ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಎಸ್‌ಐಆರ್‌ ಕರಡು ಮತದಾರ ಪಟ್ಟಿಯಲ್ಲಿನ ಮತದಾರರ ಹೆಸರು ಡಿಲೀಟ್‌ಗೆ ಬಂಡಲ್‌ ಗಟ್ಟಲೇ ಫಾರಂ 7 ಮೂಲಕ ಆಕ್ಷೇಪಣೆ ಸಲ್ಲಿಕೆಯಾಗಿವೆ ಎನ್ನಲಾಗುತ್ತಿದೆ. ಆದರೆ, ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಕೇವಲ 113 ಫಾರಂ7 ಅಡಿ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ನೀಡಿದ್ದಾರೆ.

- ನಾಲ್ಕೈದು ಮಂದಿಯಿಂದ ಫಾರಂ 7 ಅಡಿ ಬರೋಬ್ಬರಿ 243 ಅರ್ಜಿ ಸಲ್ಲಿಕೆ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಎಸ್‌ಐಆರ್‌ ಕರಡು ಮತದಾರ ಪಟ್ಟಿಯಲ್ಲಿನ ಮತದಾರರ ಹೆಸರು ಡಿಲೀಟ್‌ಗೆ ಬಂಡಲ್‌ ಗಟ್ಟಲೇ ಫಾರಂ 7 ಮೂಲಕ ಆಕ್ಷೇಪಣೆ ಸಲ್ಲಿಕೆಯಾಗಿವೆ ಎನ್ನಲಾಗುತ್ತಿದೆ. ಆದರೆ, ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಕೇವಲ 113 ಫಾರಂ7 ಅಡಿ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ನೀಡಿದ್ದಾರೆ.

ಸದ್ಯ ರಾಜ್ಯದ ವಿವಿಧ ಜಿಲ್ಲೆ ಹಾಗೂ ದೇಶಾದ್ಯಂತ ಫಾರಂ 7 ಅಡಿ ಆಕ್ಷೇಪಣೆ ಸಲ್ಲಿಕೆ ಅರ್ಜಿಗಳಿಗೆ ಸಂಬಂಧಿಸಿದಂತೆ ತೀವ್ರ ಚರ್ಚೆ, ಸಂಘರ್ಷ ನಡೆಯುತ್ತಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಫಾರಂ 7 ಅರ್ಜಿ ಸಲ್ಲಿಕೆ ಕುರಿತು ಆರೋಪ, ಪ್ರತ್ಯಾರೋಪ ಕೇಳಿ ಬರುತ್ತಿವೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನಲ್ಲಿ ನಾಲ್ಕೈದು ಮಂದಿ ಫಾರಂ 7 ಅಡಿ ಬರೋಬ್ಬರಿ 243 ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಒಬ್ಬರು ತಾವು ಸಲ್ಲಿಕೆ ಮಾಡಿದ ಆಕ್ಷೇಪಣೆ ಪರಿಗಣಿಸಬೇಡಿ ಎಂದು ಟಾಪಲು ವಿಭಾಗದಲ್ಲಿ ಮನವಿ ಸಲ್ಲಿಸಿ ಪಡೆದ ದೃಢೀಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಅವಕಾಶ ನೀಡಿದೆ.

ಇದೇ ಮಾದರಿಯಲ್ಲಿ ಮೊಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಕ್ತಿಯೊಬ್ಬ ತನ್ನ ವಾರ್ಡ್‌ನ ಸುಮಾರು 20 ಮಂದಿ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದಾನೆ. ಪರಿಶೀಲನೆ ನಡೆಸಿದ ವೇಳೆ ಅದೇ ವಾರ್ಡ್‌ನಲ್ಲಿ ವಾಸವಿರುವ ಮತದಾರರ ಹೆಸರನ್ನು ದುರುದ್ದೇಶದಿಂದ ತೆಗೆಸುವುದಕ್ಕೆ ಹುನ್ನಾರ ನಡೆಸಲಾಗಿದೆ ಎಂಬ ಅಂಶ ಬೆಳೆಕಿಗೆ ಬಂದಿದೆ,

ಟಾಪಲ್‌ ವಿಭಾಗದಲ್ಲಿ ಆಕ್ಷೇಪಣೆ: ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳ ಟಪಾಲು ವಿಭಾಗದಲ್ಲಿ ಕರಡು ಮತದಾರ ಪಟ್ಟಿ ಮತದಾರರ ಹೆಸರು ಡಿಲೀಟ್‌ಗೆ ಸಂಬಂಧಿಸಿದಂತೆ ನೂರಾರು ಸಂಖ್ಯೆ ಫಾರಂ 7 ಸಲ್ಲಿಕೆಯಾಗಿವೆ. ಆದರೆ, ಬಹುತೇಕ ಅರ್ಜಿಗಳಲ್ಲಿ ಕೇವಲ ಫಾರಂ 7 ಅರ್ಜಿ ಮಾತ್ರ ಇದ್ದು, ಪೂರಕ ದಾಖಲೆಗಳು ಇಲ್ಲದಿರುವುದು ಮತ್ತು ದುರುದ್ದೇಶದಿಂದ ಫಾರಂ 7 ಅರ್ಜಿ ಸಲ್ಲಿಕೆ ಮಾಡುವುದು ಕಂಡು ಬಂದಿದೆ. ಹೀಗಾಗಿ, ಆ ಅರ್ಜಿ ಪರಿಗಣಿಸಿಲ್ಲ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಐವರ ಆಕ್ಷೇಪಣೆ ಅರ್ಜಿ ಸಲ್ಲಿಕೆ: ವಾಪಸ್‌ಗೆ ಒಬ್ಬರೇ ಮನವಿ:

ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ವ್ಯಾಪ್ತಿಯಲ್ಲಿ 243 ಮಂದಿ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕು ವಂತೆ ಐದು ಮಂದಿ 243 ಫಾರಂ 7 ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಆ ಎಲ್ಲ ಅರ್ಜಿಗಳನ್ನು ವಾಪಸ್‌ ಪಡೆಯುವುದಕ್ಕೆ ಬಿಜೆಪಿ ಕೊಪ್ಪ ಮಂಡದ ಅಧ್ಯಕ್ಷ ಎಚ್‌.ಕೆ.ದಿನೇಶ್‌ ಒಬ್ಬರೇ ಮನವಿ ಸಲ್ಲಿಸಿರುವುದು ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

--ಬಾಕ್ಸ್‌---

ಎಸ್‌ಐಆರ್‌ ಕರಡು ಬಗ್ಗೆ 113 ಆಕ್ಷೇಪಣೆ ವಿವರ (ಆ.24 ರಿಂದ ಸೆ.23)

ವಿಧಾನಸಭಾ ಕ್ಷೇತ್ರ ಆಕ್ಷೇಪಣೆ

ಶೃಂಗೇರಿ48

ಮೂಡಿಗೆರೆ19

ಚಿಕ್ಕಮಗಳೂರು17

ತರೀಕೆರೆ5

ಕಡೂರು24

ಒಟ್ಟು 113--ಬಾಕ್ಸ್‌--

ಆಯೋಗ ಗಂಭೀರವಾಗಿ ಪರಿಗಣಿಸಲಿ:ರಾಜೇಗೌಡ

ಕೊಪ್ಪದಲ್ಲಿ ನಕಲಿ ಸಹಿ ಮಾಡಿ ಮತದಾರರ ಹೆಸರು ತೆಗೆಯುವುದಕ್ಕೆ ಸಲ್ಲಿಕೆಯಾದ ಫಾರಂ 7 ಅರ್ಜಿಗಳ ಕುರಿತು ತನಿಖೆ ಆಗಬೇಕು. ಇನ್ನೂ ಎರಡನೇ ಹಂತದ ಚುನಾವಣಾ ವಿಭಾಗದ ಅಧಿಕಾರಿ ಸಿಬ್ಬಂದಿ ಬಳಕೆ ಮಾಡಿ ಎನ್‌ಆರ್‌ ಪುರದಲ್ಲಿ 1,334 ಫಾರಂ 7 ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಂಡ ಕುರಿತು ಸಹ ತನಿಖೆ ಆಗಬೇಕು. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಮತದಾರರ ಗುರಿಯಾಗಿಸಿಕೊಂಡು ಈ ರೀತಿ ಮಾಡಲಾಗಿದೆ. ಜನ ಸಾಮಾನ್ಯರೊಂದಿಗೆ ಬಿಎಲ್‌ಒ ಹೆಸರನ್ನು ಮತದಾರ ಪಟ್ಟಿಯಿಂದ ಡಿಲಿಟ್‌ಗೆ ತಂತ್ರ ಮಾಡಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.-- ಕೋಟ್‌--

ಜಿಲ್ಲೆಯಲ್ಲಿ ದುರುದ್ದೇಶ ಪೂರ್ವಕವಾಗಿ ಸಲ್ಲಿಕೆಯಾಗುವ ಫಾರಂ 7 ಬಗ್ಗೆ ಮಾಹಿತಿ ಇಲ್ಲ. ಆ ರೀತಿ ಸಲ್ಲಿಕೆಯಾಗಿದ್ದರೆ, ಸಂಬಂಧಪಟ್ಟ ಇಆರ್‌ಒಗಳು ಕ್ರಮ ಕೈಗೊಳ್ಳಲಿದ್ದಾರೆ.

- ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾ ಚುನಾವಣಾಧಿಕಾರಿ,

ಫೋಟೋ

ಕೊಪ್ಪದಲ್ಲಿ 243 ಫಾರಂ 7 ಅರ್ಜಿ ವಾಪಸ್‌ ಪಡೆಯುವುದಕ್ಕೆ ಸಲ್ಲಿಕೆಯಾದ ಅರ್ಜಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.