- ಬಳ್ಳಾರಿ ಮುಖ್ಯ ಕಚೇರಿಗೆ ಹಿರಿಯ ವ್ಯವಸ್ಥಾಪಕರಾಗಿ ವರ್ಗಾವಣೆ

- - -

ದಾವಣಗೆರೆ: ತಾಲೂಕಿನ ಎಲೆಬೇತೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖಾ ವ್ಯವಸ್ಥಾಪಕ ರಾಹುಲ್ ದೇಶಪಾಂಡೆ ಅವರು ಬಳ್ಳಾರಿಯ ಮುಖ್ಯ ಕಚೇರಿಗೆ ಹಿರಿಯ ವ್ಯವಸ್ಥಾಪಕರಾಗಿ ವರ್ಗಾವಣೆಯಾದರು.

ರಾಹುಲ್ ದೇಶಪಾಂಡೆಯವರ 2 ವರ್ಷಗಳ ಸೇವಾವಧಿಯಲ್ಲಿ ಬೇತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಸಾಲ ಮರುಪಾವತಿ, ಠೇವಣಿ ಸಂಗ್ರಹ, ರೈತರಿಗೆ ಕೃಷಿಸಾಲ, ವಾಹನಸಾಲ, ಬಂಗಾರದ ಸಾಲ, ಗೃಹಸಾಲ, ಬಾಕಿ ಸಾಲ ವಸೂಲಾತಿ ಮತ್ತು ಮರುಸಾಲ ಕೊಡುವುದು ಹಾಗೂ ಅವರ ಉತ್ತಮ ಸೇವೆ ಕಾರ್ಯ ನಿರ್ವಹಣೆಗೆ ಬ್ಯಾಂಕಿಗೆ 5 ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಶನಿವಾರ ಬ್ಯಾಂಕಿಗೆ ಭೇಟಿ ನೀಡಿದ ದಾವಣಗೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಕೆ. ಗಿರಡ್ಡಿ ವರ್ಗಾವಣೆಗೊಂಡ ಬ್ಯಾಂಕಿನ ಬೇತೂರು ಶಾಖಾ ವ್ಯವಸ್ಥಾಪಕ ರಾಹುಲ್ ದೇಶಪಾಂಡೆ ಮತ್ತು ಸಿಬ್ಬಂದಿ ವರ್ಗದವರನ್ನು ಪಾರಿತೋಷಕ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


ಗ್ರಾಮದ ಗ್ರಾಮಸ್ಥರು ವರ್ಗಾವಣೆಗೊಂಡ ಬೇತೂರು ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಅಭಿನಂದಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಠದ ಬಸರಾಜಯ್ಯ, ಬಿ.ವಿರೂಪಾಕ್ಷಪ್ಪ, ಸಂಗನಗೌಡ್ರು, ಎಚ್.ಅಂಬಾಸಪ್ಪ, ಮಠದ ಸಿದ್ದಯ್ಯ, ಮರಕುಂಟಿ ಚಂದ್ರಪ್ಪ, ಬಿ.ಶಿವಕುಮಾರ್, ಬಿ.ವಿಶ್ವನಾಥ್, ಎಂ.ಷಡಕ್ಷರಪ್ಪ, ಹಂಚಿಮನಿ ಕರಿಬಸಪ್ಪ, ಬಿ.ಸಿ ನರೇಶ ಹಾಗೂ ಬ್ಯಾಂಕಿನ ಸಿಬ್ಬಂದಿ, ಗ್ರಾಹಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

- - -

-31ಕೆಡಿವಿಜಿ31: ದಾವಣಗೆರೆ ತಾಲೂಕಿನ ಎಲೆಬೇತೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರಾಹುಲ್ ದೇಶಪಾಂಡೆ ವರ್ಗಾವಣೆಗೊಂಡ ಹಿನ್ನೆಲೆ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.