ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಿ.ಎಸ್.ನಾಡಗೌಡ ಅವರ ಶ್ರಮ ಅಪಾರವಾಗಿದೆ. ಆದರೆ, ಸಚಿವ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡುತ್ತಿಲ್ಲ. ಇದು ನೋವಿನ ಸಂಗತಿಯಾಗಿದ್ದು, ಎರಡನೇ ಹಂತದಲ್ಲಿ ಸಚಿವ ಸ್ಥಾನ ಸಿಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರ ಹಿರೇಗೌಡರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಎಚ್ಚರಿಕೆಯನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಿ.ಎಸ್.ನಾಡಗೌಡ ಅವರ ಶ್ರಮ ಅಪಾರವಾಗಿದೆ. ಆದರೆ, ಸಚಿವ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡುತ್ತಿಲ್ಲ. ಇದು ನೋವಿನ ಸಂಗತಿಯಾಗಿದ್ದು, ಎರಡನೇ ಹಂತದಲ್ಲಿ ಸಚಿವ ಸ್ಥಾನ ಸಿಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರ ಹಿರೇಗೌಡರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಎಚ್ಚರಿಕೆಯನ್ನು ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಕಾಂಗ್ರೆಸ್‌ನ ಗಟ್ಟಿ ನೆಲೆಯಾಗಿದ್ದು, ದೇಶಮುಖ ಸೇರಿ ಇತರರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅದರಲ್ಲೂ ಸಿ.ಎಸ್.ನಾಡಗೌಡರು ಸ್ವಂತ ದೊಡ್ಡಪ್ಪರನ್ನೇ ವಿರೋಧಿಸಿ ಕಾಂಗ್ರೆಸ್ ಸೇರಿದವರು ನಾಡಗೌಡರು. ಇವರು ಬಂದ ನಂತರ ದೇವರಹಿಪ್ಪರಿ, ಮುದ್ದೇಬಿಹಾಳದಲ್ಲಿ ಕಾಂಗ್ರೆಸ್‌ಗೆ ಬಲ ಹೆಚ್ಚಿದೆ ಎಂದರು.ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿ ಸಿ.ಎಸ್.ನಾಡಗೌಡ ಅವರಿಗೆ ನಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು. ಇದೀಗ ಡಿ.ಕೆ.ಶಿವಕುಮಾರ ಸಿಎಂ ಆಗಿದ್ದಾರೆ. ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕರಾಗಿರುವ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕೆನ್ನುವುದು ನಮ್ಮ ಒತ್ತಾಯ. ಸಚಿವ ಎಂ.ಬಿ.ಪಾಟೀಲರು ಸಹಿತ ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುನಾಥ ತಾರನಾಳ ಮಾತನಾಡಿ, ಸಿ.ಎಸ್.ನಾಡಗೌಡ ಅವರು ಪಕ್ಷದಲ್ಲಿ ಹಿರಿಯರು. ಅವರಿಗೆ ಪಕ್ಷವೇ ಸಚಿವ ಸ್ಥಾನ ನೀಡಬೇಕಿತ್ತು. ನೀಡದಿರುವುದು ಖೇದಕರ ಸಂಗತಿ. ಕೇವಲ ಅಧ್ಯಕ್ಷ ಸ್ಥಾನ, ವಿಶೇಷ ಪ್ರತಿನಿಧಿಯನ್ನಾಗಿ ಮಾಡಿ ಅವರಿಗೆ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ನಾಡಗೌಡರು ಸಚಿವ ಸ್ಥಾನ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಸಿಎಂ ಶಿವಕುಮಾರ ಅವರು ಇದನ್ನು ಗಮನಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.ಬೆಂಗಳೂರಿಗೆ ಹೋಗೋಣ:
ಪಕ್ಷದಲ್ಲಿ ಒಂದೆರಡು ಬಾರಿ ಶಾಸಕರಾದವರು ಸಚಿವರಾಗುತ್ತಿದ್ದಾರೆ. ಆದರೆ, ನಮ್ಮ ನಾಡಗೌಡರು ಆರು ಬಾರಿ ಶಾಸಕರಾಗಿಯೂ ಸಚಿವ ಸ್ಥಾನ ದೊರೆಯುತ್ತಿಲ್ಲ. ಇದಕ್ಕೆ ನಾಡಗೌಡರ ಸೌಮ್ಯ ಸ್ವಭಾವವೇ ಕಾರಣ. ಅವರು ಎಂದಿಗೂ ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳೋದಿಲ್ಲ. ಹೀಗಾಗಿ, ಮುದ್ದೇಬಿಹಾಳ ಕ್ಷೇತ್ರದ ಅಭಿಮಾನಿಗಳು, ಮುಖಂಡರು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸೋಣ ಎಂದರು.ಈ ವೇಳೆ ಮುಖಂಡರಾದ ವೈ.ಎಚ್.ವಿಜಯಕರ, ಸಿ.ಜಿ.ವಿಜಯಕರ, ಸದ್ದಾಂ ಕುಂಟೋಜಿ, ಮಹಮ್ಮದರಫೀಕ ಶಿರೋಳ, ಲಕ್ಷ್ಮಣ ಲಮಾಣಿ, ರಾಜೇಂದ್ರಗೌಡ ರಾಯಗೊಂಡ, ರಾಯನಗೌಡ ತಾತರಡ್ಡಿ, ಮೈಬೂಬ ಗೊಳಸಂಗಿ, ಅಪ್ಪು ದೇಗಿನಾಳ, ಶರಣಬಸ್ಸು ಚಲವಾದಿ, ಅಕ್ಷತಾ ಚಲವಾದಿ, ತಿಪ್ಪಣ್ಣ ದೊಡಮನಿ, ಸರಸ್ವತಿ ಪಿರಾಪೂರ ಸೇರಿದಂತೆ ಹಲವರು ಇದ್ದರು.----ಬಾಕ್ಸ್ಸಾಮೂಹಿಕ ರಾಜೀನಾಮೆ ಎಚ್ಚರಿಕೆಶಾಸಕ ಸಿ.ಎಸ್.ನಾಡಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಪಕ್ಷದ ಕಷ್ಟದ ಕಾಲದಲ್ಲೂ ತ್ಯಾಗ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಗೌರವ ಸಲ್ಲುತ್ತದೆ. ಹಾಗಾಗಿ ಅವರಿಗೆ ಎರಡನೇ ಹಂತದಲ್ಲಾದರೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ನಾಡಗೌಡರ ರಾಜಕೀಯ ಜೀವನ ಶುದ್ಧ ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದೆ. ಗ್ರಾಮ ಮಟ್ಟದಿಂದಲೂ ಜನರು ಅವರ ಹೆಸರಿನಲ್ಲಿ ವಿಶ್ವಾಸ ಹೊಂದಿದ್ದಾರೆ. ಪಕ್ಷದ ಹೈಕಮಾಂಡ್ ಗಮನಿಸಿ ಸಚಿವ ಸ್ಥಾನ ನೀಡಬೇಕು. ಇದು ಕಾಂಗ್ರೆಸ್ ಪಕ್ಷದ ಬಲವರ್ದನೆಗೆ ಕಾರಣವಾಗುತ್ತದೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ದೊರಕದಿದ್ದಲ್ಲಿ ಮುದ್ದೇಬಿಹಾಳ ಕ್ಷೇತ್ರದ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುನಾಥ ತಾರನಾಳ ಹೇಳಿದರು.