ಕನ್ನಡಪ್ರಭ ವಾರ್ತೆ, ಮಾಲೂರು
ನಗರದಲ್ಲಿ ವಿವಿಧೆಡೆ ಬಕ್ರೀದ್ ಹಬ್ಬಕ್ಕೆ ಸಂತೆಗಳಲ್ಲಿ ಟಗರು ಹಾಗೂ ಮೇಕೆಗಳನ್ನು ಕೊಂಡು ತಂದಿದ್ದು ಬಕ್ರೀದ್ ದಿನವಾದ ಗುರುವಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಮಾಂಸವನ್ನು ದಾನ ಮಾಡುತ್ತಾರೆ.ಮುಸ್ಲಿಂ ಸಮುದಾಯದವರಿಗೆ ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ರಂಜಾನ್ ನಂತರ ಬರುವ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಮೇಲಿನ ಭಕ್ತಿಯಿಂದ ಕುರಿ, ಮೇಕೆಯನ್ನು ಬಲಿಕೊಡುತ್ತಾರೆ. ಹಬ್ಬದ ದಿನ ಮುಂಜಾನೆ ಹೊಸ ಬಟ್ಟೆ ಧರಿಸಿ ಮಸೀದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಬಡವರಿಗೆ ಮತ್ತೊಂದು ಭಾಗ ಸಂಬಂಧಿಕರಿಗೆ ಮತ್ತು ಮೂರನೆಯ ಭಾಗವನ್ನು ಸ್ವಂತ ಕುಟುಂಬಸ್ಥರಿಗೆ ಕೊಡುತ್ತಾರೆ.ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಮಯ ಮಾಡಿಕೊಂಡು ಸಿಹಿ ತಿಂಡಿ ಹಂಚಿಕೊಳ್ಳುತ್ತಾರೆ. ಈ ಹಬ್ಬವು ದೇವರ ಮೇಲೆಯೇ ನಂಬಿಕೆ ನಿಸ್ವಾರ್ಥ ಮತ್ತು ಬಡವರ ಮೇಲಿನ ದಯೆ ತೋರುತ್ತದೆ ಎಂದು ಹೇಳುತ್ತಾರೆ.ಬಕ್ರೀದ್ ಹಬ್ಬದ ಪ್ರಯುಕ್ತ ಖರೀದಿ ಮಾಡಿ ತಂದಿರುವ ಮೇಕೆ, ಟಗರು, ಕುರಿಗಳನ್ನು ಹೆಚ್ಚಿನ ಬೆಲೆಕೊಟ್ಟು ಖರೀದಿಸಿದ್ದಾರೆ. ಮೇ ೨೮ ರಂದು ನಡೆಯುವ ಬಕ್ರೀದ್, ಹಬ್ಬಕ್ಕೆ ಅಗತ್ಯವಿರುವ ಟಗರು-ಕುರಿಗಳನ್ನು ಖರೀದಿಸಲು ಮುಸ್ಲಿಂ ಸಮುದಾಯದ ಜನರು ಹೆಚ್ಚು ಹಳ್ಳಿಗಳ ಕಡೆ ಗ್ರಾಮೀಣ ಭಾಗದಲ್ಲಿ ಸಂತೆಗಳಲ್ಲಿ ಮಾರಾಟವಾಗುವ ಕಡೆಗಳಲ್ಲಿ ಖರೀದಿ ಮಾಡಿದ್ದಾರೆ. ಬಕ್ರೀದ್ ಹಬ್ಬಕ್ಕೆ ಕುರಿ ಟಗರಿಗೆ ಬೇಡಿಕೆ ಹೆಚ್ಚು.ಮಾಲೂರಲ್ಲಿ ಬಕ್ರೀದ್ಗಾಗಿದುಬಾರಿ ಟಗರು, ಮೇಕೆ ಖರೀದಿ
ಮುಸ್ಲಿಂ ಸಮುದಾಯದವರಿಗೆ ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ರಂಜಾನ್ ನಂತರ ಬರುವ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಮೇಲಿನ ಭಕ್ತಿಯಿಂದ ಕುರಿ, ಮೇಕೆಯನ್ನು ಬಲಿಕೊಡುತ್ತಾರೆ. ಹಬ್ಬದ ದಿನ ಮುಂಜಾನೆ ಹೊಸ ಬಟ್ಟೆ ಧರಿಸಿ ಮಸೀದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಬಡವರಿಗೆ ಮತ್ತೊಂದು ಭಾಗ ಸಂಬಂಧಿಕರಿಗೆ ಮತ್ತು ಮೂರನೆಯ ಭಾಗವನ್ನು ಸ್ವಂತ ಕುಟುಂಬಸ್ಥರಿಗೆ ಕೊಡುತ್ತಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.