ಕಲಬುರಗಿ ನಗರದ ಶರಣಬಸವ ವಿವಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಸಿಎ (ಮಹಿಳೆಯರಿಗೆ ಮಾತ್ರ) ಪದವಿಯ ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ 24 ವಿದ್ಯಾರ್ಥಿನಿಯರು ಪ್ರತಿಷ್ಠಿತ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 2 ಲಕ್ಷ ರು.ಗಳಿಂದ 6.2 ಲಕ್ಷ ರು.ವರೆಗಿನ ವೇತನದ ಪ್ಯಾಕೇಜ್ ದೊರೆತಿದ್ದು, ಇದು ಶರಣಬಸವ ವಿವಿಯಲ್ಲಿನ ಉದ್ಯೋಗ ನೇಮಕಾತಿಯಲ್ಲಿ ಹೊಸ ದಾಖಲೆಯಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರದ ಶರಣಬಸವ ವಿವಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಸಿಎ (ಮಹಿಳೆಯರಿಗೆ ಮಾತ್ರ) ಪದವಿಯ ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ 24 ವಿದ್ಯಾರ್ಥಿನಿಯರು ಪ್ರತಿಷ್ಠಿತ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 2 ಲಕ್ಷ ರು.ಗಳಿಂದ 6.2 ಲಕ್ಷ ರು.ವರೆಗಿನ ವೇತನದ ಪ್ಯಾಕೇಜ್ ದೊರೆತಿದ್ದು, ಇದು ಶರಣಬಸವ ವಿವಿಯಲ್ಲಿನ ಉದ್ಯೋಗ ನೇಮಕಾತಿಯಲ್ಲಿ ಹೊಸ ದಾಖಲೆಯಾಗಿದೆ.ಈ ಬಗ್ಗೆ ವಿವಿ ಉಪ ಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಮಾಹಿತಿ ನೀಡಿ, ಐವರು ವಿದ್ಯಾರ್ಥಿನಿಯರು ಬೆಂಗಳೂರಿನ ಗ್ಲೋಲಾಜಿಕ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವಾರ್ಷಿಕ 6.2 ಲಕ್ಷ ರು. ವೇತನದೊಂದಿಗೆ ಉದ್ಯೋಗ ಪಡೆದಿದ್ದರೆ, ಇಬ್ಬರು ವಿದ್ಯಾರ್ಥಿನಿಯರು ಗ್ರಾಡ್ಗುರು ಇನ್ನೋವೇಷನ್ಸ್ ಕಂಪನಿಯಲ್ಲಿ ವಾರ್ಷಿಕ 6 ಲಕ್ಷ ರು. ವೇತನದೊಂದಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಡಿಜಿಸ್ನೇರ್ ಟೆಕ್ನಾಲಜಿ ಮತ್ತು ಲಾಹೋಟಿ ಮೋಟಾರ್ಸ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಇನ್ನೂ 17 ವಿದ್ಯಾರ್ಥಿನಿಯರು ವಾರ್ಷಿಕ 2 ಲಕ್ಷ ರು.ಗಳಿಂದ 3.6 ಲಕ್ಷ ರು.ವರೆಗಿನ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಗ್ಲೋಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಕಂಪನಿಗೆ ಪ್ರಣೀತಾ, ನಾಗವೇಣಿ ಹುಲಿಮನಿ, ಅಂಕಿತಾ ಸಿ.ಕೆ., ಶಿವಾನಿ ಹಾಗೂ ರುಶಾನಾ ತಹ್ರೀನ್ ಅವರು ತಲಾ ವಾರ್ಷಿಕ 6.2 ಲಕ್ಷ ರು. ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಗ್ರಾಡ್ಗುರು ಇನ್ನೋವೇಷನ್ಸ್ ಕಂಪನಿಗೆ ಶಿಲ್ಪಾ ಕಲಶೆಟ್ಟಿ ಮತ್ತು ಶ್ರೀದೇವಿ ಅವರು ತಲಾ ವಾರ್ಷಿಕ 6 ಲಕ್ಷ ರು. ವೇತನದೊಂದಿಗೆ ನೇಮಕಗೊಂಡಿದ್ದಾರೆ.ವಾರ್ಷಿಕ 2 ಲಕ್ಷ ರು.ಗಳಿಂದ 3.6 ಲಕ್ಷ ರು.ವರೆಗಿನ ವೇತನದೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾದವರಲ್ಲಿ ಸೃಷ್ಟಿ (ಗ್ಲೋಲಾಜಿಸ್ಟಿಕ್ಸ್ ಸೊಲ್ಯೂಷನ್ಸ್), ದೀಪಿಕಾ ಬಿರಾದಾರ, ನಿಹಾರಿಕಾ ಹಾಗೂ ಪೂರ್ವಿ ಕುಲಕರ್ಣಿ (ಡಿಜಿಸ್ನೇರ್ ಟೆಕ್ನಾಲಜಿ), ಭಾಗ್ಯಶ್ರೀ ನಾವದಗಿ, ಬನಶ್ರೀ, ವಿದ್ಯಾಶ್ರೀ ಅನಶೆಟ್ಟಿ, ಅನಿತಾ, ಯಶಸ್ವಿನಿ, ಪಲ್ಲವಿ ರಾಠೋಡ್, ಈಶ್ವರಿ ರಾಜಪೂತ್, ಸಾಕ್ಷಿ ಶಿವಾನಂದ, ಸಮ್ರೀನ್, ಸೌಮ್ಯ ಕಾಡಾದಿ, ರೇಣುಕಾ ಮೊಳಕೇರಿ, ಪ್ರಿಯಾಂಕಾ ಮದ್ದೂರ ಹಾಗೂ ಶೋಭಾ ಅಫಜಲಪುರಕರ (ಲಾಹೋಟಿ ಮೋಟಾರ್ಸ್) ಆಯ್ಕೆಯಾಗಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿವಿ ಕುಲಾಧಿಪತಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಸಚಿವೆ ಡಾ. ಲಕ್ಷ್ಮಿ ಪಾಟೀಲ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ ಹಾಗೂ ಡೀನ್ ಡಾ. ಶಿವಕುಮಾರ ಜವಳಿಗಿ ಈ ಸಾಧನೆಗೆ ಎಲ್ಲರನ್ನು ಅಭಿನಂದಿಸಿದ್ದಾರೆ.