ಪೋದಾರ್ ಇಂಟರ್ ನ್ಯಾಷನಲ್ ಶಾಲೆಗೆ ಫುಟ್ಬಾಲ್‌ ಆಟಗಾರ ಜೇಮಿ ನೈಟ್ ಭೇಟಿ

| Published : Nov 08 2023, 01:00 AM IST

ಪೋದಾರ್ ಇಂಟರ್ ನ್ಯಾಷನಲ್ ಶಾಲೆಗೆ ಫುಟ್ಬಾಲ್‌ ಆಟಗಾರ ಜೇಮಿ ನೈಟ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶೀಘ್ರದಲ್ಲಿಯೇ ಭಾರತ ಸಹ ಫುಟ್ಬಾಲ್ ವಿಶ್ವಕಪ್‍ನಲ್ಲಿ ಸ್ಪರ್ಧಿಸುವ ದಿನಗಳು ಬರಲಿವೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಟಾಪ್‌ ಫ್ರೀಸ್ಟೈಲ್‌ ಪುಟ್ಬಾಲ್‌ ಆಟಗಾರ ಜೇಮಿ ನೈಟ್ ಮಂಗಳವಾರ ಶಿವಮೊಗ್ಗದ ಪೋದಾರ್ ಇಂಟರ್‌ ನ್ಯಾಷನಲ್‌ ಶಾಲೆಗೆ ಭೇಟಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ಇಲ್ಲಿನ ವಿದ್ಯಾರ್ಥಿಗಳು ಇಷ್ಟೊಂದು ಉತ್ಸಾಹ, ಪ್ರತಿಭೆ ಮತ್ತು ಕ್ರೀಡೆ ಬಗ್ಗೆ ಪ್ರೇಮ ಹೊಂದಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಫುಟ್ಬಾಲ್‍ನಲ್ಲಿ ಭಾರತ ಜಾಗತಿಕ ಆಟಗಾರನಾಗದೇ ಇರಲು ಯಾವುದೇ ಕಾರಣವಿಲ್ಲ. ಶೀಘ್ರದಲ್ಲಿಯೇ ಭಾರತ ಸಹ ಫುಟ್ಬಾಲ್ ವಿಶ್ವಕಪ್‍ನಲ್ಲಿ ಸ್ಪರ್ಧಿಸುವ ದಿನಗಳು ಬರಲಿವೆ. ನಾನು ಇಲ್ಲಿಗೆ ಆಗಮಿಸಿರುವುದಕ್ಕೆ ಖುಷಿಯಾಗಿದೆ. ಶೀಘ್ರದಲ್ಲಿಯೇ ಮತ್ತೊಮ್ಮೆ ಆಗಮಿಸುವೆ ಎಂದು ತಿಳಿಸಿದರು.

ಈ ಸಂದರ್ಭ ಪೋದಾರ್ ಎಜ್ಯುಕೇಷನ್ ನೆಟ್‍ವರ್ಕ್ ನಿರ್ದೇಶಕ ಹರ್ಷ ಪೋದಾರ್ ಮಾತನಾಡಿ, ಜೇಮಿ ಅವರು ನಡೆಸಿಕೊಟ್ಟಂತಹ ಕಾರ್ಯಾಗಾರ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿದೆ. ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಾವುದೇ ಕಾರ್ಯಾಗಾರಗಳಲ್ಲಿ ಕಲಿಯುವುದನ್ನು ನಾವು ಬಯಸುತ್ತೇವೆ. ಇಂತಹ ಅವಕಾಶಗಳು ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ವೇದಿಕೆಯಾಗುತ್ತವೆ ಎಂದರು.

ಪೋದಾರ್ ಎಜ್ಯುಕೇಷನ್ ನೆಟ್‍ವರ್ಕ್ ದೇಶಾದ್ಯಂತ ವಾರ್ಷಿಕವಾಗಿ 2.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಪೋದಾರ್ ಎಜ್ಯುಕೇಷನ್ ನೆಟ್‍ವರ್ಕ್‍ನ ನಮ್ಮ ಶಾಲೆಗಳಲ್ಲಿ ಅಂತರ ರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದಿರುವ ಫುಟ್ಬಾಲ್ ಆಟಗಾರರಿಂದ ಇಂತಹ ಕಾರ್ಯಾಗಾರಗಳನ್ನು ಮುಂದುವರಿಸುತ್ತೇವೆ. ನಾವು ನಮ್ಮ ಶಾಲೆಗಳಲ್ಲಿ ಫುಟ್ಬಾಲ್ ತರಬೇತಿಗಾಗಿ ಪ್ರಸಿದ್ಧ ಯುರೋಪಿಯನ್ ಫುಟ್ಬಾಲ್ ಕ್ಲಬ್‍ಗಳ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.

