ಸಾರಾಂಶ
ಲಕ್ಷ್ಮೇಶ್ವರ ಪಟ್ಟಣದ ಚೆನ್ನಮ್ಮನ ವನದಲ್ಲಿ ಮಂಗಳವಾರ ವರದಶ್ರೀ ಫೌಂಡೇಶನ್ ಹಾಗೂ ಈಶ್ವರಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಿದ್ದ ಕಣ್ಣಿನ ಔಷಧಿ ಹಾಕುವ ಕಾರ್ಯಕ್ರಮ ನಡೆಯಿತು.
ಲಕ್ಷ್ಮೇಶ್ವರ: ಕಣ್ಣು ಕಾಣದಿರುವ ಜೀವನ ಊಹಿಸಿಕೊಳ್ಳಲು ಅಸಾಧ್ಯ. ಕಣ್ಣು ನಮ್ಮ ಜೀವನಕ್ಕೆ ಅವಶ್ಯವಾಗಿರುವ ಪ್ರಮುಖ ಅಂಗವಾಗಿದೆ ಎಂದು ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಚೆನ್ನಮ್ಮನ ವನದಲ್ಲಿ ಮಂಗಳವಾರ ವರದಶ್ರೀ ಫೌಂಡೇಶನ್ ಹಾಗೂ ಈಶ್ವರಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಿದ್ದ ಕಣ್ಣಿನ ಔಷಧಿ ಹಾಕುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಕಣ್ಣಿನ ತೊಂದರೆ ನಿವಾರಿಸುವ ಗುಣ ಈ ಸಿದ್ಧ ಔಷಧಿಯಲ್ಲಿ ಇರುವುದು ಕಣ್ಣಿನ ಹನಿ ಹಾಕಿಸಿ ಕೊಂಡವರು ಹೇಳುವುದನ್ನು ಕೇಳಿದ್ದೇನೆ. ಕಣ್ಣು ಇಲ್ಲದಿರುವವರ ಜೀವನ ಬಹಳ ಕಷ್ಟಕರವಾಗಿದೆ. ರಾಸಾಯನಿಕ ರಹಿತ ಸಿದ್ದ ಕಣ್ಣಿನ ಹನಿ ಔಷಧಿ ಯಾವುದೇ ಅಡ್ಡ ಪರಿಣಾಮವೂ ಇಲ್ಲದೆ ದೃಷ್ಟಿದೋಷ ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಕಣ್ಣಿನ ಕಾಯಿಲೆ ವಾಸಿ ಮಾಡುವ ಸಿದ್ದ ಕಣ್ಣಿನ ಹನಿಯು ನಮಗೆಲ್ಲ ವರದಾನವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಕಾರ್ಯಕ್ರಮದ ಕುರಿತು ಮಾತನಾಡಿದರು. ವರದಶ್ರೀ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದ ಔಷಧಿಯು ಕಣ್ಣಿಗೆ ಬರುವ ಕಾಯಿಲೆಗಳು ನಿವಾರಣೆಗೆ ಸೂಕ್ತವಾಗಿದೆ. ಯಾವುದೇ ಅಡ್ಡ ಪರಿಣಾಮ ಇಲ್ಲದೆ ಇರುವ ಈ ಔಷಧಿಯು ಕಣ್ಣಿನ ಹಲವು ಕಾಯಿಲೆಗೆ ರಾಮಬಾಣವಾಗಿದೆ ಎಂದು ಹೇಳಿದರು.ಈ ವೇಳೆ ವಿಜಯಣ್ಣ ಮಹಾಂತಶೆಟ್ಟರ್, ಡಾ. ಗಿರೀಶ ಮರಡ್ಡಿ, ಡಾ. ಪಿ.ಎಚ್. ಕಟಗೇರಿ, ಮಹೇಶ ಲಿಂಬಯ್ಯಸ್ವಾಮಿಮಠ, ಜಯಲಕ್ಷ್ಮೀ ಗಡ್ಡದೇವರಮಠ, ಬ್ರಹ್ಮಕುಮಾರಿಯರಾದ ಶೋಭಾ, ಪವಿತ್ರಾ, ಸುಮಂಗಲಾ ಇದ್ದರು.
ಪಾರ್ವತಿ ಕಳ್ಳಿಮಠ ಪ್ರಾರ್ಥಸಿದರು. ಶಿಕ್ಷಕ ಎ.ಎಂ. ಮಠದ ನಿರೂಪಿಸಿದರು. ಬಸವರಾಜ ಸಂಗಪ್ಪಶೆಟ್ಟರ್ ಸ್ವಾಗತಿಸಿದರು. ಬ್ರಹ್ಮಕುಮಾರಿ ನಾಗಲಾಂಬಿಕೆ ವಂದಿಸಿದರು.