ಮೀನುಗಾರರಿಗೆ ಸೌಲಭ್ಯಗಳ ವಿತರಿಸಿದ ಶಾಸಕ ಸಂಗಮೇಶ್ವರ

| Published : Mar 03 2025, 01:46 AM IST

ಮೀನುಗಾರರಿಗೆ ಸೌಲಭ್ಯಗಳ ವಿತರಿಸಿದ ಶಾಸಕ ಸಂಗಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ: ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ವೃತ್ತಿ ಚಟುವಟಿಕೆಗಳಿಗೆ ಪೂರಕ ಸೌಲಭ್ಯಗಳನ್ನು ಸುಮಾರು ೨೦ಕ್ಕೂ ಹೆಚ್ಚು ಫಲಾಭವಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಿ.ಕೆ. ಸಂಗಮೇಶ್ವರ್ ಶನಿವಾರ ವಿತರಿಸಿದರು.

ಮೀನುಗಾರರು ವೃತ್ತಿ ಚಟುವಟಿಕೆಗಳ ಸಂದರ್ಭದಲ್ಲಿ ಉಂಟಾಗಬಹುದಾದ ಅವಘಡಗಳಿಂದ ರಕ್ಷಿಸಿಕೊಳ್ಳಲು ಸುರಕ್ಷತಾ ಸಾಧನಗಳ ಕಿಟ್, ಬಲೆ ಕಿಟ್ ಹಾಗೂ ಸುಮಾರು ೧೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಫೈಬರ್ ತೆಪ್ಪಗಳನ್ನು ವಿತರಿಸಲಾಯಿತು.

ರಾಜ್ಯ ಸರ್ಕಾರ ಕಳೆದ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ತಕ್ಷಣ ₹೧೦ ಕೋಟಿ ಬಿಡುಗಡೆಗೊಳಿಸುವ ಮೂಲಕ ಕಾಮಗಾರಿ ಆರಂಭಿಸುವುದು, ಮೀನುಗಾರರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಸುಮಾರು ₹೨೨ ಕೋಟಿ ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಬೇಕೆಂದು ಸಂಗಮೇಶ್ವರ್‌ ಅವರಿಗೆ ಮೀನುಗಾರರ ಸಂಘದಿಂದ ಮನವಿ ಮಾಡಲಾಯಿತು.

ಭದ್ರಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ, ರಾಜ್ಯ ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಮುರುಗನ್, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕುಮಾರ್, ಮಾವಿನಕೆರೆ ಗ್ರಾಪಂ ಅಧ್ಯಕ್ಷ ಸುರೇಶ್, ಮುಖಂಡ ರಾಜ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.