ಸಾರಾಂಶ
ಕನ್ನಡ ಸಾಹಿತ್ಯವು ಇಡೀ ವಿಶ್ವದಲ್ಲೇ ಅತ್ಯಂತ ಶ್ರಿಮಂತಿಕೆಯಿಂದ ಕೂಡಿರುವ ಸಾಹಿತ್ಯವಾಗಿದೆ. ಎಷ್ಟೇ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದಿದರು ಸಹ ಮತ್ತಷ್ಟು ಕಾವ್ಯ ಪುಸ್ತಕಗಳು ಬಾಕಿ ಉಳಿದಿರುತ್ತವೆ ಅಷ್ಟು ಸಂಮೃದ್ಧ ಸಾಹಿತ್ಯ ರಚನೆ ನಮ್ಮಲ್ಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
12 ನೇ ಶತಮಾನದಲ್ಲಿ ರಚನೆಯಾದ ವಚನ ಸಾಹಿತ್ಯದ ವ್ಯಾಪಕ ಪ್ರಸರಣಕ್ಕೆ ಹಾಗೂ ವಚನ ಸಾಹಿತ್ಯ ಜನ ಮಾನಸದಲ್ಲಿ ನೆಲೆ ನಿಲ್ಲಲಿಕ್ಕೆ ಫ.ಗು. ಹಳಕಟ್ಟಿ ರವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು. ಮಂಗಳವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಡಾ.ಫ.ಗು ಹಳಕಟ್ಟಿಯವರ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ, ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಶ್ರೀಮಂತ ಕನ್ನಡ ಸಾಹಿತ್ಯ
ಕನ್ನಡ ಸಾಹಿತ್ಯವು ಇಡೀ ವಿಶ್ವದಲ್ಲೇ ಅತ್ಯಂತ ಶ್ರಿಮಂತಿಕೆಯಿಂದ ಕೂಡಿರುವ ಸಾಹಿತ್ಯವಾಗಿದೆ. ಎಷ್ಟೇ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದಿದರು ಸಹ ಮತ್ತಷ್ಟು ಕಾವ್ಯ ಪುಸ್ತಕಗಳು ಬಾಕಿ ಉಳಿದಿರುತ್ತವೆ ಅಷ್ಟು ಸಂಮೃದ್ಧ ಸಾಹಿತ್ಯ ರಚನೆ ನಮ್ಮಲ್ಲಾಗಿದೆ. 12 ನೇ ಶತಮಾನದಲ್ಲಿ ಸುಮಾರು 209ಕ್ಕೂ ಹೆಚ್ಚು ವಚನಕಾರರು ಆಗಿನ ಕಾಲದಲ್ಲಿಯೇ ಸಮಾಜದ ಸ್ವಾಸ್ಥ್ಯಕ್ಕೆ ಬೇಕಾದಂತಹ ಎಲ್ಲ ಸಾಹಿತ್ಯಗಳ ಪ್ರಕಾರಗಳ ತಿರುಳನ್ನು ವಚನಗಳ ಮೂಲಕ ಸರಳ ಭಾಷೆಯಲ್ಲಿ ರಚನೆ ಮಾಡಿ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೊಡಿರಂಗಪ್ಪ ಮಾತನಾಡಿ, 12ನೇ ಶತಮಾನದ ನಂತರ ಕತ್ತಲೆಯಲ್ಲಿದ್ದ ವಚನ ಸಾಹಿತ್ಯದ ಮೆಟ್ಟಿಲುಗಳ ಮೇಲೆ ಹುಣ್ಣಿಮೆಯ ಚಂದಿರನಂತೆ ದಿವ್ಯ ಬೆಳಕು ಚೆಲ್ಲಿದ್ದು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು.ಈ ವೇಳೆ ಜಿಲ್ಲಾಧಿಕಾರಿಗಳು “ಚಿಕ್ಕಬಳ್ಳಾಪುರ ಜಿಲ್ಲಾ ಅಂಕಿ ಅಂಶಗಳ ನೋಟ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ಮನೀಷ್, ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ಧೇಶಕ ಜುಂಜಣ್ಣ, ಸಮುದಾಯ ಮುಖಂಡ ಪರಶು ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ವಿವಿಧ ಇಲಾಖಾ ಸಿಬ್ಬಂದಿ, ಸಮುದಾಯದ ಪದಾಧಿಕಾರಿಗಳು ಮಕ್ಕಳು ಇದ್ದರು.