ಸರ್ಕಾರಿ ನೌಕರಿ ನಿರ್ವಹಿಸಲು ಜ್ಞಾನಕ್ಕಿಂತ ಅನುಭವ ಮುಖ್ಯ: ಪೂರ್ಣಿಮಾ

| Published : May 02 2025, 12:08 AM IST

ಸರ್ಕಾರಿ ನೌಕರಿ ನಿರ್ವಹಿಸಲು ಜ್ಞಾನಕ್ಕಿಂತ ಅನುಭವ ಮುಖ್ಯ: ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಸರ್ಕಾರಿ ಕಚೇರಿಗಳಲ್ಲಿ ನೌಕರಿ ನಿರ್ವಹಿಸಲು ಜ್ಞಾನಕ್ಕಿಂತ ವೃತ್ತಿಯ ಅನುಭವ ಮುಖ್ಯ ಎಂದು ತಾಲೂಕು ದಂಡಾಧಿಕಾರಿ ಸಿ.ಎಸ್. ಪೂರ್ಣಿಮಾ ಹೇಳಿದರು.

ನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ಕಚೇರಿಗಳಲ್ಲಿ ನೌಕರಿ ನಿರ್ವಹಿಸಲು ಜ್ಞಾನಕ್ಕಿಂತ ವೃತ್ತಿಯ ಅನುಭವ ಮುಖ್ಯ ಎಂದು ತಾಲೂಕು ದಂಡಾಧಿಕಾರಿ ಸಿ.ಎಸ್. ಪೂರ್ಣಿಮಾ ಹೇಳಿದರು. ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ಗ್ರೇಡ್-2 ಎನ್.ಆರ್.ಮಂಜುನಾಥ್‍ ಸ್ವಾಮಿ ಮತ್ತು ಚುನಾವಣಾ ಶಿರಸ್ತೇದಾರ್ ಎನ್.ಕೆ.ನಾಗರಾಜ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಬ್ಬರೂ ಸಹ ಅನುಭವ ಉಳ್ಳವರಾಗಿದ್ದು ಇಲಾಖೆಯ ಜಟಿಲ ಸಮಸ್ಯೆಗಳು ಬಂದರೂ ಸಹ ಲೀಲಾಜಾಲವಾಗಿ ಬಗೆಹರಿಸಿ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಕಚೇರಿಯ ಎರಡು ಕಣ್ಣುಗಳಾಗಿದ್ದ ಇಬ್ಬರು ಕಂದಾಯ ಇಲಾಖೆ ಸಮಗ್ರ ಇತಿಹಾಸ ಬಲ್ಲವರಾಗಿದ್ದರು. ಅದರಲ್ಲೂ ಮಂಜುನಾಥ್‍ಸ್ವಾಮಿ ಕೈ ಬರಹದ ಕಾಲದಿಂದಲೂ ಕಂಪ್ಯೂಟರ್ ಡಿಜಿಟಲ್ ವರೆಗೂ ಕಲಿತವರಾಗಿದ್ದರು. ಶ್ರದ್ಧೆ, ಪ್ರಾಮಾಣಿಕತೆಯಿಂದ ವೃತ್ತಿ ನಿರ್ವಹಿಸಿದ ಈ ಇಬ್ಬರು ಉತ್ತಮ ಸೇವೆ ನೀಡಿದ್ದಾರೆ ತಾಲೂಕು ಕಚೇರಿ ವಿವಿಧ ಇಲಾಖೆಗಳ ನೌಕರರ ಪರವಾಗಿ ಬೀಳ್ಕೊಡಲಾಗುತ್ತಿದ್ದು ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿದ ಎನ್.ಆರ್.