ಪೆರಂಪಳ್ಳಿಯಲ್ಲಿ ರೈತ ದಿನಾಚರಣೆ: ಸನ್ಮಾನ

| Published : Jan 03 2025, 12:31 AM IST

ಸಾರಾಂಶ

ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ಮತ್ತು ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ವಠಾರದಲ್ಲಿ ರೈತ ದಿನಾಚಾರಣೆ ಮತ್ತು ರೈತ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ಮತ್ತು ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ವಠಾರದಲ್ಲಿ ರೈತ ದಿನಾಚಾರಣೆ ಮತ್ತು ರೈತ ಸನ್ಮಾನ ಕಾರ್ಯಕ್ರಮ ನಡೆಯಿತು.ಪೆರಂಪಳ್ಳಿ ಫಾತಿಮಾ ಮಾತೆ ಚರ್ಚ್ ಧರ್ಮಗುರು ವಿಶಾಲ್ ಲೋಬೋ ಕಾರ್ಯಕ್ರಮ ಉದ್ಘಾಟಿಸಿ, ಯುವ ಜನತೆ ಕೃಷಿಯಲ್ಲಿ ತೊಡಗಿಕೊಂಡರೆ ಮಾತ್ರ ಕೃಷಿ ಉಳಿದೀತು ಎಂದು ತಿಳಿಸಿ ಶುಭಾಶಂಸನೆಗೈದರು.ಪೆರಂಪಳ್ಳಿ ವಲಯ ಕೃಷಿಕ ಸಂಘ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಪೆರಂಪಳ್ಳಿ ವಲಯದಲ್ಲಿ ಶೇಕಡವಾರು ಕೃಷಿ ಅಭಿವೃದ್ಧಿಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ನಗರಸಭೆ ಸದಸ್ಯೆ ಅನಿತಾ ಬೆಲಿಂಡ ಡಿಸೋಜ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ವಿಶ್ವನಾಥ ರೈ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಪೂಜಾ ನಾಯಕ್ ಎಂ., ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಸೆಂಚುರಿ ಫಾರ್ಮ್‌ನ ರಾಜಾರಾಮ್ ಭಟ್, ಎಡ್ಮೇರಿ ಬೊಬ್ಬರ್ಯ ದೈವಸ್ಥಾನ ಮೊಕ್ತೇಸರ ಶಶಿಧರ ರಾವ್ ಮತ್ತು ಹಿರಿಯ ಕೃಷಿಕ ಅಂತಪ್ಪ ಪೂಜಾರಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪೆರಂಪಳ್ಳಿಯ ಹಿರಿಯ ಪ್ರಗತಿಪರ ಕೃಷಿಕ ಪೀಟರ್ ಡಿಸೋಜ, ಕೋಟಿ ಪೂಜಾರಿ ಮತ್ತು ಲಿಯೋ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಹರಿಕೃಷ್ಣ ಶಿವತ್ತಾಯ, ಧರ್ಮಗುರುಗಳಾದ ಬ್ರಿಯಾನ್ ಅಂತೋನಿ ಡಿಸೋಜ, ಜ್ಯೂಲಿಯನ್ ದಾಂತಿ ಕಡೆಕಾರು, ಸುಧಾಕರ ಕೋಟ್ಯಾನ್, ತಾಂಗೋಡು ರಾಘವೇಂದ್ರ ಭಟ್, ಫೆಡ್ರಿಕ್ ಡಿಸೋಜ, ಶ್ರೀಧರ ನಾಯಕ್, ಪಾಂಡುರಂಗ ನಾಯಕ್, ಮಧುರಾ ನಾಯಕ್, ಹೆಲೆನ್ ಬ್ರಿಟ್ಟೋ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅರುಣಾ ಸುಧಾಮ, ಗೀತಾ, ಪ್ರೇಮ ಮತ್ತು ಹೇಮಾ ರೈತಗೀತೆ ಹಾಡಿದರು. ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಂದಿಸಿದರು.