ನಿವೃತ್ತ ಶಿಕ್ಷಕ ಕುಮಾರ್‌ಗೆ ಬೀಳ್ಕೊಡುಗೆ

| Published : Jul 02 2025, 12:20 AM IST

ನಿವೃತ್ತ ಶಿಕ್ಷಕ ಕುಮಾರ್‌ಗೆ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಬ್ಬಗಳಲೆ ಶಾಲೆಯಲ್ಲಿ ಏರ್ಪಡಿಸಿದ್ದ ನಿವೃತ್ತ ಎಂ.ಬಿ. ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೇಶ್ ಕುಮಾರ್ ಉದ್ಘಾಟನೆ ಮಾಡಿದರು. ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಅವರು ನಿವೃತ್ತ ಶಿಕ್ಷಕ ಕುಮಾರ್ ಅವರನ್ನು ಗೌರವಿಸಿ ಮಾತನಾಡಿ, ಸರ್ಕಾರಿ ಶಾಲೆ- ಕಾಲೇಜುಗಳು ಉಳಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ ಮತ್ತು ಶಿವಶರಣರ ವಚನಗಳನ್ನು ಅಳವಡಿಸಿಕೊಂಡು ನಡೆಯಿರಿ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಬಬ್ಬಗಳಲೆ ಶಾಲೆಯಲ್ಲಿ ಏರ್ಪಡಿಸಿದ್ದ ನಿವೃತ್ತ ಎಂ.ಬಿ. ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೇಶ್ ಕುಮಾರ್ ಉದ್ಘಾಟನೆ ಮಾಡಿದರು.

ಮಲ್ಲಿಪಟ್ಟಣ ಹೋಬಳಿ ಬಬ್ಬಗಳಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಂ.ಬಿ. ಕುಮಾರ್ ಅವರು ವಯೋನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಮಾತನಾಡಿದ ಯೋಗೇಶ್‌, ಕುಮಾರ್ ಅವರು ತಮ್ಮ ವೃತ್ತಿಯನ್ನು ಅತ್ಯಂತ ಗೌರವದೊಂದಿಗೆ ಪೋಷಿಸಿದ್ದಾರೆ. ಅದರ ಫಲವೇ ಈ ಶಾಲೆ ಉತ್ತಮ ಪ್ರಗತಿಯಲ್ಲಿ ನಡೆದುಕೊಂಡು ಹೋಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಅವರು ನಿವೃತ್ತ ಶಿಕ್ಷಕ ಕುಮಾರ್ ಅವರನ್ನು ಗೌರವಿಸಿ ಮಾತನಾಡಿ, ಸರ್ಕಾರಿ ಶಾಲೆ- ಕಾಲೇಜುಗಳು ಉಳಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ ಮತ್ತು ಶಿವಶರಣರ ವಚನಗಳನ್ನು ಅಳವಡಿಸಿಕೊಂಡು ನಡೆಯಿರಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಸನ್ನ, ಇಸಿಒ ಶಿವಪ್ರಕಾಶ್, ರಾಷ್ಟ್ರ ಪ್ರಶಸ್ತಿ ವಿಜೇತ ಟಿ. ಮಲ್ಲೇಶ್, ನಿವೃತ್ತ ಮುಖ್ಯ ಶಿಕ್ಷಕರುಗಳಾದ ಚಂದ್ರೇಗೌಡರು, ಮಂಜಪ್ಪ, ಕೇಶವಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಪಾರ್ವತಮ್ಮ, ಮುಖಂಡರಾದ ಗಂಗಾಧರ್, ಈಶ್ವರ, ಶಶಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಎನ್. ಶಿವಕುಮಾರ್, ಶಿಕ್ಷಕಿ ಮಮತಾ, ಪುರೋಹಿತರಾದ ಹಾಲಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆಯವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. .