ಸಾರಾಂಶ
ಶಿರಹಟ್ಟಿಯ ಜಗದ್ಗುರು ಫಕೀರಸ್ವಾಮಿಗಳು ಭಾವೈಕ್ಯತೆಗೆ ಹೆಸರು ವಾಸಿಯಾಗಿದ್ದಾರೆ. ದ್ವೇಷ ಬಿಡು ಪ್ರೀತಿ ಮಾಡು ಎನ್ನುವ ಮಹತ್ತರ ಸಂದೇಶವನ್ನು ಸಾರಿದ ಮಹಾಂತರಾಗಿದ್ದಾರೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಜಾತ್ರಾ ಮಹೋತ್ಸವ ನಿಮಿತ್ತ ಫಕೀರೇಶ್ವರ ಪುರಾಣ ಪ್ರವಚನ
ಲಕ್ಷ್ಮೇಶ್ವರ:ಶಿರಹಟ್ಟಿಯ ಜಗದ್ಗುರು ಫಕೀರಸ್ವಾಮಿಗಳು ಭಾವೈಕ್ಯತೆಗೆ ಹೆಸರು ವಾಸಿಯಾಗಿದ್ದಾರೆ. ದ್ವೇಷ ಬಿಡು ಪ್ರೀತಿ ಮಾಡು ಎನ್ನುವ ಮಹತ್ತರ ಸಂದೇಶವನ್ನು ಸಾರಿದ ಮಹಾಂತರಾಗಿದ್ದಾರೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ಸಂಜೆ ಸಮೀಪದ ಹೂವಿನಶಿಗ್ಲಿಯ ವಿರಕ್ತಮಠದ 45ನೇ ಜಾತ್ರಾಮಹೋತ್ಸವ ಹಾಗೂ ಲಿಂ,ನಿರಂಜನ ಮಹಾಸ್ವಾಮಿಗಳ 14ನೇ ಪುಣ್ಯಾರಾಧನೆಯ ಅಂಗವಾಗಿ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸ್ವಾಮಿಗಳು ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸ್ವಾಮಿಗಳು ಭಗವಂತನ ಅವತಾರಿ ಪುರುಷರಾಗಿದ್ದರು. ಫಕೀರೇಶ್ವರ ಸ್ವಾಮಿಗಳು ಹಿಂದೂ ಮುಸ್ಲಿಂರೊಂದಿಗೆ ಸಾಮರಸ್ಯದ ಜೀವನ ಸಾಗಿಸಲು ಭಕ್ತರಿಗೆ ಕರೆ ನೀಡಿದ್ದು ವಿಶೇಷವಾಗಿದೆ. ದ್ವೇಷ ಬಿಡು ಪ್ರೀತಿ ಮಾಡು ಎನ್ನುವ ಸಂದೇಶವನ್ನು ಸಾರುವ ಮೂಲಕ ಹಿಂದೂ ಮುಸ್ಲಿಂರಲ್ಲಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದಾರೆ. ನಮ್ಮ ಮಠದಲ್ಲಿ ಫಕೀರ ಸ್ವಾಮಿಗಳ ಜೀವನ ಚರಿತ್ರೆಯ ಪುರಾಣವನ್ನು ಪ್ರತಿನಿತ್ಯ ಪಠಣ ನಡೆಯುತ್ತದೆ ಭಕ್ತರು ಶ್ರೀಗಳ ಜೀವನ ಚರಿತ್ರ ಆಲಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು ನಮ್ಮ ವಿರಕ್ತಮಠದ ಶ್ರೀನಿರಂಜನ ಸ್ವಾಮಿಗಳು ಹಾಕೊಕೊಟ್ಟಿರುವ ಮಾರ್ಗದಲ್ಲಿ ಶ್ರೀಮಠವನ್ನು ನಡೆಸಿಕೊಂಡು ಹೋಗುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಗವಿಸಿದ್ದೇಶ್ವರ ಶಾಸ್ತ್ರಿಗಳು ಪುರಾಣ ಪ್ರವಚನ ಮಾಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಗಡ್ಡೆಣ್ಣವರ, ಗ್ರಾಪಂ ಸದಸ್ಯ ಯಲ್ಲವ್ವ ಕುಂದಗೋಳ, ಗಿರಿಜವ್ವ ಗೋವನಾಳ, ನೀಲವ್ವ ಬಾನಗೊಂಡ, ನಿಂಗಪ್ಪ ಸೊರಟೂರ, ಸಂತೋಷ ಬುಗಡಿ, ಮುಕ್ತುಮಸಾಬ ಬೆಳವಡಿ, ಬಸವರಾಜ ಹಳೆಮನಿ, ರೇಣುಕಗೌಡ ಪಾಟೀಲ, ಪಿ.ಎಚ್. ಪಾಟೀಲ ಭಾಗವಹಿಸಿದ್ದರು. ಮಹಾದೇವಪ್ಪ ಬಿಷ್ಟಣ್ಣವರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.