ಶೋಷಿತರು ಶಿಕ್ಷಣವನ್ನು ಗುರಿಯಾಗಿಸಿ ಬದುಕಿ: ಡಾ.ಧರ್ಮೇಂದ್ರ ಭೊಸಲೆ

| Published : Apr 15 2024, 01:24 AM IST

ಶೋಷಿತರು ಶಿಕ್ಷಣವನ್ನು ಗುರಿಯಾಗಿಸಿ ಬದುಕಿ: ಡಾ.ಧರ್ಮೇಂದ್ರ ಭೊಸಲೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಕಲ್ಯಾಣ ಪಟ್ಟಣದ ಡಾ. ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರದ ಆವರಣದಲ್ಲಿ ಭಾನುವಾರ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ಬಸವಕಲ್ಯಾಣ (ಹುಲಸೂರು): ಶಿಕ್ಷಣ ಸಂಘಟನೆ ಹಾಗೂ ಹೋರಾಟ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು. ಅಂದಾಗ ಮಾತ್ರ ನಾವು ಉತ್ತಮ ಜೀವನ ನಡೆಸಲು ಸಾಧ್ಯ. ಶೋಷಿತ ವರ್ಗಗಳ ಜನರು ಶಿಕ್ಷಣ ತಮ್ಮ ಜೀವನದ ಅಂತಿಮ ಗುರಿಯಾಗಿಟ್ಟುಕೊಂಡು ಬದುಕಬೇಕೆಂದು ಡಾ.ಧರ್ಮೇಂದ್ರ ಭೊಸಲೆ ತಿಳಿಸಿದರು,

ಪಟ್ಟಣದ ಡಾ. ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರದ ಆವರಣದಲ್ಲಿ ಭಾನುವಾರ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ನಮ್ಮ ಆಸ್ತಿ ಹಾಗೂ ಅವರಿಂದಲೆ ನಮ್ಮ ದೇಶದ ಉದ್ಧಾರ ಸಾಧ್ಯ. ಅವರು ತಿಳಿಸಿದಂತೆ ಶಿಕ್ಷಣ ಸಂಘಟನೆ ಹಾಗೂ ಹೋರಾಟ ಪ್ರತಿಯೊಬ್ಬರ ಜೀವನದ ಶೈಲಿ ಆಗಬೇಕು. ಅಂದಾಗ ಮಾತ್ರ ನಾವು ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಾಲುಬಾಯಿ ಬನಸೋಡೆ, ಪ್ರಲ್ಹಾದರಾವ ಮೋರೆ, ತಾಪಂ. ಮಾಜಿ ಸದಸ್ಯ ರಾಮರಾವ ಮೋರೆ, ಗ್ರಾಪಂ.ಸದಸ್ಯ ವಿದ್ಯಾಸಾಗರ ಬನಸೋಡೆ, ಧನರಾಜ ಸೂರ್ಯವಂಶಿ, ಮಾಧವ ಸೂರ್ಯವಂಶಿ, ಮಾರುತಿ ಬೇಂದ್ರೆ, ದತ್ತು ಮೊರೆ, ಸಂದಿಪ, ಸೂರ್ಯವಂಶಿ, ಝರನು ಸೂರ್ಯವಂಶಿ ಹಣಮಂತ ಕುಶೆ ವಿನೋದ ,ಮೇಘ ಶಾಮ, ವಿಶಾಲ, ಮನೋಜ, ಶಂಕರ, ರಾಜಕುಮಾರ ತೊಂಡಾರೆ, ಗ್ರಾಪಂ ವಿವೇಕ ಚಳಕಾಪೂರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.