ಉಪನಿಷತ್ತುಗಳಲ್ಲಿ ಮನುಷ್ಯ ಜನ್ಮದ ಶ್ರೇಷ್ಠತೆಯ ವಿವರಣೆ: ಪ್ರೊ ರಾಮಚಂದ್ರ ಭಟ್‌

| Published : Jan 16 2024, 01:46 AM IST

ಉಪನಿಷತ್ತುಗಳಲ್ಲಿ ಮನುಷ್ಯ ಜನ್ಮದ ಶ್ರೇಷ್ಠತೆಯ ವಿವರಣೆ: ಪ್ರೊ ರಾಮಚಂದ್ರ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಆಶ್ರಯದಲ್ಲಿ ಹೋಟೇಲ್ ಪ್ರಕಾಶ್ ಸಭಾಂಗಣದಲ್ಲಿ ಉಪನಿಷದ್ ವರ್ಷ-ತಿಂಗಳ ಉಪನ್ಯಾಸ ಮಾಲೆ ನಡೆಯಿತು. ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕ ಪ್ರೊ.ರಾಮಚಂದ್ರ ಜಿ. ಭಟ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಮನುಷ್ಯ ಜನ್ಮದ ಶ್ರೇಷ್ಠತೆಯನ್ನು ವಿಜ್ಞಾನದ ವಿವರಣೆಯೊಂದಿಗೆ ಕರಾರುವಕ್ಕಾಗಿ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಅಲ್ಲಿರುವ ವಿವರಣೆಗಳು ವೈಜ್ಞಾನಿಕವಾಗಿಯೂ ಸತ್ಯ ಎಂಬುದು ಸಾಬೀತಾಗಿದೆ ಎಂದು ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕ ಪ್ರೊ.ರಾಮಚಂದ್ರ ಜಿ. ಭಟ್ ಹೇಳಿದರು.

ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಆಶ್ರಯದಲ್ಲಿ ಹೋಟೇಲ್ ಪ್ರಕಾಶ್ ಸಭಾಂಗಣದಲ್ಲಿ ನಡೆದ ಉಪನಿಷದ್ ವರ್ಷ-ತಿಂಗಳ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ವೇದ ಮೂಲವಾಗಿ ೧೦೮ ಉಪನಿಷತ್ತುಗಳಿದ್ದರೂ ಅದರಲ್ಲಿ ವೇದಮಂಥನದಿಂದ ರೂಪತಾಳಿದ ದಶ ಉಪನಿಷತ್ತುಗಳು ಮುಖ್ಯವಾಗಿರುವಂಥದ್ದು. ಉಪನಿಷತ್‌ಗಳಲ್ಲಿ ವಿದ್ಯೆಯ ಬಗ್ಗೆ ವಿಶೇಷ ಉಲ್ಲೇಖವಿದ್ದು, ಇಂತಹ ಉಪನಿಷತ್‌ಗಳು ಇಂದು ಪ್ರವಚನಕ್ಕಷ್ಟೇ ಸೀಮಿತವಾಗಿದೆ. ಶಿಕ್ಷಣದಲ್ಲಿಯೂ ಇದು ಸೇರ್ಪಡೆಗೊಂಡು ಎಲ್ಲರೂ ಇದನ್ನು ಅಧ್ಯಯನ ನಡೆಸಿ ತಮ್ಮ ಜೀವನವನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ತಿಳಿಸಿದರು.

ಇದೇ ಸಂದರ್ಭ ಡಾ.ಬಿ.ಭಾಸ್ಕರ ರಾವ್ ಅವರ ‘ಮನುಸ್ಮೃತಿ-ಒಂದು ವಿಶೇಷ ಕೃತಿ’ ಅನ್ನುವ ಪುಸ್ತಕವನ್ನು ಪ್ರೊ. ರಾಮಚಂದ್ರ ಜಿ. ಭಟ್ ಲೋಕಾರ್ಪಣೆಗೊಳಿಸಿದರು. ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಮತ್ತು ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಿತ್ರಪ್ರಭಾ ಹೆಗ್ಡೆ ವಂದಿಸಿದರು.