ಮಂಜುನಾಥಸ್ವಾಮಿ ಮಾತನಾಡಿ, ನನ್ನ ಬಾಲ್ಯದ ಶಿಕ್ಷಕರು, ನಮ್ಮ ಕುಟುಂಬದ ಚಿಕ್ಕಪ್ಪ,ಚಿಕ್ಕಮ್ಮ ಜೊತೆಗೆ ಸಂಭಂಧಿಕರನ್ನು ಸ್ಮರಿಸಿದ ಅವರು, ಸರ್ಕಾರಿ ಕೆಲಸ ಹುಡುಕುತ್ತಿದ್ದ ಅವಧಿಯಲ್ಲಿ ಮೂರು ಇಲಾಖೆಗಳಲ್ಲಿ ನೌಕರಿ ಆದೇಶ ಬಂದಿತ್ತು. ಅನಿವಾರ್ಯವಾಗಿ ನಾನು ಕಂದಾಯ ಇಲಾಖೆ ಆಯ್ಕೆ ಮಾಡಿಕೊಂಡೆ. ಕಂದಾಯ ಇಲಾಖೆಯಲ್ಲಿ 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದು ಕಂದಾಯ ಇಲಾಖೆ ಒಂದು ಅನುಭವ ಮಂಟಪ ಇದ್ದಂತೆ ಇಲ್ಲಿ ಎಷ್ಟು ಕಲಿತರೂ ಸಾಲದು. ಇಲಾಖೆಯಲ್ಲಿ ಇತ್ತೀಚೆಗೆ ಒತ್ತಡದ ಕೆಲಸ ಹೆಚ್ಚುತ್ತಿದ್ದು ನಿರ್ವಹಿಸಲೇ ಬೇಕಾದ ಅನಿವಾರ್ಯತೆ ನೌಕರರಿಗೆ ಇದೆ. ಯಾವುದೇ ಒತ್ತಡ ಮತ್ತು ಗೊಂದಲಗಳಿಲ್ಲದೆ ಕೆಲಸ ನಿರ್ವಹಿಸಿ ಎಂದು ಕಿರಿಯ ನೌಕರರಿಗೆ ಕಿವಿ ಮಾತು ಹೇಳಿದರು. ನಿವೃತ್ತರಾದ ಚುನಾವಣಾ ಶಾಖೆಯ ಎನ್.ಕೆ.ನಾಗರಾಜ್ ಮಾತನಾಡಿ, ಬಹಳಷ್ಟು ಕಾಲ ಇಲ್ಲಿಯೇ ಕಾರ್ಯ ನಿರ್ವಹಿಸಿದ್ದು ಎಲ್ಲರ ಪ್ರೀತಿ ಅಭಿಮಾನವೇ ನನಗೆ ಶ್ರೀರಕ್ಷೆ ಎಂದು ಮಾತಿಗೆ ವಿರಾಮ ಹೇಳಿದರು.ರಾಜ್ಯ ಹಟ್ಟಿ ಗೋಲ್ಡ್ ಕಂಪನಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್, ಶಿರಸ್ತೇದಾರ್ ನಾಗರತ್ನ,ಹನುಮಂತಪ್ಪ, ಸುರೇಶ್, ಗಿರೀಶ್ ಭವ್ಯ ಮಾತನಾಡಿದರು. ಕಂದಾಯ ನಿರೀಕ್ಷಕರಾದ ಪಿ.ಆರ್.ರವಿಕುಮಾರ್, ಶ್ರೀನಿವಾಸ್, ಜಿತೇಂದ್ರ ಸಿಂಗ್‍ ನಾಯಕ್, ಆರ್.ರವಿಕುಮಾರ್, ನಾಗರಾಜ್, ತಿಪ್ಪೇಶಪ್ಪ, ಗಿರೀಶ್, ಬಿ.ರವಿ,ಗ್ರಾಮ ಆಡಳಿತಾಧಿಕಾರಿ ರವೀಂದ್ರ, ಲಿಂಗರಾಜ್ ಹಾಗೂ ಜ್ಯೋತಿ ಮಂಜುನಾಥಸ್ವಾಮಿ ಕುಟುಂಬ ಮತ್ತಿತರರು ಇದ್ದರು.30ಕೆಕೆಡಿಯು1.ಕಡೂರು ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗ್ರೇಡ್ -2 ತಹಸೀಲ್ದಾರ್ ಮಂಜುನಾಥಸ್ವಾಮಿ ಮತ್ತು ಚುನಾವಣಾ ಶಿರಸ್ತೇದಾರ್ ನಾಗರಾಜು ನಿವೃತ್ತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮತ್ತು ಕಂದಾಯ ಇಲಾಖೆ ನೌಕರ ವರ್ಗದವರು ಸನ್ಮಾನಿಸಿ ಬೀಳ್ಕೊಟ್ಟರು.