- - - ಬಾಕ್ಸ್‌ ಫುಟ್ಬಾಲ್‍ನಲ್ಲಿ ಅದ್ಭುತ ನಿಯಂತ್ರಣಕ್ಕೆ ಜೇಮಿ ಹೆಸರುವಾಸಿ ವಿಶ್ವದ ಅಗ್ರ 10 ಫ್ರೀಸ್ಟೈಲ್ ಫುಟ್ಬಾಲ್‌ ಆಟಗಾರ ಆಗಿರುವ ಜೇಮಿ ನೈಟ್ ಅವರು ಶಿವಮೊಗ್ಗಕ್ಕೆ ಮೊದಲ ಬಾರಿ ಆಗಮಿಸಿದ್ದರು. ಕ್ರೀಡೆಗಳ ಕುರಿತು ಹೆಚ್ಚಿನ ಗಮನಹರಿಸುವ ಮತ್ತು ಅಂತರ ರಾಷ್ಟ್ರೀಯ ಆಟಗಾರರು, ತರಬೇತುದಾರರಿಂದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಪೋದಾರ್ ಎಜ್ಯುಕೇಷನ್ ನೆಟ್‍ವರ್ಕ್‍ನ ಉಪಕ್ರಮದ ಭಾಗವಾಗಿ ಜೇಮಿ ಭಾರತಕ್ಕೆ ಎರಡನೇ ಭೇಟಿ ನೀಡಿದ್ದರು.

ಜೇಮಿ ಅವರು ಫುಟ್ಬಾಲ್‍ನಲ್ಲಿ ಅದ್ಭುತ ನಿಯಂತ್ರಣದಿಂದಾಗಿ ಹೆಸರುವಾಸಿಯಾಗಿದ್ದಾರೆ. ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದಾರೆ. ಪ್ರಸಿದ್ಧ ಜಾಗತಿಕ ಬ್ರಾಂಡ್‍ಗಳ ಜತೆ ಸಹಭಾಗಿತ್ವ ಹೊಂದಿದ್ದಾರೆ. ಅವರು ಯುರೊ 2020ಗಾಗಿ ವಿಶ್ವ ಮಾಸ್ಕಾಟ್‍ನ ಪಾತ್ರವನ್ನು ನಿರ್ವಹಿಸಿದ್ದಾರೆ. 2017 ಮತ್ತು 2018ರ ಯುಇಎಫ್‍ಎ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪಿಚ್‍ನಲ್ಲಿ ಪ್ರದರ್ಶನ ನೀಡಿದ್ದಾರೆ. ಕ್ರೀಡೆಯಲ್ಲಿ ಅವರ ಸ್ಥಿರತೆ ಮತ್ತು ನಿಖರವಾದ ಹೊಡೆತಗಳು ಅವರಿಗೆ ಜಗತ್ತಿನಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ಅವರ ಕುರಿತು ವಿಶ್ವಖ್ಯಾತಿ ಪಡೆದಿರುವ ಫುಟ್ಬಾಲ್ ಆಟಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- - - -7ಎಸ್‌ಎಂಜಿಕೆಪಿ05: ಶಿವಮೊಗ್ಗದ ಪೋದಾರ್ ಇಂಟರ್‌ ನ್ಯಾಷನಲ್‌ ಶಾಲೆಗೆ ಭೇಟಿ ನೀಡಿದ್ದ ಟಾಪ್‌ ಫ್ರೀಸ್ಟೈಲ್‌ ಪುಟ್ಬಾಲ್‌ ಆಟಗಾರ ಜೇಮಿ ನೈಟ್ ಮಕ್ಕಳೊಂದಿಗೆ ಸಂವಾದ ನಡೆಸಿದರು.