ಸಾರಾಂಶ
ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷ್ಯಿಸಬಾರದು. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಸ್ಥಾನ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅಗತ್ಯವಿದ್ದಲ್ಲಿ ರಿಯಾಯ್ತಿ ದರದಲ್ಲಿ ಕನ್ನಡಕವನ್ನು ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣಿನ ಆರೋಗ್ಯ ಬಹುಮುಖ್ಯವಾಗಿದೆ ಎಂದು ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ತಿಳಿಸಿದರು.ತಾಲೂಕಿನ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಲ್ಲಿ ಬೆಂಗಳೂರಿನ ಲೆನ್ಸ್ ವಿಷನ್ ಕಂಪನಿ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ ನೇತ್ರ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷ್ಯಿಸಬಾರದು. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಸ್ಥಾನ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅಗತ್ಯವಿದ್ದಲ್ಲಿ ರಿಯಾಯ್ತಿ ದರದಲ್ಲಿ ಕನ್ನಡಕವನ್ನು ನೀಡಲಾಗುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಂಡು ದೃಷ್ಟಿ ದೋಷ ಪರಿಹರಿಸಿಕೊಳ್ಳಬೇಕು ಎಂದರು.ಆಸ್ಪತ್ರೆಯ ಸಂಶೋಧನಾ ಅಧಿಕಾರಿ ಡಾ.ನಿತೇಶ್ ಮಾತನಾಡಿ, ಕಣ್ಣಿನ ಸಮಸ್ಯೆ ಮತ್ತು ಆರೋಗ್ಯ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ನೇತ್ರ ತಪಾಸಣೆ ಮಾಡಿಸಿಕೊಂಡರು.
ಈ ವೇಳೆ ಆಸ್ಪತ್ರೆ ಸಂಶೋಧನಾ ಅಧಿಕಾರಿಗಳಾದ ಡಾ.ನುಜಹತ್, ಡಾ. ಸಿಂಧೂಶ್ರೀ, ಡಾ.ಕಾರ್ತಿಕ್, ಡಾ. ಪೂಜಾ, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ತೆರಪಿಸ್ಟ್ ರಮ್ಯ, ಎಂಜಿನಿಯರ್ ನಾಗೇಶ್, ಕಚೇರಿ ಸಿಬ್ಬಂದಿ ಚೈತ್ರ, ಎಂ.ಪ್ರಗತಿ, ಟಿ.ಎ. ಶಿವರಾಜ್ ಸೇರಿದಂತೆ ಲೆನ್ಸ್ ವಿಷನ್ ಕಂಪನಿ ತಜ್ಞ ವೈದ್ಯರು, ಸಿಬ್ಬಂದಿ ಇದ್ದರು.ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರಮದ್ದೂರು:ದೇಶ ಕಾಯುವ ಯೋಧರ ಗೌರವಾರ್ಥ ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆ.15ರಂದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು, ಯುವಕ ಮಿತ್ರರು, ರಕ್ತದಾನಿಗಳ ಒಕ್ಕೂಟ, ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ, ಮಹಿಳಾ ಸರ್ಕಾರಿ ಕಾಲೇಜು (ಸ್ನಾಕತೋತ್ತರ ಅಧ್ಯಯನ ಕೇಂದ್ರ)ದ ಸಹಯೋಗದಲ್ಲಿ ಪಟ್ಟಣದ ತಾಪಂ ಕಚೇರಿ ಪಕ್ಕದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶಿಬಿರ ನಡೆಯಲಿದೆ.ಮಂಡ್ಯ ಸರ್ಕಾರಿ ಆಸ್ಪತ್ರೆ ಬಡ ಅಮೂಲ್ಯ ಜೀವಗಳ ರಕ್ಷಣೆಗಾಗಿ ರಕ್ತದಾನ ಮಾಡಿ ಘೋಷಣೆಯೊಂದಿಗೆ ಗ್ರಾಮೀಣ ಭಾಗದ ಬಡ ರೈತಾಪಿ, ಕೂಲಿ ಕಾರ್ಮಿಕರ ರಕ್ಷಣೆ ಹಿತದೃಷ್ಟಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ರಕ್ತದಾನ ಸಮಾಜ ಸೇವೆಯಲ್ಲ. ಮತ್ತೊಂದು ಅಮೂಲ್ಯ ಜೀವ ಉಳಿಸುವ ಮಾನವನ ಶ್ರೇಷ್ಠ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ.ಜೊತೆಗೆ ಆಯುಷ್ಮಾನ ಭವ ಅಭಿಯಾನದ ಅಡಿಯಲ್ಲಿ ಆಯುಷ್ಮಾನ ಚಿಕಿತ್ಸೆ ಕಾರ್ಡ್, ದೇಹದಾನ ಹಾಗೂ ಅಂಗಾಂಗ ದಾನಿಗಳ ನೋಂದಣಿ ಕೂಡ ನಡೆಯಲಿದೆ. ಆಸಕ್ತರು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಜೊತೆಯಲ್ಲಿ ತರುವಂತೆ ಸಂಘಟಕರು ತಿಳಿಸಿದ್ದಾರೆ.