ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಆದರೆ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋದರೆ ಗುಬ್ಬಿ, ತುರುವೇಕೆರೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ತೊಂದರೆಯಾಗುತ್ತದೆ ಎಂದು ರೈತರ ಸಂಘದ ಅಧ್ಯಕ್ಷ ಕೆ. ಎನ್. ವೆಂಕಟೇಗೌಡ ತಿಳಿಸಿದರು. ತಾಲೂಕಿನ ಕಡಬ ಹೋಬಳಿ ಗಂಗಸಂದ್ರ ವ್ಯಾಪ್ತಿಯ ಭಾಗದಲ್ಲಿ ಈಗಾಗಲೇ ಹೇಮಾವತಿ ನಾಲೆಯ ಕಾಮಗಾರಿ ನಡೆಯುತ್ತಿದ್ದು ರೈತರು ಹಾಗೂ ಗ್ರಾಮದ ಜನರು ಬೈಕ್ ರಾಲಿ ಮೂಲಕ ಪ್ರತಿಭಟನೆ ನಡೆಸಿ ಸಂದರ್ಭದಲ್ಲಿ ಮಾತನಾಡಿ, ಕಳೆದ ಆರೇಳು ತಿಂಗಳಿನಿಂದ ಹಠಕ್ಕೆ ಬಿದ್ದಿರುವ ಸರ್ಕಾರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ನಾಲೆಯ ಮೂಲಕ ಬೆಂಗಳೂರು ಗ್ರಾಮಾಂತರದ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗೆ ಹೋಗುತ್ತಿವೆಂದು ಹಠ ಹಿಡಿದಂತೆ ಭಾಸವಾಗುತ್ತಿದೆ, ರೈತರು ಗಲಾಟೆ ಮಾಡಿದ ಕೆಲವು ತಿಂಗಳು ಕಾಮಗಾರಿ ನಿಲ್ಲಿಸುವುದು ನಂತರ ಪ್ರಾರಂಭ ಮಾಡುವುದು ಹೀಗೆ ಆಗುತ್ತಿದ್ದು ಗುತ್ತಿಗೆದಾರರು ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೇಮಾವತಿ ಲಿಂಕ್ ಕೆನಾಲ್ ಹೇಳಿಕೊಂಡು ಗುಬ್ಬಿ, ತಿಪಟೂರು, ಸಿರಾ, ಕೊರಟಗೆರೆ, ತುರುವೇಕೆರೆ ಹಾಗೂ ತುಮಕೂರು ಈ ಭಾಗದ ಶಾಸಕರು ಗೆಲ್ಲುತ್ತಾ ಬರುತ್ತಿದ್ದಾರೆ ಎಂದರು.ಬಿಜೆಪಿ ಮುಖಂಡ ಎಸ್. ಡಿ .ದಿಲೀಪ್ ಕುಮಾರ್ ಮಾತನಾಡಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಂದಿರುವಂತಹ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಪಡೆಯದೆ ಕೆಲಸ ಮಾಡಲು ಬಂದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.ಪಂಚಾಯಿತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳನ್ನು ಮಾಡಬೇಕು ಎಂದರೆ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆಯಲೇಬೇಕು ಎಂಬುದು ಅಧಿಕಾರಿಗಳಿಗೆ ತಿಳಿದಿಲ್ಲ ಅನಿಸುತ್ತದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿರುವ ಪ್ರದೇಶಗಳಲ್ಲಿ ಗ್ರಾಮ ಸಭೆಯನ್ನು ನಡೆಸಬೇಕು. ಗ್ರಾಮ ಸಭೆಯಲ್ಲಿ ರೈತರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಅನುಮೋದನೆಯನ್ನು ಪಡೆದುಕೊಳ್ಳದ ಹೊರತು ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ಅಧಿಕಾರಿಗಳು ಕಾಮಗಾರಿ ನಡೆಸಲು ಮುಂದದಲ್ಲಿ ಕಾನೂನು ಉಲ್ಲಂಘನೆಯಾಗುವುದು ಎಲ್ಲಾ ರೈತರು ಕಾನೂನು ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಚೆನ್ನಬಸವಣ್ಣ ,ಸಿ.ಜಿ. ಲೋಕೇಶ್. ಮಂಜುನಾಥ್, ಶಿವಕುಮಾರ್ ,ಸತೀಶ್ ,ಮಾಹದೆಣ್ಣ, ಯೆತೀಶ್, ನರಸಿಂಹಮೂರ್ತಿ ,ಜಟ್ಟಿ ಬಸವರಾಜು ,ಎ .ಎಸ್. ಬಸವರಾಜು. ತಾಲೂಕು ಎಲ್ಲ ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.