ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ರೈತರ ಹೊಲಗಳಿಗೆ ನ.12ರಿಂದ ನ.30ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಸಾಮೂಹಿಕ ನೇತೃತ್ವದಲ್ಲಿ ನ.6 ಯಾದಗಿರಿ ಜಿಲ್ಲೆ ಸಂಪೂರ್ಣ ಬಂದ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಂದಿನ ಬಂದ್ಗೆ ಜಿಲ್ಲೆಯ ಸರ್ವರೂ ಸಹಕರಿಸಬೇಕೆಂದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ರೈತರ ಹೊಲಗಳಿಗೆ ನ.12ರಿಂದ ನ.30ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಸಾಮೂಹಿಕ ನೇತೃತ್ವದಲ್ಲಿ ನ.6 ಯಾದಗಿರಿ ಜಿಲ್ಲೆ ಸಂಪೂರ್ಣ ಬಂದ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಂದಿನ ಬಂದ್ಗೆ ಜಿಲ್ಲೆಯ ಸರ್ವರೂ ಸಹಕರಿಸಬೇಕೆಂದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಮನವಿ ಮಾಡಿದ್ದಾರೆ.ಇಲ್ಲಿನ ಹಳೆ ಐಬಿಯಲ್ಲಿ ಬುಧವಾರ ಬಂದ್ ಕುರಿತಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯ ರೈತರ ಹಿತ ಕಾಪಾಡುವ ಹಿನ್ನೆಲೆಯಲ್ಲಿ ಬಂದ್ಗೆ ಮುಂದಾಗಿದ್ದು, ಇದು ಪಕ್ಷಾತೀತ ಹೋರಾಟವಾಗಿದೆ. ಅದಕ್ಕೆ ನಾವು ಸರ್ಕಾರಕ್ಕೆ ಇಲ್ಲಿನ ಡಿಸಿ ಮೂಲಕ ಮನವಿ ಸಲ್ಲಿಸಿ ನ.5ರೊಳಗಾಗಿ ಈ ಬಗ್ಗೆ ತಿರ್ಮಾನ ತೆಗೆದುಕೊಂಡು ಅದನ್ನು ಪ್ರಕಟಿಸಬೇಕು. ಇಲ್ಲವಾದರೆ ನ.6ರಂದು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದವು. ಆದರೂ ಇಲ್ಲಿಯವರೆಗೂ ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಮೇಲಾಗಿ ತಮ್ಮನ್ನು ಸೇರಿ ಯಾವುದೇ ರೈತ, ಕನ್ನಡ ಪರ ಹೋರಾಟಗಾರರನ್ನು ಕರೆದು ಬೇಡಿಕೆ ಬಗ್ಗೆ ಚರ್ಚಿಸಿಲ್ಲ. ಕಾರಣ ಮೊದಲೇ ತೀರ್ಮಾನ ಮಾಡಿದಂತೆ ನ.6ರಂದು ಯಾದಗಿರಿ ಜಿಲ್ಲೆ ಬಂದ್ ಮಾಡಿ ಬೇಡಿಕೆಗೆ ಆಗ್ರಹಿಸಲಾಗುವುದೆಂದರು.
