ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಧರ್ಮೇಂದ್ರಗೆ ಬೀಳ್ಕೊಡುಗೆ ಸಮಾರಂಭ
Author : KannadaprabhaNewsNetwork
Published : Aug 20 2025, 02:00 AM IST
ಪಿ ಕೆ-1.ಶಿಕ್ಷಣ ಇಲಾಖೆಯಲ್ಲಿ 31ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ.ಹಿ.ಪ್ರಾ.ಶಾಲೆ ಪಡಿಯಾಣಿಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಕೆ.ಸಿ.ದಮೇಂದ್ರ ಇವರನ್ನು ಬೀಳ್ಕೊಡಲಾಯಿತು. | Kannada Prabha
Image Credit: KP
ಶಿಕ್ಷಣ ಇಲಾಖೆಯಲ್ಲಿ 31 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ..ಹಿ. ಪ್ರಾ. ಶಾಲೆ ಪಣಿಯಾಡಿಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಕೆ.ಸಿ. ಧರ್ಮೇಂದ್ರ ಅವರನ್ನು ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶಿಕ್ಷಣ ಇಲಾಖೆಯಲ್ಲಿ 31ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ.ಹಿ.ಪ್ರಾ.ಶಾಲೆ ಪಡಿಯಾಣಿಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಕೆ.ಸಿ. ಧರ್ಮೇಂದ್ರ ಇವರನ್ನು ಬೀಳ್ಕೊಡಲಾಯಿತು.
ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್.ಡಿ ಎಂ.ಸಿ., ವಿದ್ಯಾರ್ಥಿಗಳು, ಮಡಿಕೇರಿ ತಾಲೂಕಿನ ಶಿಕ್ಷಕರ ಸಂಘ, ಬಿ.ಆರ್.ಸಿ.ಇವರು ಕೆ.ಸಿ.ಧರ್ಮೇಂದ್ರ ದಂಪತಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ನಿವೃತ್ತಿ ಹೊಂದಿದ ಕೆ.ಸಿ.ಧರ್ಮೇಂದ್ರ ಶಾಲೆಗೆ ಮರದ ಕಪಾಟನ್ನು ಉದಾರವಾಗಿ ನೀಡಿದರು. ಸಮಾರಂಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಬೋಜಮ್ಮ, ಸಹ ಶಿಕ್ಷಕಿಯರಾದ ಕೆ.ಎ.ಹೇಮಮಾಲಿನಿ, ರಾಧಾ ಕೆ ಜೆ, ಬುಶೀರ ಕೆ ಎಂ, ನಿವೃತ್ತ ದೈಹಿಕ ಶಿಕ್ಷಕಿ ಎಂ ಬಿ ಭಾರತಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ ಮತ್ತು ಸದಸ್ಯರು, ಬಿ ಆರ್.ಸಿ ಮಂಜುಳಾ ಚಿತ್ರಾಪುರ, ಪ್ರಸಾದ್, ಎಸ್ ಡಿ ಎಂ ಸಿ ಪದಾಧಿಕಾರಿ ಸದಸ್ಯರು, ಶಿಕ್ಷಕರು, ಪೋಷಕರು ಹಾಜರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.