ನಿರೀಕ್ಷೆಯಂತೆ ಬಿಜೆಪಿ ಪಕ್ಷ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ್, ರಾಜಸ್ಥಾನ ಮತ್ತು ಛತ್ತಿಸ್‌ಘಡನಲ್ಲಿ ಪ್ರಚಂಡ ಜಯಗಳಿಸಿದೆ.
ಕನ್ನಡಪ್ರಭ ವಾರ್ತೆ, ತುಮಕೂರು
ಜನರ ನಿರೀಕ್ಷೆಯಂತೆ ಬಿಜೆಪಿ ಪಕ್ಷ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ್, ರಾಜಸ್ಥಾನ ಮತ್ತು ಛತ್ತಿಸ್‌ಘಡನಲ್ಲಿ ಪ್ರಚಂಡ ಜಯಗಳಿಸಿದೆ. ತೆಲಂಗಾಣದಲ್ಲಿಯೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಬಿಜೆಪಿ ಪಡೆದಿದ್ದು, ಕಾಂಗ್ರೆಸ್ ಪಕ್ಷವನ್ನು ಜನರು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಐರನ್ ಲೆಗ್ ಎಂದು ಪ್ರಧಾನಿಯವರನ್ನು ಗೇಲಿ ಮಾಡುತಿದ್ದ ಕಾಂಗ್ರೆಸ್ ಮುಖಂಡರಿಗೆ ಸರಿಯಾದ ಉತ್ತರ ನೀಡಿದೆ. ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ನೋಡಲು ಪ್ರಧಾನಿ ತೆರಳಿದ್ದರು. ಪಂದ್ಯ ಸೋಲಲು ಪ್ರಧಾನಿ ಹೋಗಿದ್ದೇ ಕಾರಣ ಎಂಬಂತೆ ಕೆಲವರು ಬಿಂಬಿಸಿದರು. ಇದಕ್ಕೆಲ್ಲಾ ಜನತೆ ಉತ್ತರ ನೀಡಿದ್ದಾರೆ ಎಂದರು.
ಐದು ರಾಜ್ಯಗಳ ಚುನಾವಣೆ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಇದ್ದಂತೆ, ಬಾರಿ ಅಂತರದಿಂದ ನಮಗೆ ಜನತೆ ಬೆಂಬಲ ಸೂಚಿಸಿ ವಿಜಯ ನಿಮ್ಮದೆ ಎಂಬ ರೀತಿಯಲ್ಲಿ ಭವಿಷ್ಯ ನುಡಿದ್ದಾರೆ. ಹಾಗಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆಮೋದಿ ಅವರ ಮೂರನೇ ಬಾರಿಗೆ ಪ್ರಧಾನಿಯಾಗುವುದು ಸೂರ್ಯ, ಚಂದ್ರ ರಿರುವಷ್ಟೇ ಸತ್ಯ ಎಂದ ಎಂ. .ಪಿ.ರೇಣುಕಾಚಾರ್ಯ, ಕಾಂಗ್ರೆಸ್‌ನ ಬಿಟ್ಟಿ ಭರವಸೆಗಳಿಗೆ ಮಧ್ಯಪ್ರದೇಶ, ಚತ್ತಿಸ್‌ಘಡ, ರಾಜ್ಯಸ್ಥಾನದ ಜನತೆ ಮನ್ನಣೆ ನೀಡಿಲ್ಲ. ಸಚಿವರಾಗಿರುವ ಎಂ.ಜೆಡ್. ಜಮೀರ್ ಅಹಮದ್ ಖಾನ್ ತನ್ನದೇ ಘನ ಇತಿಹಾಸವಿರುವ ಕರ್ನಾಟಕದ ಮರ್ಯಾದೆಯನ್ನು ತೆಲಂಗಾಣದಲ್ಲಿ ಮಣ್ಣು ಪಾಲು ಮಾಡಿದ್ದಾರೆ. ಜಮೀರ್ ಅಹಮದ್‌ಖಾನ್ ಅವರಿಗೆ ಮಂತ್ರಿಗಿರಿ ನೀಡಿರುವುದು ಮಂಗನ ಕೈಯಲ್ಲಿ ಮಾಣಿಕ್ಯ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳು ಹಳ್ಳ ಹಿಡಿಯುತ್ತಲಿವೆ. ಶಕ್ತಿ ಯೋಜನೆಯ ಉಚಿತ ವಿದ್ಯುತ್‌ಗೆ, ಅನಿಯಮಿತಿ ಲೋಡ್‌ಶಡ್ಡಿಂಗ್ ಸಾಕ್ಷಿಯಾಗಿದೆ. ಗೃಹ ಲಕ್ಷ್ಮಿ ಶೇ೪೦ರಷ್ಟು ಜನರಿಗೆ ತಲುಪಿಯೇ ಇಲ್ಲ. ಅನ್ನಭಾಗ್ಯದಲ್ಲಿ ನೀಡುತ್ತಿರುವ ಅಕ್ಕಿ ಕೇಂದ್ರ ಸರ್ಕಾರದ್ದು, ಯುವ ನಿಧಿ ಇನ್ನೂ ಜಾರಿಗೆ ಬಂದೇ ಇಲ್ಲ. ಹಾಗಾಗಿ, ಜನತೆಗೆ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.
ಈ ವೇಳೆ ಟಿ.ಆರ್.ಸದಾಶಿವಯ್ಯ, ರಂಗಾನಾಯಕ್, ಯಶಸ್ಸ್, ಅರುಣ್, ಜ.ಜಗದೀಶ್, ಗಂಗೇಶ್, ಪ್ರತಾಪ್, ಚಂಗಾವಿ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.