ಸಾರಾಂಶ
ಸುಳ್ಯ: ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದಕರಾಗಿ ಪ್ರಸಿದ್ದರಾಗಿದ್ದ, ಕೃಷಿಕ, ಮರ್ಕಂಜ ಗ್ರಾಮದ ತೋಟಚಾವಡಿ ನಾರಾಯಣ ನಾಯಕ್ ಎಂಬವರು ಅಡಕೆ ಹಳದಿ ರೋಗಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.ಪತ್ನಿ ಮಗಳ ಮನೆಗೆ ಹೋಗಿದ್ದ ಸಂದರ್ಭ ಈ ಘಟನೆ ನಡೆದಿದೆ.
ಭಾನುವಾರ ಮುಂಜಾನೆ ನಾರಾಯಣ ನಾಯಕ್ ತಮ್ಮ ಮನೆ ಬಾಗಿಲು ತೆರೆಯದ ಕಾರಣ, ಪಕ್ಕದ ಮನೆಯವರು ಬಂದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಬಗ್ಗೆ ಡೆತ್‌ನೋಟ್ ಲಭಿಸಿದ್ದು, ಅದರಲ್ಲಿ ಕಳೆದ ಕೆಲ ಸಮಯದಿಂದ ಅಡಕೆಗೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ರಬ್ಬರ್ ಇಳುವರಿ ಕುಂಠಿತವಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿಡಲಾಗಿದೆ.ಉತ್ತಮ ಕೃಷಿಕರಾಗಿದ್ದ ಅವರು, ಯಕ್ಷಗಾನದ ಮಹಿಳಾ ಚೆಂಡೆ ವಾದಕಿ, ಕಿರುತೆರೆ ನಟಿ ದಿವ್ಯಶ್ರೀ ನಾಯಕ್ ಸಹಿತ ಇಬ್ಬರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.ಮಂಗಳೂರಿನ ವಿವಿಧ ಕಡೆ ಮಾದಕ ವಸ್ತು ಸೇವನೆ ಆರೋಪ, ನಾಲ್ವರ ಸೆರೆ:
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು, ಕೆಎಸ್ಸಾರ್ಟಿಸಿ, ವಳಚಿಲ್ ಸಮೀಪ ಮಾದಕ ವಸ್ತುಸೇವನೆ ಆರೋಪದಲ್ಲಿ 4 ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಪ್ರಕರಣ 1: ಜ.17ರಂದು ಜೋಕಟ್ಟೆಕ್ರಾಸಿನ ಬಳಿ ಮಾದಕ ಅಮಲಿನಲ್ಲಿದಂತೆ ಕಂಡು ಬಂದ ಗುರುದೀಪ್ ಸಿಂಗ್ (23) ಮತ್ತು ರಾಹುಲ್ (24) ಎಂಬವರನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆ-1985ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪ್ರಕರಣ 2: ಜ.17ರಂದು ನಗರದ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಬಳಿ ವ್ಯಕ್ತಿಯೊಬ್ಬ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಸೆನ್ ಪೊಲೀಸರು ದಾಳಿ ನಡೆಸಿ ಅಜ್ಜಿನಡ್ಕ ಬದ್ರಿಯಾನಗರ ನಿವಾಸಿ ಕೆ.ಪಿ. ಹೈದರ್ ಆಲಿ ಮೊಹಮ್ಮದ್ (53) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಸೆನ್ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ 3: ನಗರದ ಹೊರವಲಯದ ವಳಚ್ಚಿಲ್ ಬಳಿ ಮಾದಕ ವಸ್ತು ಸೇವನೆ ಆರೋಪದಲ್ಲಿ ಅಡ್ಯಾರ್ ಮಸೀದಿ ಬಳಿ ನಿವಾಸಿ ಮಹಮ್ಮದ್ ಮನಾಜ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜ.17ರಂದು ಈತ ವಳಚಿಲ್ ಜಂಕ್ಷನ್ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡುತ್ತಿದ್ದ. ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೊಪಿ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.