ಡಾ.ಶಶಿಧರ ನಾಡಗೌಡರಿಗೆ ಬೀಳ್ಕೊಡುಗೆ

| Published : Jul 03 2025, 12:32 AM IST

ಸಾರಾಂಶ

ಜಿಲ್ಲೆಯ ಪಶುವೈದ್ಯಕೀಯ ಸ್ಪೇಷಾಲಿಟಿ ಆಸ್ಪತ್ರೆಯ ಬೆಳಗಾವಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ೩೭ ವರ್ಷಗಳು ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಶಿಧರ ನಾಡಗೌಡ ಅವರಿಗೆ ಬುಧವಾರ ಸುಮಾರಿಗೆ ಡಾ.ಶಶಿಧರ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಆತ್ಮೀಯ ಸನ್ಮಾನ ಮಾಡುವ ಮೂಲಕ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

37 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಒಳ್ಳೆಯ ಕಾರ್ಯನಿರ್ವಹಿಸುವ ಮೂಲಕ ನಿವೃತ್ತಿ ಹೊಂದಿದ ಅಧಿಕಾರಿಗೆ ಪಶು ವೈದ್ಯಕೀಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಸನ್ಮಾನ ಮಾಡಲಾಯಿತು .ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಜಿಲ್ಲಾ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು. ಸಮಾರಂಭಕ್ಕೂ ಮುಂಚೆ ಡಾ.ನಾಡಗೌಡ ದಂಪತಿಯನ್ನು ಅದ್ಧೂರಿಯಾಗಿ ವಾದ್ಯ ವೃಂದದೊಂದಿಗೆ ಮೆರವಣಿಗೆಯ ಮೂಲಕ ಗೌರವ ಸಮರ್ಪಿಸಲಾಯಿತು.