ವಿದ್ಯುತ್ ತಗಲಿ ರೈತ ಸಾವು

| Published : Jul 20 2024, 12:45 AM IST

ಸಾರಾಂಶ

Farmer death by electric shock

ಹೊಸದುರ್ಗ: ಅಮೃತ್ ಮಹಲ್ ಕಾವಲಿನಲ್ಲಿ ದನಗಳನ್ನು ಹುಲ್ಲು ಮೇಯಿಸಲು ಹೋಗಿದ್ದ ರೈತನೋರ್ವನಿಗೆ ಆಕಸ್ಮಿಕ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಂಗಸಂದ್ರ- ಗೊಲ್ಲರಹಟ್ಟಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತ ರೈತನನ್ನು ಮಂಗಸಂದ್ರ ಗೊಲ್ಲರಹಟ್ಟಿ ಗ್ರಾಮದ ಶಿವಲಿಂಗಪ್ಪ (60)ಎಂದು ಗುರುತಿಸಲಾಗಿದೆ.

ಗೊಲ್ಲರಟ್ಟಿ ಗ್ರಾಮದ ಶಿವಲಿಂಗಪ್ಪ ಗುರುವಾರ ಮಧ್ಯಾಹ್ನ ಹಸುಗಳನ್ನು ಮೇಯಿಸಲು ಅಮೃತ ಮಹಲ್ ಕಾವಲಿಗೆ ಹೋಗಿದ್ದಾರೆ. ಅಮೃತ್ ಮಹಲ್ ಕಾವಲಿನಲ್ಲಿ ಕುಡಿವ ನೀರಿನ ಪಂಪ್ ಗೆ ಟಿಸಿ ಯಿಂದ ಅಳವಡಿಸಲಾಗಿದ್ದ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದೆ. ಇದನ್ನು ಗಮನಿಸದ ಶಿವಲಿಂಗಪ್ಪ ತಂತಿಯ ಮೇಲೆ ಕಾಲಿರಿಸಿದ್ದಾನೆ. ಆತನಿಗೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಜೆಯಾದರು ಮನೆಗೆ ವಾಪಸ್ ಬಾರದ ಶಿವಲಿಂಗಪ್ಪನನ್ನು ಆತನ ಮಗ ಸಂಜೆಯ ಹುಡುಕಾಡಿದ್ದಾರೆ ಆಗ ಪತ್ತೆಯಾಗಿಲ್ಲ. ಶುಕ್ರವಾರ ಬೆಳಗ್ಗೆ ಹಸು ಮೇಯಿಸಲು ಹೋದ ಜಾಗದಲ್ಲಿ ಹುಡುಕಾಡಿದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-----

ಫೋಟೋ, 19hsd3: ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಶಿವಲಿಂಗಪ್ಪ.