ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಅಂಚೆ ಇಲಾಖೆಯಲ್ಲಿ ಅಂಚೆ ಪೇದೆಯಾಗಿ ಸುದೀರ್ಘ 25ವರ್ಷಗಳ ಸೇವೆಯಲ್ಲಿ ಅವರ ವಿರುದ್ಧ ಒಂದೂ ದೂರು ದಾಖಲಾಗಿಲ್ಲ ಮತ್ತು ಇಂದು ಅವರ ಬೀಳ್ಕೊಡುಗೆ ಸಮಾರಂಭಕ್ಕೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಕೀಲರು ಹಾಗೂ ಸಾರ್ವಜನಿಕರು ಅವರ ಕಾರ್ಯವನ್ನು ಶ್ಲಾಘಿಸಿ, ಅತ್ಮೀಯ ಶುಭ ಹಾರೈಕೆಯೂ ಧನಪಾಲ್ ಅವರ ಪ್ರಾಮಾಣಿಕತೆ, ಕರ್ತವ್ಯಕ್ಕೆ ನೀಡುತ್ತಿದ್ದ ಗೌರವ ಜತೆಗೆ ಅವರ ಬದ್ಧತೆಯ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಅಂಚೆ ನಿರೀಕ್ಷಕ ರಾಘವನ್ ಅಭಿಪ್ರಾಯ ವ್ಯಕ್ತಪಡಿಸಿ, ಧನಪಾಲ್ ಅವರಿಗೆ ಶುಭ ಕೋರಿದರು.
ಪಟ್ಟಣದ ಅಂಚೆ ಇಲಾಖೆಯಲ್ಲಿ ಅಂಚೆ ಪೇದೆ ಧನಪಾಲ್ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಧನಪಾಲ್ ನಿವೃತ್ತರಾಗಿದ್ದರೂ ಇಂದಿನ ಯುವಕರಿಗೆ ಮಾರ್ಗದರ್ಶಕರಾಗಿ, ಸೇವಾ ಸಮಯದಲ್ಲಿ ತೋರಬೇಕಾದ ಸಮರ್ಪಣೆ ಮನೋಭಾವದ ಬಗ್ಗೆ ತಿಳಿಸಿಕೊಟ್ಟಲ್ಲಿ ಬಹಳ ಸಹಕಾರಿಯಾಗಲಿದೆ ಎಂದರು.ಅಂಚೆಪಾಲಕ ಆನಂದ್, ಹಿರಿಯ ವಕೀಲ ರಾಮಪ್ರಸನ್ನ ಹಾಗೂ ಶೇಖರಪ್ಪ, ಶ್ರೀ ವಾಸವಾಂಬ ಕೋ. ಬ್ಯಾಂಕ್ ವಿರ್ದೇಶಕ ಹಾಗೂ ವಾಸವಿ ಕ್ಲಬ್ ಸದಸ್ಯ ಎಸ್.ಗೋಕುಲ್, ನಿ. ಅಂಚೆ ಪಾಲಕರಾದ ಸ್ವಾಮಿ ಹಾಗೂ ವೀರಭದ್ರಪ್ಪ, ಗೌತಮ್, ಇತರರು ಧನಪಾಲ್ ಸೇವಾ ಧಕ್ಷತೆಯನ್ನು ಪ್ರಶಂಸಿಸಿ ಮಾತನಾಡಿದರು. ಅಂಚೆ ಇಲಾಖೆಯ ಅಧಿಕಾರಿಗಳು, ನೌಕರರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಕೀಲರು, ಸಗಟು ಮಾರಾಟಗಾರರು, ಶ್ರೀ ವಾಸವಿ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಧನಪಾಲ್ ದಂಪತಿಗಳಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲ ತಾಂಬೂಲ ನೀಡಿ, ಆತ್ಮೀಯವಾಗಿ ಗೌರವಿಸಿ, ಬೀಳ್ಕೊಟ್ಟರು. ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ನೌಕರರಾದ ಗೌತಮ್, ಸುರೇಶ್, ಯಶೋಧ, ಸತೀಶ್, ಮಧು, ಯೋಗಾನಂದ, ಇತರರು ಉಪಸ್ಥಿತರಿದ್ದರು.