ಬೀರೂರು- ಪಂಚನಹಳ್ಳಿಯಲ್ಲಿ ಈಗಾಗಲೇ ರೈತರ ನೋಂದಣಿ ಆರಂಭಕನ್ನಡಪ್ರಭ ವಾರ್ತೆ, ಕಡೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.ಪಟ್ಟಣದ ಎಪಿಎಂಸಿ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಕಡೂರು , ಬೀರೂರು ಮತ್ತು ಪಂಚನಹಳ್ಳಿಯಲ್ಲಿ ಈಗಾಗಲೇ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಗೆ ರೈತರ ನೋಂದಣಿ ಆರಂಭವಾಗಿದೆ.ಅದರಂತೆ ನೋಂದಣಿ ಮತ್ತು ಖರೀದಿಗೆ ಸೀನಿಯಾರಿಟಿಗೆ ನೀಡುತ್ತಿರುವುದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೆ ಇದರಲ್ಲಿ ವರ್ತಕರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಶುಕ್ರವಾರ ರಾಗಿ ಖರೀದಿ ಕೇಂದ್ರವಿರುವ ಕಡೂರು ಎಪಿಎಂಸಿ ಮಾರ್ಕೇಟ್‌ ಗೆ ರೈತರು ಶುಕ್ರವಾರಕ್ಕೂ ಮುಂಚೆಯೇ ರಾಗಿ ತುಂಬಿ ಕೊಂಡು ಬಂದಿದ್ದು, ರೈತರಿಗೆ ನಿಗಧಿ ಪಡಿಸಿದ ದಿನಾಂಕ ಬರುವಂತೆ ಚೀಟಿ ನೀಡಿ ಸೂಚಿಸಲಾಗುತ್ತಿದೆ ಎನ್ನಲಾಗಿದೆ.ಆದರೆ ಖರೀದಿ ಕೇಂದ್ರ ದಲ್ಲಿ ಶುಕ್ರವಾರದ ದಿನವೇ ರಾಗಿ ತಂದಿದ್ದವರಿಗೆ ಚೀಟಿ ನೀಡಿದ್ದರಿಂದ ರೈತರು ಮತ್ತು ಅಧಿಕಾರಿಗಳ ನಡುವೆ ಈ ಜಟಾಪಟಿ ನಡೆದಿದೆ. ಅಲ್ಲದೆ ವರ್ತಕರು ಕೂಡ ರಾಗಿ ಖರೀದಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಮಾತನಾಡಿ, ವರ್ತಕರು ತಮ್ಮ ರಾಗಿಯನ್ನು ಕೊಡಲು ಹಸ್ತಕ್ಷೇಪ ಮಾಡುತ್ತಿ ದ್ದಾರೆಂದು ರೈತರು ಆರೋಪಿಸಿದ್ದರಿಂದ ರೈತರನ್ನು ಸಮಾಧಾನ ಪಡಿಸಲಾಯಿತು. ಯಾವುದೇ ಗೊಂದಲ ಆಗದಂತೆ ಸೋಮವಾರದಿಂದ ಸರಿಯಾಗಿ ಖರೀದಿಗೆ ಚೀಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.-- ಬಾಕ್ಸ್-- " ರೈತರು ಆತಂಕ ಪಡಬೇಕಿಲ್ಲ, ಕರೆ ಮಾಡಿದರೆ ಮಾತ್ರ ಬನ್ನಿʼ- ಖರೀದಿ ಅಧಿಕಾರಿಕಡೂರು: ರಾಗಿ ಖರೀದಿ ಕೇಂದ್ರದ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದು ಪ್ರಕ್ರಿಯೆಗೆ ಸಮಸ್ಯೆಯಾಗುವ ಜತೆಗೆ ರೈತರಿಗೂ ಕಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಖರೀದಿ ಕೇಂದ್ರದಿಂದ ಕರೆ ಬಾರದ ಹೊರತು ರೈತರು ರಾಗಿಯನ್ನು ತರಬಾರದು ಎಂದು ಕಡೂರು ಖರೀದಿ ಕೇಂದ್ರದ ಅಧಿಕಾರಿಗಳು ಮನವಿ ಮಾಡಿದ್ದಾರೆ.ಕಡೂರು ಎಪಿಎಂಸಿ ಆವರಣದಲ್ಲಿ ಎರಡು ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದು ಒಂದು ಕೇಂದ್ರದಲ್ಲಿ ದಿನಕ್ಕೆ ಅಂದಾಜು 20-25 ರೈತರಿಂದ ಮಾತ್ರ ಖರೀದಿ ಮಾಡಬಹುದು. ತಾಲೂಕಿನಲ್ಲಿ ಕಡೂರಿನಲ್ಲಿ 2, ಪಂಚನಹಳ್ಳಿಯಲ್ಲಿ 2 ಮತ್ತು ಬೀರೂರಿನಲ್ಲಿ 1 ರಾಗಿ ಖರೀದಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ನೋಂದಣಿ ಸಂದರ್ಭದಲ್ಲಿ ದಿನಾಂಕ ತಿಳಿಸಿದ್ದರೂ ಖರೀದಿ ಪ್ರಾರಂಭಿಸಿದ್ದು ತಡವಾಗಿರುವುದರಿಂದ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುವುದು. ರೈತರು ಆತಂಕ ಪಡದೆ ತಾಳ್ಮೆಯಿಂದ ಇರಬೇಕು. ಅನಗತ್ಯವಾಗಿ ಖರೀದಿ ಕೇಂದ್ರಕ್ಕೆ ಬಂದು ಗೊಂದಲ ಉಂಟುಮಾಡಬಾರದು ಎಂದು ನೋಡಲ್‌ ಅಧಿಕಾರಿ ಮಹೇಂದ್ರ15ಕೆಕೆಡಿಯು3. ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ತುಂಬಿರುವ ಟ್ರಾಕ್ಟರ್ ಗಳು.

ಸುದ್ದಿ 3ರ ಫೋಟೋ. 15ಕೆಕೆಡಿಯು3.