ಜಿಲ್ಲೆಯ ಆರು ತಾಲೂಕುಗಳ ಕೇಂದ್ರ ಸ್ಥಾನಗಳಲ್ಲಿ ಬಂದ್ ಹೋರಾಟ ನಡೆಸಲಾಗುವುದು, ಮುಖ್ಯವಾಗಿ ಜಿಲ್ಲಾ ಕೇಂದ್ರದಲ್ಲಿ ದೊಡ್ಡಮಟ್ಟದಲ್ಲಿ ಬಂದ್ ಕರೆ ನೀಡಲಾಗಿದೆ. ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಎಲ್ಲಡೆ ಪ್ರತಿಭಟನೆ ನಡೆಸಲಾಗುವುದು. ನಗರದಲ್ಲಿ ಬೆಳಗ್ಗೆ 10ಕ್ಕೆ ಗಾಂಧಿ ಸರ್ಕಲ್ನಲ್ಲಿ ಸಾವಿರಾರು ಜನರು ಸೇರಿ ಅಲ್ಲಿಂದ ಸುಭಾಶ್ಚಂದ್ರ ಭೋಸ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಲಾಗುವುದು ಎಂದರು.ದೀಪಾವಳಿ ಹಬ್ಬದ ಹಿನ್ನೆಲೆ ಬಂದ್ ಮಾಡಿದರೆ ಸಾರ್ವಜನಿಕರಿಗೂ ಮತ್ತು ವ್ಯಾಪಾಸ್ಥರಿಗೂ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಅಂದು ಬೆಳಗ್ಗೆಯಿಂದ ಬಂದ್ ಮಾಡಿ ಮಧ್ಯಾಹ್ನ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಸಮಾವೇಶಗೊಂಡು, ಬಹಿರಂಗ ಸಭೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಬೇಡಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದೆಂದರು.
ನ.30ರವರೆಗೆ ನೀರು ಹರಿಸಿದರೇ ಮಾತ್ರ ಜಲಾಶಯದ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಸಿಗುತ್ತವೆ ಎಂದ ಅವರು, ಈ ನಿಟ್ಟಿನಲ್ಲಿ ಸರ್ಕಾರ, ಇಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳುವ ಮೂಲಕ ಸಾವಿರಾರು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. ಈ ವೇಳೆ ಬಿಜೆಪಿ ಮುಖಂಡರಾದ ಲಲಿತಾ ಅನಪುರ, ದೇವಿಂದ್ರನಾಥ ನಾದ್, ಹಣಮಂತ ಇಟಗಿ, ವೆಂಕಟರೆಡ್ಡಿ ಅಬ್ಬೆತುಮಕೂರು, ಟಿ.ಎನ್.ಭೀಮುನಾಯಕ, ರವಿ ಮುದ್ನಾಳ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ್ ಸೇರಿದಂತೆಯೇ ಇತರರಿದ್ದರು.ಹುಣಸಗಿ: ಜಿಲ್ಲಾ ಬಂದ್ಗೆ ಸಾಮೂಹಿಕ ಸಂಘಟನೆಗಳ ಬೆಂಬಲ
ಕನ್ನಡಪ್ರಭ ವಾರ್ತೆ ಹುಣಸಗಿರೈತರ ಬೆಳೆಗಳಿಗೆ ನವೆಂಬರ್ 30ರವರಿಗೂ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜೂಗೌಡ) ಅವರ ನೇತೃತ್ವದಲ್ಲಿ ನ.6 ರಂದು ಕರೆ ನೀಡಿರುವ ಯಾದಗಿರಿ ಜಿಲ್ಲಾ ಬಂದ್ಗೆ ಪಟ್ಟಣದಲ್ಲಿ ಸಾಮೂಹಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಬೆಂಬಲ ಘೋಷಿಸಿದರು. ದಲಿತ ರೈತರ ನೀರಿನ ಸಮಸ್ಯೆ ಹಾಗೂ ಅವರ ಹಿತದೃಷ್ಟಿಯಿಂದ ನವೆಂಬರ್ 6ರಂದು ಕರೆ ನೀಡಿರುವ ಯಾದಗಿರಿ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ರೈತರು ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿದ್ದಾರೆ. ಹೀಗಾಗಿ ಸಮರ್ಪಕವಾಗಿ ನೀರು ದೊರೆಯದಿದ್ದರೆ ಬೆಳೆಗಳು ಒಣಗಿ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ನವೆಂಬರ್ 30ರವರೆಗೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.ಯುವ ಮುಖಂಡ ವೀರೇಶ ಗುಳಬಾಳ ಮಾತನಾಡಿ, ರೈತ ಸಂಘಟನೆ ಮುಖಂಡ ನಾಗಯ್ಯಸ್ವಾಮಿ ದೇಸಾಯಿ, ಗುರು ಮಾತನಾಡಿದರು. ಸಭೆಯಲ್ಲಿ ವಿವಿಧ ಸಾಮೂಹಿಕ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು.