ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಬಬಲೇಶ್ವರ ತಾಲೂಕಿನ ಹೊನವಾಡ ಗ್ರಾಮದ 89ಕ್ಕೂ ಹೆಚ್ಚು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಣೆ ಮಾಡುತ್ತಿರುವುದರಿಂದ ಆಗುತ್ತಿರುವ ಅನ್ಯಾಯಕ್ಕೆ, ನ್ಯಾಯ ಕಲ್ಪಿಸುವಂತೆ ಕೋರಿ ರೈತರು ತಮ್ಮ ದಾಖಲೆಗಳೊಂದಿಗೆ ನಗರ ಶಾಸಕರ ಸಾರ್ವಜನಿಕರ ಸಂಪರ್ಕ ಕಾರ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹೊನವಾಡ ಗ್ರಾಮದ ನಿವಾಸಿಗಳು ನಾಲ್ಕೈದು ತಲೆಮಾರುಗಳಿಂದ ಸಾಗುವಳಿ ಮಾಡುತ್ತ ಬಂದಿರುವ ಸುಮಾರು 1151 ಎಕರೆ ಜಮೀನನ್ನು ವಕ್ಫ್ ಆಸ್ತಿ ಎಂದು ದಾಖಲು ಮಾಡುವ ಹುನ್ನಾರ ನಡೆಸಿರುವುದನ್ನು ಖಂಡಿಸಿದ್ದಾರೆ.ಸದರಿ ಜಮೀನುಗಳ ಪಹಣಿ ಮತ್ತು ಇನ್ನಿತರ ದಾಖಲಾತಿಗಳಲ್ಲಿ ನಮ್ಮ ಹೆಸರು ದಾಖಲಿದೆ. ಹೀಗಿದ್ದರೂ ಸಹ ಜಿಲ್ಲಾ ವಕ್ಫ್ ಸಂಸ್ಥೆಯವರು ಹಾಗೂ ಅಧಿಕಾರಿಗಳು ಎಲ್ಲವೂ ವಕ್ಫ್ ಆಸ್ತಿಗಳಿದ್ದು, ಕಬ್ಜೆಯಿಂದ ಹೊರ ಹಾಕುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದರ ಹಿಂದೆ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಕುಮ್ಮಕ್ಕು ಇರುತ್ತದೆ. ಇತ್ತೀಚೆಗೆ ನಗರದಲ್ಲಿ ನಡೆದ ಅದಾಲತ್ ಸಭೆಯಲ್ಲಿ ವಕ್ಫ್ ಸಚಿವರ ಮೌಖಿಕ ಆದೇಶದಂತೆ ರೈತರಿಗೆ ಕಾನೂನು ಬಾಹಿರವಾಗಿ ನೋಟಿಸ್ ನೀಡಲಾಗುತ್ತಿದೆ. ಕೂಡಲೇ ತಾವು ಮಧ್ಯ ಪ್ರವೇಶಿಸಿ, ರೈತರಿಗೆ ನ್ಯಾಯ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