Extension of the application period for scholarships
ಶಿವಮೊಗ್ಗ: ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದ (ಆವೋಪ) ವತಿಯಿಂದ 2026–27ನೇ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಪಿಯುಸಿ ನಂತರದ ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿ–ವಿದ್ಯಾರ್ಥಿನಿಯರು ನ. 30ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಸಂಘದ ವಿದ್ಯಾನಿಧಿ ಅಧ್ಯಕ್ಷ ವೈ. ಗೋಪಾಲಕೃಷ್ಣ ಗುಪ್ತ ತಿಳಿಸಿದ್ದಾರೆ. ಅರ್ಜಿ ನಮೂನೆಗಳನ್ನು ವೈ. ಗೋಪಾಲಕೃಷ್ಣ ಗುಪ್ತ (ಮೊ. 94485 54438), ಟಿ. ಗೋಪಿನಾಥ (ಮೊ. 94805 05262) ಹಾಗೂ ಎಚ್.ಜಿ. ದತ್ತಕುಮಾರ್ (ಮೊ. 98868 29063) ಅವರಿಂದ ಪಡೆಯಬಹುದು.
