ದಿಂಗಾಲೇಶ್ವರ ಶ್ರೀಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು ದಾಖಲು

| Published : Nov 24 2023, 01:30 AM IST

ದಿಂಗಾಲೇಶ್ವರ ಶ್ರೀಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಶಿರಹಟ್ಟಿಇತ್ತೀಚಿನ ದಿನಗಳಲ್ಲಿ ಪೂಜ್ಯರ, ರಾಜ್ಯಪಾಲರ, ಗಣ್ಯರ ತೇಜೋವಧೆ ಮಾಡಲು ಹಾಗೂ ದುಡ್ಡಿನ ದುರಾಸೆಗೆ ನಕಲಿ ಫೇಸ್ ಬುಕ್ ಖಾತೆ ತೆರೆದು ಅನುಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸುವ ಸುದ್ದಿ ಹೆಚ್ಚಾಗಿದ್ದು, ಇದೀಗ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳ ಹೆಸರಿನ ಫೇಕ್ ಐಡಿ ಫೇಸ್ ಬುಕ್ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರೀಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ವಿಡಿಯೋ ಹಾಕಿದವರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶ್ರೀಗಳ ಘನತೆಗೆ ಧಕ್ಕೆ ತರಲು ಅಶ್ಲೀಲ ವಿಡಿಯೋ ಪೋಸ್ಟ್

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಇತ್ತೀಚಿನ ದಿನಗಳಲ್ಲಿ ಪೂಜ್ಯರ, ರಾಜ್ಯಪಾಲರ, ಗಣ್ಯರ ತೇಜೋವಧೆ ಮಾಡಲು ಹಾಗೂ ದುಡ್ಡಿನ ದುರಾಸೆಗೆ ನಕಲಿ ಫೇಸ್ ಬುಕ್ ಖಾತೆ ತೆರೆದು ಅನುಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸುವ ಸುದ್ದಿ ಹೆಚ್ಚಾಗಿದ್ದು, ಇದೀಗ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳ ಹೆಸರಿನ ಫೇಕ್ ಐಡಿ ಫೇಸ್ ಬುಕ್ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರೀಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ವಿಡಿಯೋ ಹಾಕಿದವರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಠದ ಆಡಳಿತಾಧಿಕಾರಿ ಬಿ.ಎಸ್. ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿಂಗಾಲೇಶ್ವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಖದೀಮರು ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿರುವುದನ್ನು ಭಕ್ತರು ಶ್ರೀಗಳ ಗಮನಕ್ಕೆ ತಂದಿರುತ್ತಾರೆ. ಈ ಕೃತ್ಯ ಎಸಗಿದವರ ಮೇಲೆ ಈಗಾಗಲೆ ಶ್ರೀ ಮಠದಿಂದ ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.

ಫಕೀರ ದಿಂಗಾಲೇಶ್ವರ ಶ್ರೀಗಳ ಹೆಸರಿನಲ್ಲಿ ಮೂರು ಫೇಕ್ ಐಡಿ ಸೃಷ್ಟಿಸಲಾಗಿದೆ. ಅವುಗಳಲ್ಲಿ ಬರುವ ಸುದ್ದಿಗಳಿಗೂ ದಿಂಗಾಲೇಶ್ವರ ಶ್ರೀ ಮತ್ತು ಶ್ರೀ ಮಠಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಈವರೆಗೂ ದಿಂಗಾಲೇಶ್ವರ ಶ್ರೀಗಳು ಫೇಸ್ ಬುಕ್ ಖಾತೆ ಬಳಕೆ ಮಾಡಿರುವುದಿಲ್ಲ ಮತ್ತು ಇದುವರೆಗೂ ಯಾವುದೇ ಕಾರಣಕ್ಕೂ ಒಂದೇ ಒಂದು ಪೋಸ್ಟ್ ಮಾಡಿರುವುದಿಲ್ಲ. ಆದ್ದರಿಂದ ಮುಂದೆಯೂ ಕೂಡಾ ಈ ರೀತಿ ಸ್ವಾಮೀಜಿಗಳ ಮತ್ತು ಮಠದ ಹೆಸರನ್ನು ಬಳಸುವವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ, ಅಶ್ಲೀಲ ವಿಡಿಯೋ ಹರಿಬಿಡುತ್ತಿರುವುದಲ್ಲದೇ ಶ್ರೀಗಳ ಘನತೆಗೆ ಧಕ್ಕೆ ತರುವ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.