ಹಾಲಿನ ಬೆಲೆ ಇಳಿಕೆ ಖಂಡಿಸಿ ರೈತರ ಆಕ್ರೋಶ

| Published : Nov 25 2023, 01:15 AM IST

ಹಾಲಿನ ಬೆಲೆ ಇಳಿಕೆ ಖಂಡಿಸಿ ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಹಾಲಿನ ಬೆಲೆ ಇಳಿಕೆ ಖಂಡಿಸಿ ಬೆಂಗಳೂರಿನ ಹಾಲು ಒಕ್ಕೂಟದ ಕೇಂದ್ರ ಕಚೇರಿಗೆ ಶುಕ್ರವಾರ ತಾಲೂಕಿನಿಂದ ನೂರಾರು ಜನ ರೈತರು ಹೊರಟರು.

ದೊಡ್ಡಬಳ್ಳಾಪುರ: ಹಾಲಿನ ಬೆಲೆ ಇಳಿಕೆ ಖಂಡಿಸಿ ಬೆಂಗಳೂರಿನ ಹಾಲು ಒಕ್ಕೂಟದ ಕೇಂದ್ರ ಕಚೇರಿಗೆ ಶುಕ್ರವಾರ ತಾಲೂಕಿನಿಂದ ನೂರಾರು ಜನ ರೈತರು ಹೊರಟರು.

ಈ ಸಂದರ್ಭದಲ್ಲಿ ಹೋರಾಟಕ್ಕೆ ಹೊರಟಿದ್ದ ವಾಹನಗಳಿಗೆ ಹಸಿರು ನಿಶಾನೆ ತೋರಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಕೆ.ಸುಲೋಚನಮ್ಮ,ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಆರ್.ಸತೀಶ್ ಮಾತನಾಡಿ, ತೀವ್ರ ಬರದಿಂದ ತತ್ತರಿಸಿರುವ ರೈತರು ಬೇಸಿಗೆಯಲ್ಲಿ ಕುಡಿಯುವ ನೀರು, ಜಾನವಾರುಗಳ ಮೇವಿನ ಸಮಸ್ಯೆಯನ್ನು ಎದುರಿಸುವುದು ಹೇಗೆ ಎನ್ನುವಂತಾಗಿದೆ. ಇಂತಹ ಕಷ್ಟದ ದಿನಗಳಲ್ಲಿ ಬೆಂಗಳೂರು ಹಾಲು ಒಕ್ಕೂಟ ದಿಢೀರನೆ ರೈತರು ಸರಬರಾಜು ಮಾಡುವ ಹಾಲಿನ ಬೆಲೆಯನ್ನು ಇಳಿಕೆ ಮಾಡಿರುವುದು ಖಂಡನೀಯ. ಬರದ ಸಮಯದಲ್ಲಿ ರೈತರ ಹಿತಕಾಯಬೇಕಿರುವ ಒಕ್ಕೂಟವು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಒಕ್ಕೂಟದ ಈ ರೈತರ ವಿರೋಧಿ ನೀತಿಯನ್ನು ಖಂಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಒಕ್ಕೂಟದ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನೂರಾರು ವಾಹನಗಳಲ್ಲಿ ತೆರಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸಿಕೊಂಡೇ ಬರುತ್ತೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಮುತ್ತೇಗೌಡ, ಶಿರವಾರರವಿ, ನಾರಾಯಣಸ್ವಾಮಿ, ಹನುಮಂತರಾಯಪ್ಪ, ಹಾಲು ಉತ್ಪಾದಕರ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ರವೀಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ದೇವರಾಜು ಹಾಗೂ ತಾಲೂಕಿನ ಎಲ್ಲಾ ಹಾಲಿನ ಡೇರಿಗಳ ಕಾರ್ಯನಿರ್ವಾಹಕರು ಇದ್ದರು.

24ಕೆಡಿಬಿಪಿ4-

ಹಾಲಿನ ಬೆಲೆ ಇಳಿಕೆ ಖಂಡಿಸಿ ಬೆಂಗಳೂರಿನ ಹಾಲು ಒಕ್ಕೂಟದ ಕೇಂದ್ರ ಕಚೇರಿಗೆ ದೊಡ್ಡಬಳ್ಳಾಪುರ ತಾಲೂಕಿನಿಂದ ನೂರಾರು ರೈತರು ಹೊರಟರು.