ಕನ್ನಡಪ್ರಭ ವಾರ್ತೆ ರಾಮನಾಥಪುರ

ಈ ಹಿಂದೆ ನಾನು ಸಚಿವನಾಗಿದ್ದ ಸಮಯದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಸದುದ್ದೇಶದಿಂದ ಹಾಲಿಗೆ 5 ರುಪಾಯಿಗೆ ಸಹಾಯಧನ ಹೆಚ್ಚಿಸಿದ್ದಾಗಿ ಹೈನುಗಾರಿಕೆ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ತಿಳಿಸಿದರು. ರಾಮನಾಥಪುರ ಸಮೀಪವಿರುವ ವಿಜಾಪುರ ಅರಣ್ಯ ಹಾಗೂ ಬಿದಿರುಮಳೆಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರೈತರು ಕೃಷಿ ಬೆಳೆಯ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮನವಿ ಮಾಡಿದ ಅವರು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗಿತ್ತು. ಖಾಸಗಿ ಡೇರಿಗಳಿಗೆ ಅವಲಂಬಿತರಾಗದೆ ಸಹಕಾರ ಸಂಘದ ಡೇರಿಗಳಿಗೆ ಹಾಲು ಹಾಕುವ ಮುಖಾಂತರ ಸರ್ಕಾರದ ಸಹಾಯಧನ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿಗೆ ರಾಮನಾಥಪುರ, ಕೊಣನೂರು, ಹಾಗೂ ಹಳ್ಳಿಮೈಸೂರು ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆ ಈಗಾಗಲೇ‌ ನಡೆಸಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಾಂಧಿನಗರ ದಿವಾಕರ ಅವರನ್ನು ನೇಮಿಸಿದ್ದು, ಅರಕಲಗೂಡು ತಾಲೂಕು ಜೆಡಿಎಸ್ ಅಧ್ಯಕ್ಷರು ಹೊನ್ನವಳ್ಳಿ ಸತೀಶ್ ಹಾಗೂ ಹೊಳೆನರಸೀಪುರ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪುಟ್ಟಸೋಮಪ್ಪರವರ ಸಹಕಾರದೊಂದಿಗೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50,000ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರ ಸದಸ್ಯತ್ವವನ್ನು ನೊಂದಣಿ ಮಾಡುವಂತೆ ಮನವಿ ಮಾಡಿದರು, ಹಾಸನ ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗಾಗಿ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತ ಬಂಧುಗಳು ಪಕ್ಷವನ್ನು ಸದೃಢ ಮಾಡುವಂತೆ ಪಕ್ಷದ ಬಲವರ್ಧನೆ ಮಾಡುವಂತೆ ಮನವಿ ಮಾಡಿದರು, ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಸತೀಶ್, ಪುಟ್ಟಸೋಮಪ್ಪ ಮುಂತಾದವರು ಇದ್ದರು.